ETV Bharat / state

29 ಕೋಟಿ ವಿದ್ಯುತ್​​ ಬಿಲ್ ಬಾಕಿ ಉಳಿಸಿಕೊಂಡಿವೆಯಂತೆ ಸರ್ಕಾರಿ ಇಲಾಖೆಗಳು! - undefined

ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳು ಮೆಸ್ಕಾಂಗೆ ಬರೋಬ್ಬರಿ 29 ಕೋಟಿ ರೂ. ವಿದ್ಯುತ್ ಬಿಲ್ ನಿಡದೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.

29 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ ಸರ್ಕಾರಿ ಇಲಾಖೆಗಳು
author img

By

Published : Jun 10, 2019, 10:12 PM IST

ಶಿವಮೊಗ್ಗ: ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳು ಮೆಸ್ಕಾಂಗೆ ಬರೋಬ್ಬರಿ 29 ಕೋಟಿ ರೂ. ವಿದ್ಯುತ್ ಬಿಲ್ ನಿಡದೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.

29 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ ಸರ್ಕಾರಿ ಇಲಾಖೆಗಳು

ಕಳೆದ ಅನೇಕ ವರ್ಷಗಳಿಂದ ಪಾಲಿಕೆಯೂ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಸ್ಥಳೀಯ ಆಡಳಿತ ಸಂಸ್ಥೆಗಳು ನೀರು ಸರಬರಾಜು, ಬೀದಿ ದೀಪ ಸೇರಿದಂತೆ ಇತರೆ ವಿದ್ಯುತ್ ಬಿಲ್ ಸರಿಯಾಗಿ ಪಾವತಿಸದ ಕಾರಣ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 29 ಕೊಟಿ ರೂ. ಮೆಸ್ಕಾಂ ಬಿಲ್ ಬಾಕಿ ಉಳಿದುಕೊಂಡಿದೆ. ಇದರಲ್ಲಿ ಮಹಾನಗರ ಪಾಲಿಕೆಯೊಂದರಿಂದ 14.74 ಕೋಟಿ ರೂ. ಬಿಲ್ ಬಾಕಿ ಬರಬೇಕಿದೆಯಂತೆ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಿಂದ 40 ಲಕ್ಷ , ಗ್ರಾಮ ಪಂಚಾಯಿತಿಗಳಿಂದ 13.82 ಕೋಟಿ, ಇತರೆ ಸರ್ಕಾರಿ ಇಲಾಖೆ ಒಳಗೊಂಡಂತೆ ಒಟ್ಟು 29 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಮೆಸ್ಕಾಂ ಅಧಿಕಾರಿಗಳಿಗೆ ತಲೆನೋವಾಗಿದೆ. ಇವುಗಳನ್ನು ಹೊರತುಪಡಿಸಿ ಏಪ್ರಿಲ್ ತಿಂಗಳ ಅಂತ್ಯಕ್ಕೆ ಕೊನೆಗೊಂಡಂತೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಕೆಎಸ್ಆರ್​ಟಿಸಿ ಸೇರಿದಂತೆ 40ಕ್ಕೂ ಅಧಿಕ ಇಲಾಖೆಗಳಿಂದ 89.37 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಬರಬೇಕಿದೆ.

ಇತ್ತೀಚೆಗೆ ಅಗತ್ಯಕ್ಕಿಂತ ಹೆಚ್ಚಾಗಿ ವಿದ್ಯುತ್ ಬಳಕೆಯಾಗುತ್ತಿದೆ. ಆದರೆ, ಬಿಲ್ ಪಾವತಿ ಮಾತ್ರ ಸರಿಯಾಗಿ ಆಗುತ್ತಿಲ್ಲ. ಅದರಲ್ಲಿಯೂ ಸರ್ಕಾರಿ ಕಚೇರಿಗಳಿಂದ ಸಾಕಷ್ಟು ಪ್ರಮಾಣದ ವಿದ್ಯುತ್ ಬಿಲ್ ಬರಬೇಕಿದ್ದು, ಗ್ರಾ.ಪಂಚಾಯಿತಿಗಳು ಹೆಚ್ಚಿನ ಪ್ರಮಾಣದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ರೈಲ್ವೆ, ಬಂದರು, ವಾಣಿಜ್ಯ ಇಲಾಖೆ ಸೇರಿದಂತೆ ಕೆಲವೇ ಬೆರಳೆಣಿಕೆಯಷ್ಟು ಇಲಾಖೆಗಳನ್ನು ಹೊರತುಪಡಿಸಿದರೆ ಬಹುತೇಕ ಇಲಾಖೆಗಳು ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿವೆ.

ಇತ್ತ ಮೆಸ್ಕಾಂ ಅಧಿಕಾರಿಗಳು, ಮೂಲ ಸೌಕರ್ಯಗಳಾದ ನೀರು, ಬೀದಿ ದೀಪಗಳ ವಿದ್ಯುತ್ ಕಡಿತ ಮಾಡಿದರೆ ಜನಜೀವನ ಅಸ್ತವ್ಯಸ್ತವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರಕ್ಕೆ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದು, ಬಾಕಿ ಪಾವತಿಸಿಕೊಳ್ಳಲು ಮುಂದಾಗಿದ್ದಾರೆ.

ಸರ್ಕಾರಿ ಇಲಾಖೆಗಳಲ್ಲಿ ಶೇ. 60ರಷ್ಟು ಹಣ ವಿದ್ಯುತ್ ಬಿಲ್‌ಗಾಗಿ ಮೀಸಲಿದ್ದರೂ ಸರ್ಕಾರಿ ಕಚೇರಿಗಳ ನಿರ್ಲಕ್ಷ್ಯದಿಂದ ಕೋಟಿಗಟ್ಟಲೆ ಬಿಲ್ ಬಾಕಿ ಉಳಿದಿದೆ. ಸಾರ್ವಜನಿಕರು ಬಿಲ್ ಪಾವತಿ ಮಾಡದಿದ್ದರೆ ಹೇಳದೆ ಕೇಳದೆ ವಿದ್ಯುತ್ ಕನೆಕ್ಷನ್ ಕಟ್ ಮಾಡುವ ಮೆಸ್ಕಾಂ ಅಧಿಕಾರಿಗಳು, ಸರ್ಕಾರಿ ಕಚೇರಿಗಳಿಂದ ಕೋಟಿಗಟ್ಟಲೆ ಬಿಲ್ ಬಾಕಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

Intro:ಶಿವಮೊಗ್ಗ,
ಫಾರ್ಮೆಟ್ : ಹೈಪ್ ಸ್ಟೋರಿ ಪ್ಯಾಕೇಜ್
ಸ್ಲಗ್ : ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ ಸರ್ಕಾರಿ ಇಲಾಖೇಗಳು.

ಆ್ಯಂಕರ್.................
ಸಾಮಾನ್ಯವಾಗಿ ಜನರು ಎರಡು ತಿಂಗಳು ಕರೆಂಟ್ ಬಿಲ್ ಕಟ್ಟಿಲ್ಲ ಎಂದರೆ ಕನೆಕ್ಷನ್ ಕಟ್ ಮಾಡುವ ಮೆಸ್ಕಾಂ ಅಧಿಕಾರಿಗಳು ಸರಕಾರಿ ಇಲಾಖೆಗಳಿಗೆ ಮಾತ್ರ ಈ ನಿಯಮ ಪಾಲನೆ ಮಾಡುತ್ತಿಲ್ಲ. ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳಿಂದ ಮೆಸ್ಕಾಂಗೆ ಬರೋಬ್ಬರಿ ೨೯ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ....

ವಾಯ್ಸ್ ಓವರ್......1
ಹೌದು, ಇಷ್ಟು ದೊಡ್ಡ ಮಟ್ಟದ ವಿದ್ಯುತ್ ಬಿಲ್ ಬಾಕಿ ಇದೆಯೇ ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೂ, ಇದು ಸತ್ಯ. ಕಳೆದ ಅನೇಕ ವರ್ಷಗಳಿಂದ ಪಾಲಿಕೆಯೂ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಸ್ಥಳೀಯಾಡಳಿತಗಳು ನೀರು ಸರಬರಾಜು, ಬೀದಿದೀಪ ಸೇರಿದಂತೆ ಇತರೆ ವಿದ್ಯುತ್ ಬಿಲ್ ಸರಿಯಾಗಿ ಪಾವತಿಸದ ಕಾರಣ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ೨೯ ಕೊಟಿ ರೂ.ಗಳ ಮೆಸ್ಕಾಂ ಬಿಲ್ ಬಾಕಿ ಉಳಿದುಕೊಂಡಿವೆ. ಇದರಲ್ಲಿ ಮಹಾನಗರ ಪಾಲಿಕೆಯೊಂದರಿಂದ ೧೪.೭೪ ಕೋಟಿ ರೂ. ಬಿಲ್ ಬಾಕಿ ಬರಬೇಕಿದೆ. ಇನ್ನೂ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಿಂದ ೪೦ಲಕ್ಷ , ಗ್ರಾಮ ಪಂಚಾಯಿತಿಗಳಿಂದ ೧೩.೮೨ ಕೋಟಿ ಇತರೆ ಸರಕಾರ ಇಲಾಖೆ ಒಳಗೊಂಡಂತೆ ಒಟ್ಟು ೨೯ ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಮೆಸ್ಕಾಂ ಅಧಿಕಾರಿಗಳಿಗೆ ತಲೆ ನೋವಾಗಿದೆ. ಇವುಗಳನ್ನು ಹೊರತು ಪಡಿಸಿ ಏಪ್ರಿಲ್ ತಿಂಗಳ ಅಂತ್ಯಕ್ಕೆ ಕೊನೆಗೊಂಡಂತೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಕೆಎಸ್ಆರ್ಟಿಸಿ ಸೇರಿದಂತೆ 40 ಕ್ಕೂ ಅಧಿಕ ಇಲಾಖೆಗಳಿಂದ 89.37 ಲಕ್ಷ ರೂ.  ವಿದ್ಯುತ್ ಬಿಲ್ ಬಾಕಿ ಬರಬೇಕಿದೆ...
Body:ವಾಯ್ಸ್ ಓವರ್......2
ಇನ್ನೂ ಇಂದಿನ ಆಧುನಿಕ ಯುಗದಲ್ಲಿ ವಿದ್ಯುತ್ ಅತಿ ಮುಖ್ಯವಾಗಿ ಬೇಕಾಗಿರುವ ಸಂಪನ್ಮೂಲ. ಎಲ್ಲ ಕ್ಷೇತ್ರಗಳಲ್ಲಿಗೂ ವಿದ್ಯುತ್ ಅತ್ಯಗತ್ಯವಾಗಿದೆ. ಕರೆಂಟ್ ಇಲ್ಲದೆ ಇದ್ದರೆ ಯಾವ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಸ್ಥಿತಿಗೆ ತಲುಪಿದ್ದೇವೆ. ಇತ್ತೀಚೆಗೆ ಅಗತ್ಯಕ್ಕಿಂತ ಹೆಚ್ಚಾಗಿ ವಿದ್ಯುತ್ ಬಳಕೆಯಾಗುತ್ತಿದೆ. ಆದರೆ, ಬಿಲ್ ಪಾವತಿ ಮಾತ್ರ ಸರಿಯಾಗಿ ಆಗುತ್ತಿಲ್ಲ. ಅದರಲ್ಲಿಯೂ ಸರಕಾರಿ ಕಚೇರಿಗಳಿಂದ ಸಾಕಷ್ಟು ಪ್ರಮಾಣ ವಿದ್ಯುತ್ ಬಿಲ್ ಬರಬೇಕಿದ್ದು, ಗ್ರಾಪಂಗಳು ಹೆಚ್ಚಿನ ಪ್ರಮಾಣ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ರೈಲ್ವೇ, ಬಂದರು, ವಾಣಿಜ್ಯ ಇಲಾಖೆ ಸೇರಿದಂತೆ ಕೆಲವೇ ಬೆರಳೆಣಿಕೆಯಷ್ಟು ಇಲಾಖೇಗಳನ್ನು ಹೊರತುಪಡಿಸಿದರೇ ಬಹುತೇಕ ಇಲಾಖೆಗಳು ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿವೆ. ಇತ್ತ ಮೆಸ್ಕಾಂ ಅಧಿಕಾರಿಗಳು,  ಮೂಲ ಸೌಕರ್ಯಗಳಾದ ನೀರು, ಬೀದಿ ದೀಪಗಳ ವಿದ್ಯುತ್ ಕಡಿತ ಮಾಡಿದರೆ, ಜನಜೀವನ ಅಸ್ತವ್ಯಸ್ತವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಸರಕಾರಕ್ಕೆ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದು, ಬಾಕಿ ಪಾವತಿಸಿಕೊಳ್ಳಲು ಮುಂದಾಗಿದ್ದಾರೆ.

ಬೈಟ್....1
ಚೆನ್ನಬಸಪ್ಪ : ಶಿವಮೊಗ್ಗ ಪಾಲಿಕೆ ಉಪಮೇಯರ್.
ಬೈಟ್.... 2 ಗೀರಿಶ್ ಸಾಮಾಜಿಕ‌ ಕಾರ್ಯಕರ್ತ
Conclusion:ಕನ್ ಕ್ಲೂಷನ್.......
ಒಟ್ಟಾರೆ, ಸರಕಾರಿ ಇಲಾಖೆಗಳಲ್ಲಿ ಶೇ.೬೦ರಷ್ಟು ಹಣ ವಿದ್ಯುತ್ ಬಿಲ್‌ಗಾಗಿ ಮೀಸಲಿದ್ದರೂ, ಸರಕಾರಿ ಕಚೇರಿಗಳ ನಿರ್ಲಕ್ಷ್ಯದಿಂದ ಕೋಟಿಗಟ್ಟಲೆ ಬಿಲ್ ಬಾಕಿ ಉಳಿದಿದೆ.  ಸಾರ್ವಜನಿಕರು ಬಿಲ್ ಪಾವತಿ ಮಾಡದಿದ್ದರೆ ಹೇಳದೆ ಕೇಳದೆ ವಿದ್ಯುತ್ ಕನೆಕ್ಷನ್ ಕಟ್ ಮಾಡುವ ಮೆಸ್ಕಾಂ ಅಧಿಕಾರಿಗಳು ಸರಕಾರಿ ಕಚೇರಿಗಳಿಂದ ಕೋಟಿಗಟ್ಟಲೆ ಬಿಲ್ ಬಾಕಿ ಇದ್ದರೂ ಯಾವುದೇ ಕ್ರಮ ಜರುಗಿಸದೇ ಸುಮ್ಮನಿರುವುದು ಸೋಜಿಗವೇ ಸರಿ.
ಭೀಮಾನಾಯ್ಕ ಎಸ್ ಶಿವಮೊಗ್ಗ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.