ರಾಮನಗರ : ಕೊರೊನಾ ಎರಡನೇ ಅಲೆ ಅಬ್ಬರ ಬಲು ಜೋರಾಗಿದೆ. ಇತ್ತ ಚನ್ನಪಟ್ಟಣದಲ್ಲಿ ನಗರಸಭೆ ಚುನಾವಣೆ ಪ್ರಚಾರದಲ್ಲಿ ರಾಜಕಾರಣಿಗಳು ಕೊರೊನಾ ನೀತಿ ನಿಯಮಗಳನ್ನ ಗಾಳಿಗೆ ತೂರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಮೊನ್ನೆಯಷ್ಟೆ ರಾಮನಗರ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಾಗಿದೆ. ಸರ್ಕಾರದ ಆದೇಶವನ್ನೇ ಇಲ್ಲಿ ಗಾಳಿಗೆ ತೂರಲಾಗಿದೆ. ಈ ವೇಳೆ ನಾನು ಸುಮ್ಮನೇ ಬಂದಿದ್ದೇನೆ ಅಷ್ಟೇ. ಯಾವುದೇ ವಿಷಯದ ಬಗ್ಗೆ ಮಾತನಾಡಲ್ಲ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಓದಿ : ಬಿಡಿಎ ಮೂಲೆ ನಿವೇಶನಗಳ ಹರಾಜಿನ ಜಾಹೀರಾತಿಗೆ ಕೋಟಿ ಕೋಟಿ ಹಣ ಖರ್ಚು!