ಶಿವಮೊಗ್ಗ : ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಮನ್ಸೂರ್ (36)ಗೆ 10 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಪೋಕ್ಸೊ ನ್ಯಾಯಾಲಯ ಆದೇಶ ನೀಡಿದೆ. 2019ರಲ್ಲಿ ನಡೆದ ಪ್ರಕರಣ ಇದಾಗಿದೆ.
ಕಾಮುಕ ಮನ್ಸೂರ್ ತನ್ನ ಎದುರು ಮನೆಯ ಬಾಲಕಿ ತನ್ನ ಮನೆಗೆ ಟಿವಿ ನೋಡಲು ಬಂದಾಗ ಅತ್ಯಾಚಾರ ಎಸಗಿದ್ದ. ಅಲ್ಲದೇ ಈ ಬಗ್ಗೆ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿ, ಬಾಲಕಿಯ ಕೈಯನ್ನು ಬೀಡಿಯಿಂದ ಸುಟ್ಟಿದ್ದ.
ಬಾಲಕಿ ಹೆದರಿ ಯಾರಿಗೂ ಹೇಳದೆ ಸುಮ್ಮನಾಗಿದ್ದಳು. ನಂತರ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿ, ವೈದ್ಯರ ಬಳಿ ತೋರಿಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ತಿಳಿದು ಬಂದಿತ್ತು. ಮನ್ಸೂರ್ ವಿರುದ್ಧ ಕಲಂ 376(2) (ಎನ್), 323, 506 ಐಪಿಸಿ ಹಾಗೂ ಕಲಂ 6 ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಸತೀಶ್ ಅವರು ವಾದ ಮಾಡಿದ್ದರು.
ಇದನ್ನೂ ಓದಿ:ಬಂಟ್ವಾಳದಲ್ಲಿ ಬಾಲಕಿ ಅಪಹರಿಸಿ ಗ್ಯಾಂಗ್ರೇಪ್ ಆರೋಪ; ಇಬ್ಬರು ಪೊಲೀಸರ ವಶಕ್ಕೆ