ಶಿವಮೊಗ್ಗ: ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾರನಹಳ್ಳಿ ಬಳಿ ಕೆರೆದಂಡೆಯ ಮೇಲೆ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಖದೀಮರನ್ನು ಪೊಲೀಸರು ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನವರು ಎಂದು ತಿಳಿದುಬಂದಿದೆ. ರಸಿಕ, ಆಂಜನಪ್ಪ, ಹನುಮಂತಪ್ಪ, ಧರ್ಮಪ್ಪ, ಸಂತೋಷ್ ಬಂಧಿತ ಖದೀಮರು.
ಇವರೆಲ್ಲಾ ಬೆಳ್ಳಿ, ಬಂಗಾರವನ್ನು ಕಳ್ಳತನ ಮಾಡುವುದರ ಜೊತೆಗೆ ನಕಲಿ ಬಂಗಾರದ ಆಭರಣಗಳನ್ನು ತೋರಿಸಿ ಜನರಿಗೆ ವಂಚಿಸಿದ್ದರು ಎಂದು ತಿಳಿದುಬಂದಿದೆ. ಬಂಧಿತರಿಂದ ಕಬ್ಬಿಣದ ರಾಡು, ಕಾರದಪುಡಿ, ಗರಗಸವನ್ನು ವಶಕ್ಕೆ ಪಡೆಯಲಾಗಿದೆ.
ಕುಂಸಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನವೀನ್ ಮಠಪತಿ ಅವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.