ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 244 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ ಇದೀಗ 7,175ಕ್ಕೆ ಏರಿಕೆಯಾಗಿದೆ.
ಇಂದು 285 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೂ 4,984 ಜನ ಗುಣಮುಖರಾಗಿದ್ದಾರೆ,. ಜಿಲ್ಲೆಯಲ್ಲಿ 3 ಜನ ಸೋಂಕಿತರು ಬಲಿಯಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ 123 ಜನ ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1,577 ಜನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮೆಗ್ಗಾನ್ ಕೋವಿಡ್ ಅಸ್ಪತ್ರೆಯಲ್ಲಿ 200 ಜನ, ಕೋವಿಡ್ ಕೇರ್ ಸೆಂಟರ್ನಲ್ಲಿ 284 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 174 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ 830 ಜನ ಐಸೋಲೇಷನ್ನಲ್ಲಿದ್ದಾರೆ. ಆರ್ಯವೇದಿಕ್ ಕಾಲೇಜಿನಲ್ಲಿ 913 ಜನ ಇದ್ದಾರೆ.
ತಾಲೂಕುವಾರು ಸೊಂಕಿತರ ವಿವರ
ಶಿವಮೊಗ್ಗ-125, ಭದ್ರಾವತಿ-58, ಶಿಕಾರಿಪುರ-35, ತೀರ್ಥಹಳ್ಳಿ-04, ಸೊರಬ-09,
ಸಾಗರ-05, ಹೊಸನಗರ-04 ಹಾಗೂ ಬೇರೆ ಜಿಲ್ಲೆಯ 04 ಜನ ಸೋಂಕಿತರು
ಇಂದು ಜಿಲ್ಲೆಯಲ್ಲಿ 1,231 ಜನರಿಗೆ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 699 ಜನರ ವರದಿ ಬಂದಿದೆ.