ಶಿವಮೊಗ್ಗ : ಸಿದ್ದರಾಮಯ್ಯನವರು ಲಿಂಗಾಯತ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲೋದು ಕಷ್ಟ. ತಾವು ಪ್ರತಿಪಕ್ಷದ ನಾಯಕ ಎನ್ನುವ ಬಗ್ಗೆ ಅರಿವಿಲ್ಲದೇ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ. ಅವರ ತಂತ್ರಕ್ಕೆ ನಾವು ಪ್ರತಿತಂತ್ರ ಮಾಡ್ತಿದ್ದೇವೆ. ಮತದಾರರು ಈ ಬಾರಿ ರಾಜ್ಯಾದ್ಯಂತ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ : ಲಿಂಗಾಯತರೆಲ್ಲ ಭ್ರಷ್ಟರು ಎಂದು ನಾನು ಹೇಳಿಲ್ಲ : ಸಿದ್ದರಾಮಯ್ಯ ಸ್ಪಷ್ಟನೆ
ಚುನಾವಣೆ ದೃಷ್ಟಿಯಿಂದ ನಾವು ಬೇರೆ ಬೇರೆ ರೀತಿಯ ಸಮಾಜದ ಸಭೆ ಮಾಡ್ತಿದ್ದೇವೆ. ಅಮಿತ್ ಶಾ, ಪ್ರಧಾನಿ ಮೋದಿ ರಾಜ್ಯ ಪ್ರವಾಸಕ್ಕೆ ಬರುತ್ತಾರೆ. ನಮಗೆ 125 ರಿಂದ 130 ಸ್ಥಾನ ಬರುತ್ತದೆ, ಮತ್ತೆ ನಾವೇ ರಾಜ್ಯದಲ್ಲಿ ಸರ್ಕಾರ ರಚನೆ ಮಾಡ್ತೇವೆ. ಈ ಬಾರಿ ಶಿವಮೊಗ್ಗದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ. ಹಿಂದುಳಿದ ವರ್ಗದ ಎಲ್ಲ ಸಮಾಜದವರು ನಮಗೆ ಬೆಂಬಲ ಕೊಡುತ್ತಿದ್ದಾರೆ. ಶಿವಮೊಗ್ಗ ನಮಗೆ ಪ್ರತಿಷ್ಠೆಯ ಕಣ, ಗೆದ್ದೇ ಗೆಲ್ಲುತ್ತೇವೆ ಎಂದರು.
ಸಂತೋಷ್ ಮೇಲಿನ ಆರೋಪದ ಕುರಿತು ಪ್ರತಿಕ್ರಿಯಿಸಿ, ಸಂತೋಷ್ ಅವರು ನಮ್ಮ ಹಿರಿಯ ಮುಖಂಡರು. ಬಿಜೆಪಿಯ ರಾಜಕೀಯ ಮುತ್ಸದಿ ನಾಯಕರು, ಸಂಘಟನೆಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸಲ್ಲ. ಅವರ ಬಗ್ಗೆ ಟೀಕೆ ಮಾಡುವ ಯೋಗ್ಯತೆ ಇಲ್ಲ ಎಂದರು.
ಇದನ್ನೂ ಓದಿ : ಸಿದ್ದರಾಮಯ್ಯ ಹೇಳಿಕೆಯಿಂದ ನೋವಾಗಿದೆ : ಶಾಸಕ ಅರವಿಂದ ಬೆಲ್ಲದ
ರಾಹುಲ್ ಗಾಂಧಿಗೆ ಬಸವಣ್ಣನವರ ತತ್ವ ಸಿದ್ಧಾಂತ ಏನು ಗೊತ್ತು? : ರಾಹುಲ್ ಗಾಂಧಿಗೆ ತಲೆ ತಿರುಗಿದೆ. ವೀರಶೈವರ ಬಗ್ಗೆ ರಾಹುಲ್ ಗಾಂಧಿಗೆ ಏನು ಗೊತ್ತಿದೆ, ಬಸವಣ್ಣನವರ ತತ್ವ ಸಿದ್ಧಾಂತ ಏನು ಗೊತ್ತಿದೆ. ಈಗ ವೀರಶೈವರ ಬಗ್ಗೆ ತಿಳಿದವರ ರೀತಿ ಮಾತನಾಡುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಮುಂದೆ ರಾಹುಲ್ ಗಾಂಧಿ ಯಾವ ಲೆಕ್ಕ. ಇದು ಎಲ್ಲಾ ನಡೆಯುವುದಿಲ್ಲ, ಕಾಂಗ್ರೆಸ್ನವರು ಏನೋ ಹೇಳಬೇಕು ಅಂತ ಹೇಳುತ್ತಿದ್ದಾರೆ ಅಂದರು.
ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಿಯೋಗದಿಂದ ಮುಖ್ಯ ಚುನಾವಣಾಧಿಕಾರಿಗೆ ದೂರು
ಇನ್ನೊಂದೆಡೆ, ಮಾಜಿ ಸಿಎಂ ಸಿದ್ದರಾಮಯ್ಯ ಲಿಂಗಾಯತ ಸಿಎಂ ಹೇಳಿಕೆ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ. 'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದ್ದೆ. ಆದರೆ, ಲಿಂಗಾಯಿತರೆಲ್ಲಾ ಭ್ರಷ್ಟರು ಎಂದು ನಾನು ಹೇಳಿಲ್ಲ'' ಎಂದಿದ್ದಾರೆ.
ಇದನ್ನೂ ಓದಿ : ಲಿಂಗಾಯತ ಸಮುದಾಯದ ಬಗ್ಗೆ ಸಿದ್ದರಾಮಯ್ಯ ಆತ್ಮ ಕಲುಕುವ ಹೇಳಿಕೆ ಕೊಟ್ಟಿದ್ದಾರೆ: ಸಿಎಂ ಬೊಮ್ಮಾಯಿ