ಶಿವಮೊಗ್ಗ: ಅಡಿಕೆಗೆ ಎಲೆಚುಕ್ಕಿ ರೋಗ ಹಿನ್ನೆಲೆ ಇಂದು ತೀರ್ಥಹಳ್ಳಿಗೆ ಕೇಂದ್ರ ವಿಜ್ಞಾನಿಗಳ ತಂಡ ಭೇಟಿ ನೀಡಿದೆ. ಕೊಪ್ಪ ತಾಲೂಕಿನಿಂದ ತೀರ್ಥಹಳ್ಳಿಗೆ ಆಗಮಿಸಿದ ತಂಡವನ್ನು ಗೃಹ ಸಚಿವರೂ ಆಗಿರುವ ಅಡಿಕೆ ಟಾಸ್ಕ್ ಫೋರ್ಸ್ ನ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು ಸ್ವಾಗತಿಸಿದರು.
ಬಳಿಕ ತೀರ್ಥಹಳ್ಳಿಯ ಪ್ರವಾಸಿ ಮಂದಿರದಲ್ಲಿ ವಿಜ್ಞಾನಿಗಳ ತಂಡದ ಜೊತೆ ಸಭೆ ನಡೆಸಲಾಯಿತು. ಸಭೆಯಲ್ಲಿ ಅಡಿಕೆ ತೋಟದ ಮಾಲೀಕರ ಸಮಸ್ಯೆಯನ್ನು ಚರ್ಚಿಸಲಾಯಿತು. ಜೊತೆಗೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯಲ್ಲಿ ಅಡಿಕೆ ಬೆಳೆಗಾರರ ಜೊತೆ ಕೇಂದ್ರ ತಂಡ ಸಂವಾದವನ್ನು ನಡೆಸಿತು. ಸಂವಾದದಲ್ಲಿ ಅಡಿಕೆ ಬೆಳೆಗಾರರ ಅನೇಕ ಪ್ರಶ್ನೆಗಳಿಗೆ ವಿಜ್ಞಾನಿಗಳು ಉತ್ತರ ನೀಡಿದರು. ಕೇಂದ್ರ ತಂಡವು ನಾಳೆ ರೋಗಕ್ಕೆ ತುತ್ತಾದ ಪ್ರದೇಶಗಳಿಗೆ ಭೇಟಿ ನೀಡಲಿದೆ.
ಕೇಂದ್ರ ತಂಡದಲ್ಲಿ ಡಾ. ಮುರುಳೀಧರ್, ಡಾ. ವಿನಾಯಕ ಹೆಗ್ಡೆ, ಡಾ.ಎಂ.ಸಿ. ವಾಲಿ, ಡಾ.ಹೋಮಿ ಚೇರನ್, ಡಾ. ಹೆಚ್.ಆರ್. ನಾಯಕ್ ಸೇರಿದಂತೆ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕ ವಿವಿಯ ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ : ಅತಿವೃಷ್ಟಿ ಸ್ಥಳಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ : ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿ ಧಾರವಾಡ ಡಿಸಿ