ETV Bharat / state

ಸಂಗಮ ಕ್ಷೇತ್ರ ನಿಲುವಾಂಬೆ ಶಾರದೆ ಸನ್ನಿಧಿಯಲ್ಲಿ ಮಕ್ಕಳ ಅಕ್ಷರಾಭ್ಯಾಸದ ವಿಶೇಷತೆ ಏನು ಗೊತ್ತಾ?

ಸಂಗಮ ಕ್ಷೇತ್ರ ನಿಲುವಾಂಬೆ ಶಾರದಾ ದೇವಿ ಸನ್ನಿದಿಯಲ್ಲಿ ಅಕ್ಷರಾಭ್ಯಾಸ ನಡೆಸಿದರೆ ಮಕ್ಕಳ ಮುಂದಿನ ವಿದ್ಯಾಭ್ಯಾಸ ಜೀವನ ಉತ್ತಮವಾಗಿರುತ್ತದೆ ಎಂಬ ನಂಬಿಕೆಯಿದೆ.

ಮಕ್ಕಳ ಅಕ್ಷರಭ್ಯಾಸ
ಮಕ್ಕಳ ಅಕ್ಷರಭ್ಯಾಸ
author img

By ETV Bharat Karnataka Team

Published : Oct 21, 2023, 12:46 PM IST

Updated : Oct 21, 2023, 3:30 PM IST

ಕೂಡ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ಶಂಕರಾ ಭಾರತಿ ಸ್ವಾಮಿಗಳು

ಶಿವಮೊಗ್ಗ : ಹಿಂದೆಲ್ಲಾ ಗುರುಕುಲ ಇತ್ತು. ಅಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನಡೆಸಲಾಗುತ್ತಿತ್ತು. ಇಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸಲಾಗುತ್ತದೆ. ಆದರೆ ಈಗ ಗುರುಕುಲ ಪದ್ಧತಿ ಇಲ್ಲದ ಕಾರಣಕ್ಕೆ ದೇವಾಲಯಗಳಲ್ಲಿ ಮಕ್ಕಳ ಅಕ್ಷರಭ್ಯಾಸ ನಡೆಸಲಾಗುತ್ತದೆ. ಅದರಂತೆ ಶಿವಮೊಗ್ಗ ಜಿಲ್ಲೆಯ ತುಂಗಭದ್ರಾ ನದಿಗಳ ಸಂಗಮವಾಗುವ ಕೂಡಲಿ ಎಂಬಲ್ಲಿ ನೂರಾರು ವರ್ಷಗಳಿಂದ ತಾಯಿ ಶಾರದಾ ದೇವಿ ಸನ್ನಿದಿಯಲ್ಲಿ ಅಕ್ಷರಭ್ಯಾಸ ನಡೆಸಲಾಗುತ್ತದೆ. ನವರಾತ್ರಿಯ ಅಂಗವಾಗಿ ಶುಕ್ರವಾರ ನಡೆದ ಸರಸ್ವತಿ ಪೂಜೆಯ ಅಂಗವಾಗಿ ಮಕ್ಕಳಿಗೆ ವಿಶೇಷವಾಗಿ ಅಕ್ಷರಭ್ಯಾಸ ನಡೆಸಲಾಯಿತು.

ದೇವಾಲಯದ ಮುಂಭಾಗ ಅಕ್ಷರಭ್ಯಾಸ ನಡೆಸಲಾಯಿತು. ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಅಕ್ಷರಭ್ಯಾಸ ನಡೆಸಿದರು. ಪೋಷಕರೆ ಮನೆಯಿಂದ ಹೊಸ ಸ್ಲೇಟ್, ಬಳಪ, ನೋಟ್ ಬುಕ್, ಹೊಸ ಪೆನ್ಸಿಲ್​ಗಳನ್ನು ತಂದು ಮಕ್ಕಳಿಗೆ ಅಕ್ಷರಭ್ಯಾಸ ನಡೆಸುತ್ತಾರೆ. ಮನೆಯಿಂದ ತಂದಿದ್ದ ಅಕ್ಕಿಯ ಮೇಲೆ ಓಂ, ಗಣೇಶ ಹಾಗೂ ಶಾರದಾ ದೇವಿ ಹೆಸರು ಬರೆಯಿಸುತ್ತಾರೆ. ನಂತರ ಮಕ್ಕಳಿಗೆ ಹೊಸ ಸ್ಲೇಟ್​ನಲ್ಲಿ ಸಂಸ್ಕೃತ, ಕನ್ನಡ ಹಾಗೂ ಇಂಗ್ಲಿಷ್ ಹಾಗೂ 123 ಗಳನ್ನು‌ ಮೊದಲು ಪೋಷಕರಿಂದ ಬರೆಯಿಸುತ್ತಾರೆ. ನಂತರ ಪೂಜೆಯ ನಂತರ ಮಕ್ಕಳಿಂದ ಮೊದಲು ಬರೆದ ಅಕ್ಷರಗಳ ಮೇಲೆ ತಿದ್ದಿಸಲಾಗುತ್ತದೆ. ನಂತರ ಮಕ್ಕಳಿಗೆ ಶಾರದಾಂಬೆ ದೇವಿ ಸನ್ನಿದಿಯಲ್ಲಿ ವಿಶೇಷ ಪೂಜೆ ನಡೆಸಿ, ಪ್ರಸಾದ ವಿತರಿಸಲಾಗುತ್ತದೆ.

ಶಾರದಾಂಬೆ ಸನ್ನಿದಿಯಲ್ಲಿ ಅಕ್ಷರಭ್ಯಾಸ ನಡೆಸಿದರೆ, ಮಕ್ಕಳ ಮುಂದಿನ ವಿದ್ಯಾಭ್ಯಾಸ ಜೀವನ ಉತ್ತಮವಾಗಿ ನಡೆಯುತ್ತದೆ. ಅಲ್ಲದೆ ಉತ್ತಮ ಬುದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಇಲ್ಲಿ ಪ್ರತಿ ಶುಕ್ರವಾರ ಅಕ್ಷರಭ್ಯಾಸ ನಡೆಸಲಾಗುತ್ತದೆ. ಅದರಲ್ಲೂ ಇಂದು‌ ನವರಾತ್ರಿಯ ಆರನೇ ದಿನ ದುರ್ಗಾ ದೇವಿಯನ್ನು ಸರಸ್ವತಿ ರೂಪದಲ್ಲಿ ಪೂಜಿಸಲಾಗುತ್ತದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಇಂದು ಸೂಕ್ತ ಎಂದು ಪೋಷಕರು ತಮ್ಮ ಮಕ್ಕಳಿಗೆ ಶಾರದಾ ದೇವಿ ಸನ್ನಿದಾನದಲ್ಲಿ ಅಕ್ಷರಭ್ಯಾಸ ನಡೆಸಿದ್ದಾರೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಮಕ್ಕಳು ಅಕ್ಷರಭ್ಯಾಸಕ್ಕೆ ಬರುತ್ತಾರೆ.

ಕ್ಷೇತ್ರದ ವಿಶೇಷ : ಕೂಡ್ಲಿ ಕ್ಷೇತ್ರವು ತುಂಗಾಭದ್ರಾ ನದಿಯ ಸಂಗಮ ಕ್ಷೇತ್ರವಾಗಿದೆ. ಆದಿ ಶಂಕರಚಾರ್ಯರು ದಕ್ಷಿಣ ಭಾಗಕ್ಕೆ ಬಂದಾಗ ಇಲ್ಲಿ ನಿಲುವಾಂಬೆ ರೂಪದಲ್ಲಿ ತಾಯಿ ಶಾರದೆಯನ್ನು ಪ್ರತಿಷ್ಠಾಪಿಸುತ್ತಾರೆ. ನಂತರ ತಾವೇ ಪೂಜಿಸುತ್ತಾರೆ. ಇದರಿಂದ ಇದು ಕೂಡ್ಲಿ ಶಾರದಾಂಬೆ ತಾಯಿ ಕ್ಷೇತ್ರವಾಗಿದೆ. ಇಲ್ಲಿಗೆ ಕರ್ನಾಟಕವಲ್ಲದೆ, ಮಹಾರಾಷ್ಟ್ರ ಸೇರಿದಂತೆ ದೇಶದ ಅನೇಕ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಕೂಡಲಿಯು ಪೌರಾಣಿಕವಾಗಿ ಸಾಕಷ್ಟು ಮಹತ್ವವನ್ನು ಪಡೆದಿದೆ. ಅಲ್ಲದೆ ಕ್ಷೇತ್ರವು ಅನೇಕ ರಾಜವಂಶಗಳು ಆಳ್ವಿಕೆ ನಡೆಸಿವೆ.

ಕೂಡ್ಲಿಯಲ್ಲಿ ಅಕ್ಷರಾಭ್ಯಾಸ ನಡೆಸುವ ಕುರಿತು ಕೂಡ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮಿಗಳು ಮಾತನಾಡಿ, ''ಆದಿ ಶಂಕರಚಾರ್ಯರು ದಕ್ಷಿಣಕ್ಕೆ ಬಂದಾಗ ತುಂಗಾ ಭದ್ರ ಸಂಗಮದಲ್ಲಿ ತಾಯಿ ಶಾರದಾ ದೇವಿ ನೆಲೆ ನಿಂತಿರುತ್ತಾರೆ. ಇದರಿಂದ ಇದಕ್ಕೆ ನಿಲುವಾಂಬೆ ಶಾರದೆ ಎಂದು ಕರೆಯುತ್ತಾರೆ. ಶಾರದಾ ದೇವಿಯನ್ನು ಆದಿ ಶಂಕರಚಾರ್ಯರೆ ಪ್ರತಿಷ್ಠಾಪಿಸಿ, ಪೂಜಿಸಲ್ಪಟ್ಟ ಕಾರಣಕ್ಕೆ ಈ ಕ್ಷೇತ್ರಕ್ಕೆ ವಿಶೇಷ ಪ್ರಾತಿನಿಧ್ಯವಿದೆ. ಇದೇ ಕಾರಣಕ್ಕೆ ಈ ಭಾಗದ ಸುತ್ತಮುತ್ತಲಿನ ಭಾಗದಿಂದ ಜನರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಕ್ಕಳಿಗೆ ಅಕ್ಷರಭ್ಯಾಸ ನಡೆಸಲು ಆಗಮಿಸುತ್ತಾರೆ. ಇಲ್ಲಿ ನೂರಾರು ವರ್ಷಗಳಿಂದ ತಾಯಿ ಶಾರದಾಂಬೆಯ ಮುಂದೆ ಎಲ್ಲಾ ಮಕ್ಕಳಿಗೂ ಸಹ ಅಕ್ಷರಭ್ಯಾಸ ನಡೆಸಿಕೊಂಡು ಬರಲಾಗುತ್ತಿದೆ. ಶರವನ್ನವರಾತ್ರಿ ಅಂಗವಾಗಿ ಶುಕ್ರವಾರ ಸಹಸ್ರಾರು ಸಂಖ್ಯೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಕರೆ ತಂದು ಅಕ್ಷರಭ್ಯಾಸ ಮಾಡಿಸಿದ್ದಾರೆ'' ಎಂದು ತಿಳಿಸಿದರು.

''ಕೂಡ್ಲಿ ಕ್ಷೇತ್ರ ಸಾಕಷ್ಟು ಪ್ರಸಿದ್ಧವಾಗಿದೆ. ಇಲ್ಲಿ ಎರಡು ನದಿಗಳ ಸಂಗಮದ ಪುಣ್ಯ ಕ್ಷೇತ್ರ. ಇಲ್ಲಿ ಇಂದು ಅಕ್ಷರಭ್ಯಾಸಕ್ಕೆ ಒಳ್ಳೆಯ ದಿನವಾದ ಕಾರಣಕ್ಕೆ ನಾನು ನನ್ನ ಮಗನನ್ನು ಅಕ್ಷರಭ್ಯಾಸಕ್ಕೆ ಕರೆ ತಂದಿದ್ದೆ. ಇಲ್ಲಿ ಚೆನ್ನಾಗಿ ಪೂಜೆ ನಡೆಸಿ ಅಕ್ಷರಭ್ಯಾಸ ನಡೆಸಿದರು'' ಎಂದು ಪೋಷಕರಾದ ಗಾಜನೂರು ಗಣೇಶ ಹೇಳಿದರು.

ಇದನ್ನೂ ಓದಿ: ಸಪ್ತಪದಿ ಯೋಜನೆಯಂತೆ, ಅಕ್ಷರಾಭ್ಯಾಸ ಯೋಜನೆ ತರಬೇಕು: ಶಾಸಕ ಎಸ್ ಎ ರಾಮದಾಸ್

Last Updated : Oct 21, 2023, 3:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.