ETV Bharat / state

ಅಬಕಾರಿ ಪೊಲೀಸರ ಕಾರ್ಯಾಚರಣೆ: ಹೊಲದಲ್ಲಿ ಬೆಳೆದಿದ್ದ 23 ಗಾಂಜಾ ಗಿಡಗಳು ವಶಕ್ಕೆ - Shivamoga Crime News

ಅಬಕಾರಿ ಪೊಲೀಸರು ಸಾಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ದಾಳಿ ನಡೆಸಿ 23 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Shimoga
ಶಿವಮೊಗ್ಗ
author img

By

Published : Oct 8, 2020, 7:25 PM IST

ಶಿವಮೊಗ್ಗ: ಅಬಕಾರಿ ಪೊಲೀಸರು ಸಾಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ದಾಳಿ ನಡೆಸಿ 23 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾಗರ ತಾಲೂಕಿನ ಗೌತಮಪುರ ಗ್ರಾಮ ಪಂಚಾಯತ್​ ವ್ಯಾಪ್ತಿಯ ಭೈರಾಪುರ ಗ್ರಾಮದ ಕಲ್ಲುಗುಡ್ಡೆ ಮಂಜಪ್ಪ ಎಂಬುವರ ಶುಂಠಿ ಬೆಳೆಯ ನಡುವೆ 15 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಇದು ಅಂದಾಜು 75 ಸಾವಿರ ರೂ ಮೌಲ್ಯದ್ದಾಗಿದೆ. ಕೆರೆಗದ್ದೆ ಗ್ರಾಮದ ದೇವರಾಜ್ ಅವರ ಮೆಕ್ಕೆಜೋಳದ ಹಕ್ಕಲಿನಲ್ಲಿ ಬೆಳೆದಿದ್ದ 20 ಸಾವಿರ ರೂ. ಮೌಲ್ಯದ 4 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ.

ಸಾಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಬಕಾರಿ ಪೊಲೀಸರಿಂದ 23 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ.

ಅದೇ ರೀತಿ ಭೈರಾಪುರ ಗ್ರಾಮದ ಸಣ್ಣಪ್ಪ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ 20 ಸಾವಿರ ರೂ. ಮೌಲ್ಯದ 4 ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಮೂರು ಪ್ರಕರಣಗಳಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ದಾಳಿಯನ್ನು ಜಿಲ್ಲಾ ಅಬಕಾರಿ ಆಯುಕ್ತ ಕ್ಯಾಪ್ಟನ್ ಅಜಿತ್ ಅವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಹನುಮಂತಪ್ಪ, ಅಬಕಾರಿ ಉಪ ಆಯುಕ್ತ ಜಾನ್ ಪಿ.ಜೆ, ಅಬಕಾರಿ ಸಿಬ್ಬಂದಿ ರಾಜಮ್ಮ, ಚಂದ್ರಪ್ಪ, ಮುದಾಸೀರ್, ದೀಪಕ್, ಮಹಾಬಲೇಶ್ವರ್, ಬಸವರಾಜ್ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.