ಶಿವಮೊಗ್ಗ: ಶಿವಮೊಗ್ಗ ಅಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ನಿಂದ ಜಿಲ್ಲಾಡಳಿತಕ್ಕೆ 10 ಯೂನಿಟ್ ಪ್ಯಾರಾ ಮೀಟರ್ ಮಾನಿಟರ್ ಸಿಸ್ಟಮ್ ಕೊಡುಗೆಯಾಗಿ ನೀಡಲಾಯಿತು.
ಕೋವಿಡ್ ಸಂದರ್ಭದಲ್ಲಿ 10 ಯೂನಿಟ್ನ ಮಾನಿಟರ್ ಸಿಸ್ಟಮ್ ಅನುಕೂಲವಾಗಲಿದ್ದು, ಇದಕ್ಕೆ ಮಲ್ಟಿ ಪ್ಯಾರಾಮೀಟರ್ ಮಾನಿಟರಿಂಗ್ ಸಿಸ್ಟಮ್ ಎಂದು ಕರೆಯುತ್ತಾರೆ.
ಒಬ್ಬ ರೋಗಿಯ 7 ರೋಗಗಳನ್ನು ಅಳೆಯಬಹುದಾಗಿದೆ. ಇದನ್ನು ICUನಲ್ಲಿ ಬಳಸಬಹುದಾಗಿದೆ. ರೋಗಿಗೆ ಅಳವಡಿಸಿ, ವೈದ್ಯರ ಮೊಬೈಲ್ಗೆ ಲಿಂಕ್ ಮಾಡಿಕೊಂಡ ಬಳಿಕ ಐಸಿಯು ಒಳಗೆ ಹೋಗಿ ತಪಾಸಣೆ ನಡೆಸುವ ಅವಶ್ಯಕತೆ ಇರುವುದಿಲ್ಲ. ಇದು ಕೋವಿಡ್ನಂತಹ ಸಂದರ್ಭದಲ್ಲಿ ವೈದ್ಯರಿಗೆ ಅನುಕೂಲವಾಗುತ್ತದೆ. ಇದರ ಒಂದು ಯೂನಿಟ್ಗೆ ಸುಮಾರು 1 ಲಕ್ಷ ರೂ. ವೆಚ್ಚವಾಗುತ್ತದೆ. ಈ ರೀತಿಯ 10 ಯೂನಿಟ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.