ರಾಮನಗರ: ರಾಮನಗರ ತಾಲೂಕಿನ ಹಲವೆಡೆ ಶನಿವಾರ ಬೆಳಗ್ಗೆಯಿಂದ ರಾತ್ರಿವರೆಗೆ ಜನರಿಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಈ ಹಿನ್ನೆಲೆ ಜಿಯಾಲಿಜಿಸ್ಟ್ ಲೋಕೇಶ್ ಅವರು ಇಂದು ತಾಲೂಕಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ರಿಕ್ಟರ್ ಮಾಪಕದಲ್ಲಿ ಭೂಮಿ ಕಂಪನ ಆಗಿರುವ ಬಗ್ಗೆ ದಾಖಲಾಗಿಲ್ಲ. ಭೂಮಿಯೊಳಗಿನ ನೀರಿನ ಸೆಲೆಯಲ್ಲಿ ನೀರು ಹರಿದಿರುವುದರಿಂದ ಶಬ್ದ ಬಂದಿರಬಹುದು ಎಂದಿದ್ದಾರೆ.
ರಾಮನಗರ ತಾಲೂಕಿನ ಪಾದರಹಳ್ಳಿ ಮತ್ತು ಬೆಜ್ಜರಹಳ್ಳಿ ಕಟ್ಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಮಿಯಿಂದ ಭಾರೀ ಶಬ್ದ ಕೇಳಿ ಬಂದಿದ್ದಾಗಿ ಜಿಯಾಲಜಿಸ್ಟ್ ಲೋಕೇಶ್ ಅವರಿಗೆ ಗ್ರಾಮಸ್ಥರು ತಿಳಿಸಿದ್ದಾರೆ.
ಕಂಪಿಸಿದ ಅವಧಿ: ರಾಮನಗರ ತಾಲೂಕಿನ ಪಾದರಹಳ್ಳಿ, ಬೆಜ್ಜರಹಳ್ಳಿಕಟ್ಟೆ ಹಾಗೂ ತಿಮ್ಮಸಂದ್ರ ಗ್ರಾಮಗಳ ಸುತ್ತಮುತ್ತಲು ಶನಿವಾರ ಬೆಳಗ್ಗೆ 5. 30, ಸಂಜೆ 5. 40, ರಾತ್ರಿ 7.15 ಹಾಗೂ ರಾತ್ರಿ 8 ಗಂಟೆ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಜನರಿಗೆ ಮೂರು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿದುಬಂದಿದೆ.
ಓದಿ: ಉತ್ತರಕನ್ನಡದಲ್ಲಿ ಭಾರಿ ಮಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಸಿದ ಭೂಮಿ