ETV Bharat / state

ತಾಕತ್ತಿದ್ದರೆ ಬಜರಂಗದಳ ಬ್ಯಾನ್​ ಮಾಡಿ : ಕಾಂಗ್ರೆಸ್​ಗೆ ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್​ ಗೌಡ ಸವಾಲ್​ - ಈಟಿವಿ ಭಾರತ ಕನ್ನಡ

ತಾಕತ್ತಿದ್ದರೆ ಬಜರಂಗದಳವನ್ನು ನಿಷೇಧ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯಗೆ ಬಜರಂಗದಳ ಸವಾಲೆಸೆದಿದೆ.

bajarngadal-slams-congress-on-bajarang-dal-ban
ತಾಕತ್ತಿದ್ದರೆ ಬಜರಂಗದಳವನ್ನು ಬ್ಯಾನ್​ ಮಾಡಿ : ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್​ ಗೌಡ
author img

By

Published : May 3, 2023, 4:08 PM IST

ತಾಕತ್ತಿದ್ದರೆ ಬಜರಂಗದಳವನ್ನು ಬ್ಯಾನ್​ ಮಾಡಿ : ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್​ ಗೌಡ

ಶಿವಮೊಗ್ಗ: ತಾಕತ್ ಇದ್ದರೆ ಬಜರಂಗದಳವನ್ನು ನಿಷೇಧ ಮಾಡಿ ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ರಾಜೇಶ್ ಗೌಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ​ಅವರಿಗೆ ಸವಾಲೆಸೆದಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್​ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪಿಎಫ್​ಐ ಮತ್ತು ಬಜರಂಗದಳವನ್ನು ನಿಷೇಧ ಮಾಡುವುದಾಗಿ ಹೇಳಿದ್ದಾರೆ. ಬಜರಂಗದಳವನ್ನು ಬಳಸಿಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ.​ಕಾಂಗ್ರೆಸ್​ನವರಿಗೆ ಬಜರಂಗ ದಳದ ಬಗ್ಗೆ ಏನೂ ಗೊತ್ತಿಲ್ಲ. ಹಾಗಾಗಿ ಬಜರಂಗದಳವನ್ನು ನಿಷೇಧ ಮಾಡುವುದಾಗಿ ಹೇಳುತ್ತಿದ್ದಾರೆ. ಪಿಎಫ್​​ಐನಂತಹ ಭಯೋತ್ಪಾದಕ ಸಂಘಟನೆಯೊಂದಿಗೆ ರಾಷ್ಟ್ರೀಯವಾದಿ ಸಂಘಟನೆಯಾಗಿರುವ ಬಜರಂಗದಳವನ್ನು ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.

ಬಜರಂಗದಳ ರಾಷ್ಟ್ರೀಯತೆ ಪರ ಇದೆ : ಬಜರಂಗದಳವು ಲವ್ ಜಿಹಾದ್, ಮತಾಂತರ, ಗೋ ಹತ್ಯೆ ವಿರುದ್ಧ ಹೋರಾಟ ಮಾಡುತ್ತಿದೆ. ನಮ್ಮ ಉದ್ದೇಶ ದೇಶ ರಕ್ಷಣೆ ಮಾಡುತ್ತಿರುವುದು. ಹಿಂದೆ ಶ್ರೀರಾಮನ ಅಸ್ಮಿತೆಯನ್ನು ಉಳಿಸಲು ಆಂಜನೇಯ ಕೆಲಸ ಮಾಡಿದ್ದ, ಇಂದು ದೇಶದ ರಕ್ಷಣೆಯಲ್ಲಿ ಬಜರಂಗದಳ ತೊಡಗಿಸಿಕೊಂಡಿದೆ ಎಂದು ಹೇಳಿದರು. ಬಜರಂಗದಳ ಯಾವತ್ತು ಒಂದು ರಾಜಕೀಯ ಪಕ್ಷಕ್ಕೆ ಬೆಂಬಲ‌ ನೀಡಿಲ್ಲ. ಆದರೆ ನಮ್ಮಲ್ಲಿ ಈಗ ಒಂದು ಕರೆ ನೀಡಿದ್ದಾರೆ. ಇದರಿಂದ ನಮ್ಮ ಸಂಘಟನೆಯವರು ಪ್ರತಿ ಮನೆ ಮನೆಗೆ ಹೋಗಿ ಕಾಂಗ್ರೆಸ್ ಗೆ ಮತ ಹಾಕಬೇಡಿ ಎಂದು ಮನವಿ ಮಾಡಲಿದ್ದೇವೆ ಎಂದರು.

ಬಿಜೆಪಿಯು ರಾಷ್ಟ್ರೀಯತೆಯನ್ನು ಉಳಿಸಿಕೊಂಡಿದೆ. ಇದರಿಂದ ಬಿಜೆಪಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡುತ್ತಿದ್ದೇವೆ. ಗೋಹತ್ಯೆ ಮಾಡುವವರು ಬಿಜೆಪಿಯವರೇ ಆಗಲಿ, ಯಾರೇ ಆಗಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇವೆ. ನಮ್ಮ ಉದ್ದೇಶ ರಾಷ್ಟ್ರೀಯತೆಯನ್ನು ಉಳಿಸುವುದಾಗಿದೆ ಎಂದರು. ಈ ವೇಳೆ ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಂಗ್ರೆಸ್​ ಬಜರಂಗದಳ ಬ್ಯಾನ್​ ಮಾಡುವ ವಿಚಾರ ಸಂಬಂಧ ರಾಜ್ಯದೆಲ್ಲೆಡೆ ವಿರೋಧ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿ ವಿವಿಧ ಬಿಜೆಪಿ ನಾಯಕರು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್​ ತಿರುಕನ ಕನಸು ಕಾಣುತ್ತಿದೆ : ಕಾಂಗ್ರೆಸ್‌ ಸ್ಥಿತಿ ವಿನಾಶ ಕಾಲದಲ್ಲಿ ವಿಪರೀತ ಬುದ್ಧಿ ಎಂಬಂತಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಆದರೂ ಕನಸು ಕಾಣುತ್ತಿದೆ. ಅಲ್ಲದೆ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧ ಮಾಡುತ್ತೇವೆ ಎಂದಿರುವುದು ತಿರುಕನ ಕನಸು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ತಾಕತ್ತಿದ್ದರೆ ಬಜರಂಗದಳ ಬ್ಯಾನ್​ ಮಾಡಿ : ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುತ್ತಿದೆ. ತನ್ನ ಅಂತಿಮಯಾತ್ರೆಯ ಶವಪೆಟ್ಟಿಗೆಗೆ ಸ್ವತಃ ತಾನೇ ಮೊಳೆ ಹೊಡೆಯುವ ಕೆಲಸ ಮಾಡುತ್ತಿದೆ. ಬಜರಂಗದಳ ನಿಷೇಧ ಮಾಡುತ್ತೇವೆ ಎಂದು ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಹಾಕಿದೆ. ಈ ಮೂಲಕ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್​ ಅವರಲ್ಲಿ ಕೇಳುತ್ತೇನೆ, ನಿಮಗೆ ತಾಕತ್ತಿದ್ದರೆ ಬಜರಂಗದಳವನ್ನು ಬ್ಯಾನ್​ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಹೇಳಿದ್ದರು.

ಇದನ್ನೂ ಓದಿ : ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಗೆ ಬೆಂಕಿ ಹಚ್ಚಿ ಬಜರಂಗದಳ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.