ರಾಮನಗರ: ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣದ 54 ಆರೋಪಿಗಳನ್ನು ಇಂದು ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡುವ ಬಗ್ಗೆ ಡಿಜಿಪಿ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಕಾರಾಗೃಹದ 177 ಜನ ವಿಚಾರಣಾಧೀನ ಕೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಹಿನ್ನೆಲೆ ಜೈಲಿನ ಬಳಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅದಕ್ಕಾಗಿ ಬೆಂಗಳೂರು,ಮೈಸೂರು ಹೆದ್ದಾರಿಯಲ್ಲಿನ ಜೈಲ್ ಬಳಿ ಬ್ಯಾರಿಕೇಡ್ ಹಾಕಲಾಗಿದೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಮೂರು ಬ್ಯಾಚ್ಗಳ ಮೂಲಕ ವಿಚಾರಣಾಧೀನ ಆರೋಪಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ ಎನ್ನಲಾಗಿದೆ. ರಾಮನಗರ ಜೈಲಿನಲ್ಲಿರುವ ಆರೋಪಿಗಳ ಶಿಫ್ಟ್ ಬಳಿಕ ಪಾದರಾಯನಪುರದ ಆರೋಪಿಗಳನ್ನು ಕರೆ ತರಲಾಗುತ್ತದೆ.
ಹೆಚ್ಚಿದ ಆತಂಕ : ತಬ್ಲಿಘಿ ಜಮಾತ್ನಿಂದ ಬಂದ ಆಸಾಮಿಗಳಿಂದ ಬೆಂಗಳೂರು ಸೇರಿ ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿ ಕಾಣಿಸಿಕೊಂಡಿದೆ. ಬೆಂಗಳೂರಲ್ಲಿ ಸಿಂಹಪಾಲು ಪಾದರಾಯನಪುರ ಎಂದರೂ ತಪ್ಪಲ್ಲ. ಬಂಧಿತ ಆರೋಪಿಗಳಿಗೆ ಕೊರೊನಾ ಸೋಂಕು ಇರಬಹುದೇನೋ ಎಂಬ ಅನುಮಾನದ ಹಿನ್ನೆಲೆ ಕ್ವಾರಂಟೈನ್ ಮಾಡಲಾಗುತ್ತಿದೆ. ಅದಕ್ಕಾಗಿ ರಾಮನಗರ ಜೈಲನ್ನು ಕ್ವಾರಂಟೈನ್ ಮಾಡಿ 54 ಜನ ಆರೋಪಿಗಳನ್ನು ಶಿಫ್ಟ್ ಮಾಡಲಾಗುತ್ತಿದೆ. ಇದು ಹಸಿರು ಜೋನ್ನಲ್ಲಿರುವ ರಾಮನಗರದ ಜನರ ಆತಂಕಕ್ಕೆ ಕಾರಣವಾಗಿದೆ. ಆದರೂ ಸರ್ಕಾರ ಮತ್ತು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.