ಶಿವಮೊಗ್ಗ: ಸಾಗರ ಉಪವಿಭಾಗಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ 14 ಮಕ್ಕಳು ಇಂಜೆಕ್ಷನ್ ಪಡೆದ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದಾರೆ. ಇದರಲ್ಲಿ ನಾಲ್ವರು ಮಕ್ಕಳ ಸ್ಥಿತಿ ಗಂಭೀರವಾದ ಪರಿಣಾಮ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
14 ಮಕ್ಕಳು ಶೀತ, ಜ್ವರ ಸಂಬಂಧಸಿದಂತೆ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಸಂಜೆ ಆಸ್ಪತ್ರೆಯ ದಾದಿಯರು ಈ ಮಕ್ಕಳಿಗೆ ಆ್ಯಂಟಿ ಬಯೋಟಿಕ್ ಇಂಜೆಕ್ಷನ್ ನೀಡಿದ್ದರು ಎನ್ನಲಾಗ್ತಿದೆ. ಈ ಇಂಜೆಕ್ಷನ್ ಪಡೆದ ಮಕ್ಕಳಲ್ಲಿ ಏಕಾಏಕಿ ಜ್ವರ ತೀವ್ರಗೊಂಡು ಮಕ್ಕಳಲ್ಲಿ ನಡುಕ ಪ್ರಾರಂಭವಾಗಿದೆ.
ಇದರಿಂದ ಪೋಷಕರು ತೀವ್ರ ಗಾಬರಿಯಾಗಿದ್ದಾರೆ. ತಕ್ಷಣ ಆಸ್ಪತ್ರೆಯ ಕರ್ತವ್ಯನಿರತ ವೈದ್ಯರಿಗೆ ತಿಳಿಸಿದ್ದಾರೆ. ಇತ್ತ, ಈ ಮಾಹಿತಿ ಪಡೆದ ಶಾಸಕ ಹಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿ ಪ್ರತಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ, ವೈದ್ಯರ ಜೊತೆ ಸಮಾಲೋಚಿಸಿ ಶಿವಮೊಗ್ಗಕ್ಕೆ ರವಾನೆಯಾದ ಮಕ್ಕಳ ಆರೋಗ್ಯ ಸ್ಥಿತಿಯ ಕುರಿತು ಅಲ್ಲಿನ ವೈದ್ಯರ ಜೊತೆಗೂ ಮಾತನಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಅಂತ್ಯಕ್ರಿಯೆ; ಕುಟುಂಬಸ್ಥರಿಗೆ ಗ್ರಾಮಸ್ಥರ ಸಾಥ್