ರಾಮನಗರ: ಮಹಿಳೆಯರಾಗಿ ನಾವು ಗ್ರಾಮ ವಾಸ್ತವ್ಯ ಮಾಡಲು ಕಷ್ಟವಾಗುತ್ತೆ. ನೋಡೋಣಾ ಅದರ ಬಗ್ಗೆ ಯೋಚನೆ ಮಾಡ್ತೇನೆ. ಸಿಎಂ ಅವರ ಕಾಲಾವಕಾಶ ಪಡೆದು ಗ್ರಾಮವಾಸ್ತವ್ಯಕ್ಕೆ ನಿಗದಿ ಮಾಡ್ತೇವೆ. ರಾಮನಗರ ಕ್ಷೇತ್ರದಲ್ಲೂ ಅವರು ಗ್ರಾಮವಾಸ್ತವ್ಯ ಮಾಡಲಿ ಅನ್ನೋದು ನಮ್ಮ ಆಶಯ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಮನಗರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಪರಿಶೀಲನೆ ಸಂಬಂಧ ಭೇಟಿ ನೀಡಿದ ಅನಿತಾ ಕುಮಾರಸ್ವಾಮಿ, ಇವತ್ತಿನ ಭೇಟಿ ವಿಶೇಷ ಏನಿಲ್ಲ ರೆಗ್ಯೂಲರ್ ಆಗಿ ಬರ್ತಾನೆ ಇರ್ತೇನಿ ಇದರಲ್ಲಿ ಹೊಸತೇನೂ ಇಲ್ಲ. ಚುನಾವಣಾ ನೀತಿ ಸಂಹಿತೆ ಇದ್ದುದರಿಂದ ಕೆಲವು ದಿನಗಳು ಬರಲು ಸಾಧ್ಯವಾಗಿರಲಿಲ್ಲ ಅಷ್ಟೇ. ಹೊರಗಡೆ ಕುಳಿತು ನೀವು ಟೀಕೆ ಮಾಡುವುದು ಸುಲಭ. ಆದರೆ, ಸಾಮಾನ್ಯರ ಜೊತೆ ಒಡನಾಡಿಗಳಾಗಿ ಕೆಲಸ ಮಾಡೋದು ಕಷ್ಟ. ಗ್ರೌಂಡ್‌ಗೆ ಇಳಿದು ಕೆಲಸ ಮಾಡ್ತೀವಲ್ಲಾ ಅದರ ಕಷ್ಟ ನಮಗೆ ಗೊತ್ತಿರುತ್ತೆ ಎಂದರು. ಇನ್ನು, ಗ್ರಾಮವಾಸ್ತವ್ಯ ಹೂಡಿದ್ದ ಜಟ್ಟಿದೊಡ್ಡಿ ಗ್ರಾಮದಲ್ಲಿ ಕೊಟ್ಟ ಭರವಸೆಗಳ ಈಡೇರಿಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಕ್ಷೇತ್ರಕ್ಕಿಂತ ಮುಂಚೆ ರಾಮನಗರ ಮುಖ್ಯ. ಭರವಸೆಗಳನ್ನೆಲ್ಲಾ ಈಡೇರಿಸುವುದು ಕಷ್ಟವಾಗುತ್ತೆ. ಎಲ್ಲದಕ್ಕೂ, ಮುಂದಿನ ದಿನಗಳಲ್ಲಿ ನೋಡಿ ಮಾಡ್ತೇವೆ ಯಾವುದೇ ಕಾರಣಕ್ಕೂ ಮಾತು ತಪ್ಪಲ್ಲ ಎಂದು ಭರವಸೆ ನೀಡಿದರು.
ಮಾಧ್ಯಮದವರಿಗೆ ಒಂದು ರಿಕ್ವೆಸ್ಟ್ ಎಲ್ಲದರಲ್ಲೂ ತಪ್ಪು ಕಂಡು ಹಿಡಿಯಲು ಹೋಗಬೇಡಿ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಸ್ವಲ್ಪ ಕೆಲಸ ಮಾಡಿ ಕಷ್ಟ ಏನು ಎಂಬುದು ಅರಿವಾಗುತ್ತೆ. ನಿಮಗೂ ಎಕ್ಸ್‌ಪೀರಿಯನ್ಸ್ ಆಗಬೇಕು. ಯಾರನ್ನಾದ್ರೂ ಗ್ರಾಮ ಪಂಚಾಯತ್ ಎಲೆಕ್ಷನ್‌ಗೆ ನಿಲ್ಲಿಸಿ ಎಂದು ಮಾಧ್ಯಮದವರಿಗೆ ಸಲಹೆ ನೀಡಿದ್ದಾರೆ.