ರಾಮನಗರ: ಮಾಗಡಿಯಲ್ಲಿ SSLC ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ 10 ಜನ ಆರೋಪಿಗಳನ್ನು ಗುರುತಿಸಿದ್ದು, ಈಗಾಗಲೇ 8 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈಗ ಅವರನ್ನು ತೀವ್ರ ವಿಚಾರಣೆ ಮಾಡಲಾಗುತ್ತಿದೆ ಎಂದು ರಾಮನಗರ ಎಸ್ಪಿ ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ. ರಂಗೇಗೌಡ, ಕೆಂಪೇಗೌಡ ಪ್ರೌಢಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸ, ಶ್ರೀನಿವಾಸಯ್ಯ, ಅರ್ಜುನ್, ನಾಗರಾಜು, ಅಲೀಮ್ ಉಲ್ಲಾ, ನಾಗರಾಜು, ಕೃಷ್ಣಮೂರ್ತಿ, ಲೋಕೇಶ್, ವಿಜಯ್ ಆರೋಪಿಗಳು.
ಇಂದು ರಾಮನಗರದಲ್ಲಿ ಈ ಕುರಿತು ಮಾತನಾಡಿದ ಎಸ್ಪಿ ಅವರು, ಕೆಂಪೇಗೌಡ ಪ್ರೌಢಶಾಲೆಯ ಪ್ರಾಂಶುಪಾಲ ಶ್ರೀನಿವಾಸ್, ಕ್ಲರ್ಕ್ ರಂಗೇಗೌಡ, ರಂಗನಾಥ ಶಾಲೆಯ ಕೃಷ್ಣಮೂರ್ತಿ ಸೇರಿ 5 ಜನ ಶಿಕ್ಷಕರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಠಾಣೆಗೆ ದೂರು ನೀಡಿದ್ದ ದೇವರಾಜ್ ಎಂಬಾತನನ್ನು ವಿಚಾರಣೆ ಮಾಡಲಾಗುತ್ತಿದೆ. ಕೆಂಪೇಗೌಡ ಪ್ರೌಢಶಾಲೆ ಪರೀಕ್ಷಾ ಕೇಂದ್ರ ಇರಲಿಲ್ಲ. ರಂಗನಾಥ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ಇತ್ತು. ಆದರೆ ಕೃಷ್ಣಮೂರ್ತಿ ಪ್ರಶ್ನೆ ಪತ್ರಿಕೆಯನ್ನು ರಂಗೇಗೌಡನಿಗೆ ಕೊಟ್ಟಿರುವ ಮಾಹಿತಿ ಇದೆ ಎಂದು ತಿಳಿಸಿದರು.
![Question Paper leak Accused](https://etvbharatimages.akamaized.net/etvbharat/prod-images/15388812_accusedsslc.jpg)
ಪರೀಕ್ಷೆ ಪ್ರಾರಂಭ ಆಗುತ್ತಿದ್ದಂತೆ ಕೊಡುತ್ತಿದ್ದ ಬಗ್ಗೆ, ರಂಗೇಗೌಡ ಪ್ರಶ್ನೆ ಪತ್ರಿಕೆಯನ್ನು ತುಂಬಿ ಕೃಷ್ಣಮೂರ್ತಿಗೆ ಕೊಡುತ್ತಿದ್ದ ಮಾಹಿತಿ ಗೊತ್ತಾಗಿದೆ. ಇದರಲ್ಲಿ ಸ್ಥಳೀಯ ಪತ್ರಕರ್ತ ಎಂದು ಹೇಳಿಕೊಳ್ಳುತ್ತಿದ್ದ ಓರ್ವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದೂರುದಾರ ದೇವರಾಜ್ ಹಾಗೂ ಸ್ಥಳೀಯ ಪತ್ರಕರ್ತ ತಲಾ 10 ಸಾವಿರ ಹಣ ಪೀಕಿರುವ ಬಗ್ಗೆ ಮಾಹಿತಿ ಕೂಡ ಇದೆ ಎಂದು ತಿಳಿಸಿದರು.
![Question Paper leak Accused](https://etvbharatimages.akamaized.net/etvbharat/prod-images/15388812_sslcaccused.jpg)
ಮಕ್ಕಳಿಗೆ ಸಹಾಯ ಮಾಡಲು ಈ ರೀತಿ ಮಾಡಿದ್ದೇವೆಂದು ಕೆಲವರು ಹೇಳಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಮತ್ತಷ್ಟು ಜನ ಸೇರಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಾಮನಗರದಲ್ಲಿ ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ.
![Question Paper leak Accused](https://etvbharatimages.akamaized.net/etvbharat/prod-images/15388812_sslc.jpg)
ಇದನ್ನೂ ಓದಿ: ಬಿಜೆಪಿ ಪಠ್ಯ ಸಂಸ್ಕರಣ ಮಾಡುತ್ತಿದ್ದಂತೆ, ನಿಮಗೆ ಚಾತುರ್ವರ್ಣದ ನೆನಪಾಗುತ್ತಿದೆ: ಬಿ.ಸಿ.ನಾಗೇಶ್