ETV Bharat / state

ರಾಮನಗರ: ನೀರಿನ ಟ್ಯಾಂಕ್​ ಗೋಡೆ ಕುಸಿದು ವಿದ್ಯಾರ್ಥಿ ಸಾವು, ಮತ್ತೋರ್ವನಿಗೆ ಗಂಭೀರ ಗಾಯ - ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ

ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

A student died after water tank wall collapsed
ನೀರಿನ ಟ್ಯಾಂಕ್​ ಗೋಡೆ ಕುಸಿದು ವಿದ್ಯಾರ್ಥಿ ಸಾವು
author img

By ETV Bharat Karnataka Team

Published : Sep 21, 2023, 2:23 PM IST

ರಾಮನಗರ: ವಸತಿ ಶಾಲೆಯ ನೀರಿನ ಟ್ಯಾಂಕ್​ ಕುಸಿದು ಓರ್ವ ಬಾಲಕ ಸಾವನ್ನಪ್ಪಿ, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಚನ್ನಪಟ್ಟಣ ತಾಲ್ಲೂಕಿನ ಎಚ್.ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು, 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕೌಶಿಕ್ ಸಾವನ್ನಪ್ಪಿದ್ದಾನೆ.

ಹಾಸ್ಟೆಲ್ ಹೊರಗೆ ನೀರಿನ ಸಿಮೆಂಟ್ ಟ್ಯಾಂಕ್​ ನಿರ್ಮಾಣ ಮಾಡಲಾಗಿತ್ತು. ಈ ಟ್ಯಾಂಕ್​ಗೆ ನಲ್ಲಿಗಳನ್ನು ಅಳವಡಿಸಲಾಗಿತ್ತು. ವಿದ್ಯಾರ್ಥಿಗಳು ಬೆಳಗ್ಗೆ ಮುಖ ತೊಳೆದುಕೊಳ್ಳಲು ಇದೇ ಟ್ಯಾಂಕ್​ ಬಳಿ ಹೋಗಿದ್ದಾರೆ. 30-40 ವಿದ್ಯಾರ್ಥಿಗಳು ಜೊತೆಯಲ್ಲಿ ಹೋಗಿ ಮುಖ ತೊಳೆದುಕೊಂಡು‌ ಬಂದಿದ್ದಾರೆ. ನಂತರ ಕೌಶಿಕ್ ಹಾಗೂ ಸ್ನೇಹಿತ ಇಬ್ಬರೇ ಟ್ಯಾಂಕ್​ ಬಳಿ ಹೋದಾಗ ಟ್ಯಾಂಕ್​ನ ಎರಡು ಕಡೆಯ ಗೋಡೆ ಒಮ್ಮೆಲೆ ಕುಸಿದು ಇವರ ಮೇಲೆ ಬಿದ್ದಿದೆ.

ಗೋಡೆ ಕೌಶಿಕ್ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೋರ್ವ ವಿದ್ಯಾರ್ಥಿಯ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಮೃತ ವಿದ್ಯಾರ್ಥಿಯ ಶವವನ್ನು ದಯಾನಂದ ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬಳ್ಳಾರಿ: ಬಸ್​ ಪಲ್ಟಿಯಾಗಿ ಶಾಲಾ ಮಕ್ಕಳು ಸೇರಿ 40ಕ್ಕೂ ಹೆಚ್ಚು ಜನರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.