ರಾಮನಗರ: ಗಂಡ, ಹೆಂಡತಿ ಪ್ರಾಣ ಉಳಿಸಲು ಹೋಗಿ ಕೊನೆಗೆ ಇಬ್ಬರೂ ಪ್ರಾಣ ಕಳೆದುಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೂಡ್ಲೂರು ಗ್ರಾಮದ ವೆಂಕಟೇಶ್ (48) ಮತ್ತು ಪಾರ್ವತಮ್ಮ (42) ಸಾವಿಗೀಡಾದ ದಂಪತಿಯಾಗಿದ್ದಾರೆ. ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದ ಕೆರೆಯೊಂದರಲ್ಲಿ ಇವರಿಬ್ಬರು ನೀರಿನಲ್ಲಿ ಮುಳುಗಿ, ಸಾವಿಗೀಡಾಗಿದ್ದಾರೆ.
ಈ ದಂಪತಿ ಕುರಿಗಳ ಮೈ ತೊಳೆಯಲು ಕೆರೆ ಬಳಿಗೆ ಹೋಗಿದ್ದರು. ಈ ವೇಳೆ, ಪತ್ನಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಪತ್ನಿಯನ್ನು ಕಾಪಾಡಲು ಹೋಗಿ ಪತಿಯೂ ಕೂಡ ನೀರಿಗೆ ಧುಮುಕಿದ್ದು, ಬಳಿಕ ಇಬ್ಬರೂ ನೀರಲ್ಲಿ ಮುಳುಗಿದ್ದಾರೆ. ಶವಗಳನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ, ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ಸಂಚರಿಸಿದ ರಸ್ತೆ ಬದಿಯಲ್ಲಿ ಶಾರ್ಟ್ ಸರ್ಕ್ಯೂಟ್: ಕೆಲಕಾಲ ಜನರಲ್ಲಿ ಆತಂಕ