ETV Bharat / state

’ರಾಜ್ಯದಲ್ಲಿದೆ ಹಿಂದೆಂದೂ ಕಾಣದ ಬರಗಾಲ’.. ಈ ವೇಳೆ ಗ್ರಾಮವಾಸ್ತವ್ಯ ಸರಿಯೇ: ಬಿಎಸ್​​ವೈ ಪ್ರಶ್ನೆ - undefined

ರಾಜ್ಯದಲ್ಲಿ ದಿನೇ ದಿನೆ ಬರಗಾಲ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಈ ಸಂದರ್ಭದಲ್ಲಿ ಸಿಎಂ ಗ್ರಾಮ ವಾಸ್ತವ್ಯ ಮಾಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
author img

By

Published : Jun 27, 2019, 12:32 PM IST

ಶಿವಮೊಗ್ಗ: ರಾಜ್ಯದಲ್ಲಿ ಹಿಂದೆಂದೂ ಕಾಣದ ಬರಗಾಲ ಬಂದಿದೆ. ಈ ವೇಳೆ, ರಾಜ್ಯದ ಜನ - ಜಾನುವಾರುಗಳಿಗೆ ಮೇವು, ಕುಡಿವ ನೀರು ಒದಗಿಸುವುದರತ್ತ ಗಮನ ಹರಿಸುವುದನ್ನು ಬಿಟ್ಟು ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿಎಂ ಗ್ರಾಮ ವಾಸ್ತವ್ಯ ಖಂಡಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಅಧ್ಯಕ್ಷ ಎಸ್. ರುದ್ರೇಗೌಡರ ಜನ ಸಂಪರ್ಕ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ದಿನೇ ದಿನೆ ಬರಗಾಲ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಸಿಎಂ 48 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು. ಈಗ ಕೇವಲ 15 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎನ್ನುತ್ತಿದ್ದಾರೆ.

ಇನ್ನು ಬಿಜೆಪಿ‌ ಶಾಸಕ ಶಿವನಗೌಡ ನಾಯಕರನ್ನು ಗೂಂಡಾ ಎಂದು ಕರೆದಿದ್ದು ಸರಿಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್​​ನವರ ನಡುವೆ ಹೊಂದಾಣಿಕೆ ಇಲ್ಲದಾಗಿದೆ. ಅಭಿವೃದ್ದಿ ಕಾರ್ಯಗಳು ಕುಂಠಿತವಾಗಿವೆ. ನಿನ್ನೆ ಸಿಎಂ ಸರ್ವಾಧಿಕಾರಿಯಂತೆ ನಡೆದು ಕೊಂಡಿದ್ದಾರೆ. ರಾಜ್ಯದಲ್ಲಿ ಬರಗಾಲವಿರುವಾಗ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಸರಿಯಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

ಸಿಎಂ ಲೋಕಸಭಾ ಚುನಾವಣೆಯಲ್ಲಿ ಹತಾಶರಾಗಿದ್ದಾರೆ. ಅವರಿಗೆ ನಾಚಿಕೆ, ಮಾನ, ಮಾರ್ಯದೆ ಇದ್ದರೆ, ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಗ್ರಾಮ ವಾಸ್ತವ್ಯಕ್ಕೆ ಬಿಜೆಪಿ ಅಡ್ಡಿ ಪಡಿಸುತ್ತಿಲ್ಲ. ಬದಲಿಗೆ ಸ್ಥಳೀಯ ರೈತರು ಅಡ್ಡಿ ಪಡಿಸುತ್ತಿದ್ದಾರೆ. ರಾಜ್ಯದ ಪ್ರವಾಸ ಮಾಡಿ ನಂತ್ರ ಗ್ರಾಮ ವಾಸ್ತವ್ಯ ಮಾಡಬೇಕಿತ್ತು. ಮೋಡ ಬಿತ್ತನೆಗೆ ಹಣ ಇಟ್ಟಿದ್ದಾರೆ ಎನ್ನುತ್ತಿದ್ದಾರೆ. ಹಾಗಾದ್ರೆ ಈಗಲಾದ್ರೂ ಮೋಡ ಬಿತ್ತನೆ ಮಾಡಲಿ ಎಂದರು.

ಶರಾವತಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದು ಅವೈಜ್ಞಾನಿಕವಾಗಿದೆ. ಶರಾವತಿ ಡಿಪಿಆರ್​​ನ ಅವಧಿಯಲ್ಲಿ ಆಗಿಲ್ಲ. ಶರಾವತಿ ನದಿ ನೀರು ಬೆಂಗಳೂರಿಗೆ ತೆಗದುಕೊಂಡು ಹೋಗುವ ಕುರಿತು ನಾನು ಸಿಎಂ ಆಗಿದ್ದಾಗ ಯಾವುದೇ ಡಿಪಿಆರ್ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ರು.

ಎ.ಟಿ.ರಾಮಸ್ವಾಮಿ ಅವರ ವರದಿಯಂತೆ ಬೆಂಗಳೂರಿನ ಒತ್ತುವರಿ ತೆರವು ಮಾಡಬೇಕು ಎಂದು ವರದಿ ನೀಡಿದ್ದಾರೆ. ಆ ವರದಿಯಂತೆ ಕಾರ್ಯಾಚರಣೆ ನಡೆಸಿದರೆ ಸಾಕು, ಬೆಂಗಳೂರಿಗೆ ನೀರು ಲಭ್ಯವಾಗುತ್ತದೆ. ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದಕ್ಕೆ ನನ್ನ‌ ವಿರೋಧವಿದೆ ಎಂದು ಇದೆ ಎಂದು ಇದೇ ವೇಳೆ ಬಿಎಸ್​​​ವೈ ಸ್ಪಷ್ಟಪಡಿಸಿದರು.

Intro:ರಾಜ್ಯದಲ್ಲಿ ಹಿಂದೆಂದೂ ಕಾಣದ ಬರಗಾಲ ಬಂದಿದೆ. ಈ ವೇಳೆಯಲ್ಲಿ ರಾಜ್ಯದ ಜನ-ಜಾನುವಾರುಗಳಿಗೆ ಮೇವು,ಕುಡಿಯುವ ನೀರು ಒದಗಿಸುವುದರತ್ತಾ ಗಮನ ಹರಿಸುವುದನ್ನು ಬಿಟ್ಟು ಕುಮಾರಸ್ವಾಮಿ ಗ್ರಾಮ ವಾಸ್ತಾವ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ಖಂಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಅಧ್ಯಕ್ಷ ಎಸ್.ರುದ್ರೇಗೌಡರ ಜನ ಸಂಪರ್ಕ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ದಿನೆ ದಿನೆ ಬರಗಾಲ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

Body:ಸಿಎಂ 48 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡುತ್ತೆವೆ ಎಂದಿದ್ದರು. ಈಗ ಕೇವಲ 15 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಲಾಗಿದೆ ಎನ್ನುತ್ತಿದ್ದಾರೆ. ಬಿಜೆಪಿ‌ ಶಾಸಕ ಶಿವನಗೌಡ ನಾಯಕರನ್ನು ಗೂಂಡಾ ಎಂದು ಕರೆದಿದ್ದು ಸರಿಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನವರ ನಡುವೆ ಹೊಂದಾಣಿಕೆ ಇಲ್ಲದಾಗಿದೆ. ಅಭಿವೃದ್ದಿ ಕಾರ್ಯಗಳು ಕುಂಠಿತವಾಗಿದೆ. ನಿನ್ನೆ ಸಿಎಂ ಸರ್ವಾಧಿಕಾರಿಯಂತೆ ನಡೆದು ಕೊಂಡಿದ್ದಾರೆ. ರಾಜ್ಯದಲ್ಲಿ ಬರಗಾಲವಿರುವಾಗ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಸರಿಯಲ್ಲ. ಇದು ಗ್ರಾಮ ವಾಸ್ತವ್ಯಕ್ಕೆ ಸರಿಯಾದ ಕಾಲವಲ್ಲ.

Conclusion:ಸಿಎಂ ಲೋಕಸಭ ಚುನಾವಣೆಯಲ್ಲಿ ಹತಾಷರಾಗಿದ್ದಾರೆ. ಅವರಿಗಡ ನಾಚಿಕೆ ಮಾನ ಮಾರ್ಯದೆ ಇದ್ದರೆ, ಕೊಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಗ್ರಾಮ ವಾಸ್ತವ್ಯಕ್ಕೆ ಬಿಜೆಪಿ ಅಡ್ಡಿ ಪಡಿಸುತ್ತಿಲ್ಲ. ಬದಲಿಗೆ ಸ್ಥಳೀಯ ರೈತರು ಅಡ್ಡಿ ಪಡಿಸುತ್ತಿದ್ದಾರೆ ಎಂದರು. ರಾಜ್ಯದ ಪ್ರವಾಸ ಮಾಡಿ ನಂತ್ರ ಗ್ರಾಮ ವಾಸ್ತವ್ಯ ಮಾಡಬೇಕಿತ್ತು ಎಂದರು.ಮೋಡ ಬಿತ್ತನೆಗೆ ಹಣ ಇಟ್ಟಿದ್ದಾರೆ ಎನ್ನುತ್ತಿದ್ದಾರೆ. ಈಗಲಾದರೂ ಸಹ ಮೋಡ ಬಿತ್ತನೆ ಮಾಡಲಿ ಎಂದರು. ಶರಾವತಿ ನೀರು ಬೆಂಗಳೂರಿಗೆ ತೆಗೆದು ಕೊಂಡು ಹೋಗುವುದು ಅವೈಜ್ಞಾನಿಕವಾಗಿದೆ.

ಶರಾವತಿ ಡಿಪಿಆರ್ ನನ್ನ ಅವಧಿಯಲ್ಲಿ ಆಗಿಲ್ಲ-

ಶರಾವತಿ ನದಿ ನೀರು ಬೆಂಗಳೂರಿಗೆ ತೆಗದು ಕೊಂಡು ಹೋಗುವ ಕುರಿತು ನಾನು ಸಿಎಂ ಆಗಿದ್ದಾಗ ಯಾವುದೇ ಡಿಪಿಆರ್ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ‌. ಎ.ಟಿ.ರಾಮಸ್ವಾಮಿ ರವರ ವರದಿಯಂತೆ ಬೆಂಗಳೂರಿನ ಒತ್ತುವರಿ ತೆರವು ಮಾಡಬೇಕು ಎಂದು ವರದಿ ನೀಡಿದ್ದಾರೆ. ಆ ವರದಿಯಂತೆ ಕಾರ್ಯಾಚರಣೆ ನಡೆಸಿದರೆ ಸಾಕು, ಬೆಂಗಳೂರಿಗೆ ನೀರು ಲಭ್ಯವಾಗುತ್ತದೆ ಎಂದರು. ಬೆಂಗಳೂರಿನ ನೀರಿನ ಮೂಲಗಳನ್ನು ಬಳಸಿಕೊಳ್ಳಬೇಕಿದೆ. ಶರಾವತಿ ನೀರು ಬೆಂಗಳೂರಿಗೆ ತೆಗೆದು ಕೊಂಡು ಹೋಗುವುದಕ್ಕೆ ನನ್ನ‌ ವಿರೋಧವಿದೆ ಎಂದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಎಸ್.ರುದ್ರೆಗೌಡ ಹಾಜರಿದ್ದರು.

ಬೈಟ್: ಬಿ.ಎಸ್.ಯಡಿಯೂರಪ್ಪ. ಬಿಜೆಪಿ‌ ರಾಜ್ಯಾಧ್ಯಕ್ಷರು.

ಕಿರಣ್ ಕುಮಾರ್. ಶಿವಮೊಗ್ಗ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.