ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಕೆರೆ ಮನೆಯ ನಿವಾಸಿ 12 ವರ್ಷದ ಬಾಲಕ ಚರಣ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಈತನನ್ನು ಸಾಗರ ಆಸ್ಪತ್ರೆಯಿಂದ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಲ್ಲಿ ಬಾಲಕ ಚರಣ್ಗೆ ಕಿಡ್ನಿ ಸಮಸ್ಯೆ ಇರುವುದು ತಿಳಿದು ಬಂದಿದೆ. ನಂತರ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಚರಣ್ ಮೃತಪಟ್ಟಿದ್ದಾನೆ.
ಬಾಲಕನ ತಂದೆ ಲೋಕಪ್ಪ ಆಂಧ್ರದಲ್ಲಿ ಬೇಕರಿಯ ಕೆಲಸಕ್ಕೆಂದು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಶಿವಮೊಗ್ಗದಲ್ಲಿ ಬಾಲಕ ಚರಣ್ ಮೃತಪಟ್ಟಿದ್ದಾನೆ. ಲಾಕ್ಡೌನ್ನಿಂದಾಗಿ ತಂದೆ ಅಲ್ಲಿಯೇ ಇರುವಂತಾಗಿದೆ. ಮನೆಯವರು ಅವರಿಗೆ ಮಗ ಚರಣ್ ಮೃತ ಪಟ್ಟಿರುವ ವಿಷಯವನ್ನು ತಿಳಿಸಿಲ್ಲ. ಮಗ ಮೃತಪಟ್ಟಿರುವ ವಿಚಾರವನ್ನು ತಿಳಿಸದೇ ಅಪ್ಪನನ್ನು ಇಲ್ಲಿಗೆ ಕರೆಸಿಕೊಳ್ಳಬೇಕಿದೆ. ಇದಕ್ಕೆ ಜಿಲ್ಲಾಡಳಿತ ಸಹಾಯ ಮಾಡಬೇಕಿದೆ ಎಂದು ಮೃತನ ದೊಡ್ಡಮ್ಮನ ಮಗ ಲೋಹಿತ್ ಮನವಿ ಮಾಡಿದ್ದಾರೆ.
ಚರಣ್ಗೆ ಡಯಾಲಿಸಿಸ್ ಮಾಡಿ, ಎಷ್ಟೇ ಪ್ರಯತ್ನಪಟ್ಟರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವೈದ್ಯ ಡಾ.ದಯಾನಂದ್ ತಿಳಿಸಿದ್ದಾರೆ.