ETV Bharat / state

ಊರೂರು ತಿರುಗಿ ದುಡಿದು ಬದುಕುತ್ತಿದ್ದ ಮಹಿಳೆ ಮೇಲೆ ಯುವಕನ ದರ್ಪ : ವಿಡಿಯೋ ವೈರಲ್​​ - ಬನ್ನಿಕುಪ್ಪೆ ಮಹಿಳೆ ಹಲ್ಲೆ ಸುದ್ದಿ

ಫ್ಯಾನ್ಸಿ ವಸ್ತುಗಳನ್ನು ಊರೂರಿಗೆ ತೆರಳಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಬನ್ನಿಕುಪ್ಪೆ ನಿವಾಸಿ ಗೌರಮ್ಮ ಅದೇ ಗ್ರಾಮದ ಕುಮಾರ ಎಂಬಾತ ತನ್ನ ವಸ್ತುಗಳನ್ನು ಕಳ್ಳತನ ಮಾಡಿದ್ದನಂತೆ. ಈ ಕುರಿತು ಪ್ರಶ್ನಿಸಿದಕ್ಕೆ ಕುಪಿತಗೊಂಡ ಕುಮಾರ್​ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿ ದರ್ಪ ಮೆರೆದಿದ್ದಾನೆ.

ರಾಮನಗರ ಮಹಿಳೆ ಮೇಲೆ ಯುವಕನ ದರ್ಪ
author img

By

Published : Oct 19, 2019, 11:45 PM IST

ರಾಮನಗರ : ನಿತ್ಯ ವ್ಯಾಪಾರ ಮಾಡಿ ಜೀವನ‌ಸಾಗಿಸುತ್ತಿದ್ದ ಬಡ ಮಹಿಳೆ‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ‌ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆಸಿದ್ದು, ಇದೀಗ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಣ್ಣ ಪುಟ್ಟ ದಿನಬಳಕೆ ಫ್ಯಾನ್ಸಿ ವಸ್ತುಗಳನ್ನು ಊರೂರಿಗೆ ತೆರಳಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಬನ್ನಿಕುಪ್ಪೆ ನಿವಾಸಿ ಗೌರಮ್ಮ ಅದೇ ಗ್ರಾಮದ ಕುಮಾರ ಎಂಬಾತ ತನ್ನ ವಸ್ತುಗಳನ್ನು ಕಳ್ಳತನ ಮಾಡಿದ್ದನಂತೆ. ಈ ಕುರಿತು ಪ್ರಶ್ನಿಸಿದಕ್ಕೆ ಕುಪಿತಗೊಂಡ ಕುಮಾರ್​ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿ ದರ್ಪ ಮೆರೆದಿದ್ದಾನೆ. ಗೌರಮ್ಮ ಗಂಭೀರ ಗಾಯಗೊಂಡಿದ್ದಾರೆ.

ಇನ್ನು ಹೆದರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಗೌರಮ್ಮನ ಮೇಲೆ ಕುಮಾರ್​ ಪದೇ ಪದೆ ಹಲ್ಲೆ ನಡೆಸಲು ಸಹ ಮುಂದಾಗಿದ್ದಾನೆ. ಹೀಗಾಗಿಯೇ ಕುಮಾರ್ ಮೇಲೆ ಗೌರಮ್ಮ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಊರೂರು ತಿರುಗಿ ದುಡಿದು ಬದುಕುತ್ತಿದ್ದ ಬಡ ಮಹಿಳೆ ಮೇಲೆ ಯುವಕನ ದರ್ಪ

ಈ ಸಂಬಂಧ ಪೊಲೀಸರು, ಕುಮಾರ್ ಹಾಗೂ ಆತನ ತಂದೆ ನಾಗರಾಜ್, ತಾಯಿ ಶಿವಮ್ಮ ವಿರುದ್ಧ ಎಫ್ ಐ ಆರ್ ದಾಖಲು ಮಾಡಿ ಬಂಧಿಸಿದ್ದರು. ಆದರೆ, ಈಗಾಗಲೇ ಜಾಮೀನು ಪಡೆದು ಹೋರ ಬಂದಿರುವ ಕುಮಾರ್​ ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾನೆ.

ಒಟ್ಟಾರೆ ಕಳ್ಳತನ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಓರ್ವ ಬಡ ಮಹಿಳೆ ಎಂಬುದನ್ನು ನೋಡದೇ ನಡು ಬೀದಿಯಲ್ಲೇ ಹಲ್ಲೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.

Intro:Body:ರಾಮನಗರ : ಪ್ರತಿ‌ದಿನ‌ ವ್ಯಾಪಾರ ಮಾಡಿ ಜೀವನ‌ಸಾಗಿಸುತ್ತಿದ್ದ ಮಹಿಳೆ‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ‌ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆಸಿದ್ದು ಇದೀಗ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಕೆಯದ್ದು ಬಡಕುಟುಂಬ. ಸಣ್ಣ-ಪುಟ್ಟ ದಿನಬಳಕೆ ಫ್ಯಾನ್ಸಿ ವಸ್ತುಗಳನ್ನ ಗ್ರಾಮ ಗ್ರಾಮಕ್ಕೆ ಹೋಗಿ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಆಕೆ ಮಾರಾಟ ಮಾಡುತ್ತಿದ್ದ
ವಸ್ತುಗಳನ್ನ ಅದೇ ಗ್ರಾಮದ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ್ದ. ಅದನ್ನ ಆಕೆ ಪ್ರಶ್ನೆ ಮಾಡಿದ್ದಳು. ಆಷ್ಟಕ್ಕೆ ಕುಪಿತಗೊಂಡ ಆತ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿ ದರ್ಪ ಮೆರೆದಿದ್ದಾನೆ. ಹಲ್ಲೆ ಯಲ್ಲಿ ಗೌರಮ್ಮ ಗಂಭೀರ ಗಾಯಗೊಂಡಿದ್ದಾರೆ.
ಕದ್ದಿದ್ದನ್ನ ಪ್ರಶ್ನೆ ಮಾಡಿದ ಮಹಿಳೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಮಹಿಳೆ ಎಂಬುದನ್ನು ನೋಡದೇ ಅವಾಚ್ಯ ಶಬ್ದಗಳಿಂದ ನಿಂಧಿಸಿ, ಮಹಿಳೆಯ ಜಡೆಯನ್ನ ಹಿಡಿದು ನಡುರಸ್ತೆಯಲ್ಲಿಯೇ ಎಳೆದಾಡಿ ಹಲ್ಲೆ ಮಾಡುವ ಮೂಲಕ ಕ್ರೌರ್ಯ ಮೆರೆದಿದ್ದಾನೆ. ಈ ಘಟನೆ ಈಗ ಸಾಕಷ್ಟು ಟೀಕೆಗೂ ಕೂಡ ಗ್ರಾಸವಾಗಿದೆ.

ಈ ರೀತಿ ಕೌರ್ಯ ಮೆರೆದಿರೋನು ಅದೇ ಬನ್ನಿಕುಪ್ಪೆ ಗ್ರಾಮದ ಕುಮಾರ್ ಎಂಬಾತ. ಅದೇ ಗ್ರಾಮದಲ್ಲಿ ಪುಟ್ಟ ಮನೆಯೊಂದರಲ್ಲಿ
ವಾಸ ಮಾಡುತ್ತ, ಸಣ್ಣಪುಟ್ಟ ಫ್ಯಾನ್ಸಿ ವಸ್ತುಗಳನ್ನ ಮಾರಾಟ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು ಗೌರಮ್ಮ. ಆದ್ರೆ ಗ್ರಾಮದಲ್ಲಿ ಸಾಕಷ್ಟು ಬಲಾಡ್ಯನಾಗಿರೋ ಕುಮಾರ್ ನಾನು ಏನು ಮಾಡಿದ್ರು ನನ್ನನ್ನ ಪ್ರಶ್ನೆ ಮಾಡುವವರು ಯಾರು
ಇಲ್ಲ ಅಂತಾ ಈ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಪದೇ ಪದೇ ಹಲ್ಲೆ ನಡೆಸಲು ಸಹ ಮುಂದಾಗುತ್ತಿದ್ದಾನೆ. ಹೀಗಾಗಿಯೇ ಕುಮಾರ್ ಮೇಲೆ ಗೌರಮ್ಮ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು, ಕುಮಾರ್ ಹಾಗೂ ಆತನ ತಂದೆ ನಾಗರಾಜ್, ತಾಯಿ ಶಿವಮ್ಮ ವಿರುದ್ದ ಪೋಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ. ಆದ್ರೆ ಈಗಾಗಲೇ ಜಾಮೀನು ಪಡೆದು ಆತ ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾನೆ.
ಒಟ್ಟಾರೆ ಕಳ್ಳತನ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಆಕೆ ಓರ್ವ ಮಹಿಳೆ ಎಂಬುದನ್ನು ನೋಡದೆ ನಡು ಬೀದಿಯಲ್ಲೇ ಹಲ್ಲೆ ಮಾಡಿದ್ದು ಈ ಕ್ರೌರ್ಯದ ಹಿಂದೆ ಯಾರ್ಯಾರ ಕೈವಾಡ ಇದೆ. ಆತನ ಹಿಂದೆ ಯಾರು ಬಲವಾಗಿ ನಿಂತಿದ್ದಾರೆ ಎಂಬುದು ಪೊಲೀಸರು ತನಿಖೆ ನಡೆಸಿದ ಬಳಿಕವಷ್ಟೆ ಸತ್ಯಾಸತ್ಯತೆ ಹೋರಬೀಳಲಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.