ETV Bharat / state

ಗುಂಡಿಗೆ ಬಿದ್ದು ಹಸು: ರಾಮನಗರ ಅಕ್ರಮ ಮರಳು ಗಣಿಗಾರಿಕೆಗೆ ಇನ್ನೆಷ್ಟು ಬಲಿ? - ಲೆಟೆಸ್ಟ್ ರಾಮನಗರ ಅಕ್ರಮ ಮರಳುಗಾರಿಕೆ ನ್ಯೂಸ್

ರಾಮನಗರ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ದಂಧೆ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇನ್ನು ದಂಧೆಗೆ ಬ್ರೇಕ್​ ಹಾಕುವವರು ಇಲ್ಲದಂತಾಗಿದೆ ಅಂತಿದ್ದಾರೆ ಸಾರ್ವಜನಿಕರು.

ರಾಮನಗರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಪ್ರಶ್ನಿಸುವವರಿಲ್ಲ
author img

By

Published : Nov 12, 2019, 7:52 AM IST

ರಾಮನಗರ: ಜಿಲ್ಲೆಯಾದ್ಯಂತ ಅಕ್ರಮ ಮರಳುಗಾರಿಕೆ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಇದರ ವಿರುದ್ಧ ಕಟ್ಟುನಿಟ್ಟಿನ‌ ಕ್ರಮ‌ಕ್ಕೆ ಮುಂದಾಗಿದ್ದರೂ ಮರಳು ದಂಧೆಕೋರರು ಕ್ಯಾರೇ ಎನ್ನುತ್ತಿಲ್ಲವಂತೆ.

ರಾಮನಗರ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ: ಗುಂಡಿಗೆ ಬಿದ್ದು ಹಸು ಸಾವು

ಇನ್ನು, ತಾಲೂಕಿನ ಬಿಡದಿ ಹೋಬಳಿಯ ಬಿ. ಬನ್ನಿಕುಪ್ಪೆ ಗ್ರಾಮದಲ್ಲಿ ಅಕ್ರಮ‌ ಫಿಲ್ಟರ್‌ ಮರಳು ಗಣಿಗಾರಿಕೆಯಿಂದ ಉಂಟಾದ ಗುಂಡಿಗೆ ಹಸುವೊಂದು ಬಿದ್ದಿದ್ದು, ಸ್ಥಳೀಯರು ಜೆಸಿಬಿ ಯಂತ್ರ ಬಳಸಿ‌ ಜಾನುವಾರುವನ್ನು ರಕ್ಷಿಸಿದ್ದಾರೆ. ಅಕ್ರಮ‌ ಮರಳು ಮಾಫಿಯಾಗೆ ಹಲವು ಪ್ರಾಣಿಗಳು ಬಲಿಯಾಗಿದ್ದು, ಫಿಲ್ಟರ್ ಮರಳು ಮಾಫಿಯಾ ದಂಧೆ ಎಗ್ಗಿಲ್ಲದೆ ಸಾಗಿದೆ. ಅಲ್ಲದೇ, ರಾಸು ಗುಂಡಿಗೆ ಬಿದ್ದ ಪ್ರಕರಣ ಹಸಿರಾಗಿದ್ದರೂ ಸಹ ಪೊಲೀಸರೇ ದಂಧೆಕೋರರಿಗೆ ಸಹಕರಿಸುತ್ತಿದ್ದಾರೆಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

ಹಾಗೇನಾದರೂ ನೇರವಾಗಿ‌ ಹೇಳಲು ಮುಂದೆ ಬಂದರೆ, ವಿನಾ‌ಕಾರಣ ದಂಧೆಕೋರರ ಜೊತೆಗೆ ಸಾಥ್ ನೀಡುವ ಅಧಿಕಾರಿಗಳು ವಿರೋಧಿಸುವವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಾರೆಂದು ಸಾರ್ವಜನಿಕರು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಇತ್ತ ಗಮನಹರಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನೂಪ್ ಎ.ಶೆಟ್ಟಿ ಅವರು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ‌ ಕೈಗೊಂಡು, ಮರಳು ಮಾಫಿಯಾಗೆ ಬ್ರೇಕ್​ ಹಾಕಬೇಕಿದೆ.

Intro:Body:ರಾಮನಗರ : ಜಿಲ್ಲೆಯಾಧ್ಯಂತ ಅವ್ಯಾಹತ ಮರಳುಗಣಿಗಾರಿಕೆ ಹೆಚ್ಚಾಗಿದ್ದು ಹೇಳೋರು ಕೇಳೋರು ಇಲ್ಲದಂತಾಗಿದೆ. ಮೇಲ್ನೋಟಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಿನ‌ ಕ್ರಮ‌ಕೈಗೊಳ್ಳುವಂತೆ ಸೂಚಿಸಿದ್ದರೂ ಲೆಕ್ಕಿಸದ‌ ದಂಧೆಕೋರರು ಇಲಾಖೆಯಲ್ಲಿನ‌ತಿಮಿಂಗಲಗಳನ್ನು ಬುಟ್ಟಿಗೆ ಹಾಕಿಕೊಂಡು ಅಲ್ಎಮ‌ಮರಳು‌ಮಾಫಿಯಾವನ್ನು ಸದ್ದಿಲ್ಲದೆ ನಡೆಸುತ್ತಿದ್ದಾರೆ.
ತಾಲ್ಲೂಕಿನ ಬಿಡದಿ ಹೋಬಳಿಯ ಬಿ. ಬನ್ನಿಕುಪ್ಪೆ ಗ್ರಾಮದಲ್ಲಿ ಅಕ್ರಮ‌ ಫಿಲ್ಟರ್‌ ಮರಳು ಗಣಿಗಾರಿಕೆಯಿಂದ ಉಂಟಾದ ಗುಂಡಿಗೆ ಹಸುವೊಂದು ಬಿದ್ದಿದ್ದು, ಸ್ಥಳೀಯರು ಜೆಸಿಬಿ ಯಂತ್ರ ಬಳಸಿ‌ ಜಾನುವಾರುವನ್ನು ರಕ್ಷಿಸಿದ್ದಾರೆ.
ಅಕ್ರಮ‌ ಮರಳು ಮಾಫಿಯಾಗಿ ಹಲವು ಪ್ರಾಣಗಳು ಬಲಿಯಾಗಿದ್ದು ಜಿಲ್ಲೆಯಲ್ಲಿ ಇನ್ನೂ ಅಕ್ರಮ‌ ಪಿಲ್ಟರ್ ಮರಳು ಮಾಫಿಯಾ ಮುಂದುವರಿಯುತ್ತಿದೆ.ಇನ್ನು ರಾಸು ಗುಂಡಿಗೆ ಬಿದ್ದ ಪ್ರಕರಣ ಹಸಿರಾಗಿದ್ದರೂ ಪೋಲೀಸರೇ ದಂಧೆಕೋರರಿಗೆ ಸಹಕರಿಸುತ್ತಿದ್ದಾರೆಂದು ಬಿಡದಿಯ ನಟರಾಜ್‌ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೇನಾದರೂ ನೇರವಾಗಿ‌ ಹೇಳಲು ಮುಂದೆ ಬಂದರೆ ವಿನಾ‌ಕಾರಣ ದಂಧೆಕೋರರ ಜೊತೆಗೆ ಸಾಥ್ ನೀಡುವ ಅಧಿಕಾರಿಗಳು ವಿರೋಧಿಸುವವರ ಮೇಲೆ ಸುಳ್ಳು ಪ್ರಕರಣ ನೀಡಿ ಕಿರುಕುಳ ನೀಡುತ್ತಾರೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳಾದ ಅನೂಪ್ ಎ.ಶೆಟ್ಟಿ ಸಂಬಂಧಪಟ್ಟವರ ಮೇಲೆ ಕ್ರಮ‌ ಕೈಗೊಂಡು ಅಕ್ರಮ‌ಮರಳು ಮಾಫಿಯಾಗೆ ತಡೆಯೊಡ್ಡಬೇಕಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.