ETV Bharat / state

ಟೌನ್​ಶಿಪ್​​ ಹೆಸರಿನಲ್ಲಿ ಅಕ್ರಮದ ವಾಸನೆ: ಹೋರಾಟದ ಎಚ್ಚರಿಕೆ ನೀಡಿದ ಮಾಜಿ ಶಾಸಕ

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಟೌನ್ ಶಿಪ್ ಆರಂಭವಾಗಿದೆ. ಟೌನ್​​ಶಿಪ್ ಹೆಸರಿನಲ್ಲಿ ಅಕ್ರಮದ ವಾಸನೆ ಕೇಳಿ ಬರುತ್ತಿದೆ. 30 ಗ್ರಾಮಗಳ ಹತ್ತು ಸಾವಿರ ರೈತ ಕುಟುಂಬಗಳನ್ನು ಟೌನ್ ಶಿಪ್ ನೆಪದಲ್ಲಿ ರೆಡ್ ಬೆಲ್ಟ್ ಮಾಡಿದ್ದು, ರೈತರಿಗೆ ತೊಂದರೆ ಆಗಿದೆ. ಇದೀಗ ಕೆಲವೇ ಕೆಲವು ರೈತರ ಜಮೀನು ಖರೀದಿಸಿದ ಕೆಐಎಡಿಬಿ ಎಲ್ಲರ ಜಮೀನು ಸ್ವಾಧೀನ ಪಡಿಸಿಕೊಳ್ಳಲಿ. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಮಾಜಿ ಶಾಸಕ ಹೆಚ್​.ಸಿ. ಬಾಲಕೃಷ್ಣ ಹೇಳಿದ್ದಾರೆ.

ಟೌನ್​ಶಿಪ್​​ ಹೆಸರಿನಲ್ಲಿ ಅಕ್ರಮದ ವಾಸನೆ
ಟೌನ್​ಶಿಪ್​​ ಹೆಸರಿನಲ್ಲಿ ಅಕ್ರಮದ ವಾಸನೆ
author img

By

Published : May 6, 2020, 4:17 PM IST

ರಾಮನಗರ: ಟೌನ್​​ಶಿಪ್ ಹೆಸರಿನಲ್ಲಿ ಅಕ್ರಮದ ವಾಸನೆ ಕೇಳಿ ಬರುತ್ತಿದೆ. ಕೂಡಲೇ ಸ್ವಾಧೀನ ಕಾರ್ಯ ನಿಲ್ಲಿಸಿ, ರೆಡ್ ಝೋನ್​​ನಲ್ಲಿರುವ ಬಿಡದಿ ಹೊಸೂರು ಭಾಗದ ರೈತರ ಹತ್ತು ಸಾವಿರ ಎಕರೆ ಭೂಮಿಯನ್ನು ಖರೀದಿಸಿ. ಇಲ್ಲವಾದರೆ ಎಲ್ಲೋ ಝೋನ್ ಮಾಡಿ, ಒಂದು ವೇಳೆ ಹೀಗೆ ಮಾಡದಿದ್ರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮಾಜಿ ಶಾಸಕ‌ ಹೆಚ್.ಸಿ. ಬಾಲಕೃಷ್ಣ ಎಚ್ಚರಿಸಿದ್ದಾರೆ.

ಬಿಡದಿಯ ಹೊಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಟೌನ್ ಶಿಪ್ ಆರಂಭವಾಗಿದೆ. ಪ್ರಭಾವಿಗಳಾದ ನಾಲ್ಕು ಜನರ ಜಮೀನು ಸ್ವಾಧೀನ ಆಗ್ತಿದೆ. ಆದ್ರೆ ಎಲ್ಲರ ಜಮೀನು ಅಂತಂತ್ರಕ್ಕೆ ಸಿಲುಕುತ್ತೆ. ಹೀಗಾಗಿ ಯಾವುದೇ ಪರಾಭಾರೆ‌ ಸೇರಿದಂತೆ ಏನನ್ನೂ ಮಾಡಲಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದು, 2006 ರಿಂದ ಇಲ್ಲಿಯವರೆವಿಗೂ ಜಮೀನುಗಳು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ರೈತರ ಬಗ್ಗೆ ಕ್ರಮ ವಹಿಸದಿದ್ದರೆ ಸಿಎಂ‌ ಮನೆ ಎದುರು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ರು.

ನಾನು ಸೇರಿದಂತೆ ಎಲ್ಲಾ ರಾಜಕಾರಣಿಗಳ ಪಾಲುದಾರಿಕೆ‌ ಕೂಡ ಇದರಲ್ಲಿ ಇದೆ. ಹೆಚ್​​ಡಿಕೆ ಎರಡು ಭಾರಿ ಮುಖ್ಯಮಂತ್ರಿ ಆದಾಗಲೂ ಯಾವುದೇ ಕ್ರಮ ವಹಿಸಿಲ್ಲ. ಈ ಭಾಗದ ರೈತರು ಬಹಳ ಆಶಾದಾಯಕ ನಿರೀಕ್ಷೆ ಇಟ್ಟುಕೊಂಡಿದ್ದರು. ಹೆಚ್​​ಡಿಕೆ ಮತ್ತು ಹೆಚ್.ಡಿ. ದೇವೇಗೌಡರನ್ನ ಅತಿಯಾಗಿ ಇಲ್ಲಿನ ಜನ ಪ್ರೀತಿಸುತ್ತಿದ್ದರು. ಆದರೆ, ರೈತರ ಸಮಸ್ಯೆ ಬಗ್ಗೆ ಗಮನ ಹರಿಸಬೇಕಿತ್ತು. ನಿರ್ಲಕ್ಷ್ಯಕ್ಕೆ ಕಾರಣ ಏನು ಅಂತಾಗೊತ್ತಿಲ್ಲ ಎಂದರು.

ಕಿಕ್ ಬ್ಯಾಕ್ ಆರೋಪ :

ಈ ಸ್ವಾದೀನ‌ ಪ್ರಕ್ರಿಯೆಯಲ್ಲಿ ಅಕ್ರಮದ ವಾಸನೆ‌ಯಿಂದ‌ ಕಿಕ್ ಬ್ಯಾಕ್ ಸೊಲ್ಲು ಹರಿದಾಡುತ್ತಿದ್ದು, ಮುಂದಿನ‌ ದಿನಗಳಲ್ಲಿ ಯಾರು ಎಷ್ಟು ಪಡೆದಿದ್ದಾರೆ ಎಂಬುದನ್ನ ಕಲೆಹಾಕಿ ಮಾಧ್ಯಮದ ಮುಂದೆ ಇಡುತ್ತೇವೆ ಎಂದರು. ಇನ್ನು ಹಾಲಿ ಶಾಸಕರು ಸ್ಥಳೀಯರಾಗಿದ್ದು ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ನಿಪುಣರೂ ಕೂಡ, ಆದರೆ, ಅವರು ಯಾಕೆ ತಲೆಕೆಡಿಸಿಕೊಂಡಿಲ್ಲ ಅಂತಾ ಗೊತ್ತಿಲ್ಲ. ಸ್ಥಳೀಯರು ಹಲವು ಭಾರಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಶಾಸಕ‌ ಎ.ಮಂಜುನಾಥ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

30 ಗ್ರಾಮಗಳ ರೈತರು ಅತಂತ್ರ :

30 ಗ್ರಾಮಗಳ ಹತ್ತು ಸಾವಿರ ರೈತ ಕುಟುಂಬಗಳನ್ನು ಟೌನ್ ಶಿಪ್ ನೆಪದಲ್ಲಿ ರೆಡ್ ಬೆಲ್ಟ್ ಮಾಡಿದ್ದು, ರೈತರಿಗೆ ತೊಂದರೆ ಆಗಿದೆ. ಇದೀಗ ಕೆಲವೇ ಕೆಲವು ರೈತರ ಜಮೀನು ಖರೀದಿಸಿದ ಕೆಐಎಡಿಬಿ ಎಲ್ಲರ ಜಮೀನು ಸ್ವಾಧೀನ ಪಡಿಸಿಕೊಳ್ಳಲಿ. ಇಲ್ಲ ಝೋನ್‌ ರಿಲೀಸ್ ಮಾಡಲಿ ನಂತರ ಅವರಿಗೆ ಬೇಕಾದ ಜಮೀನು ಖರೀದಿಸಲಿ. ಇಲ್ಲವಾದ್ರೆ ಉಗ್ರ ಹೋರಾಟ ಅನಿವಾರ್ಯ ಎಂದರು.

ಹೆಚ್​​ಡಿಕೆ ಕನಸು ಏನಾಯ್ತು? :

ಬಿಡದಿ ಟೌನ್ ಶಿಪ್ ಅನ್ನೋದು ಹೆಚ್​​ಡಿಕೆ ಕೂಸಿದು. ಅವರ ಪಕ್ಷದ ಶಾಸಕರ ವ್ಯಾಪ್ತಿಯಲ್ಲಿದ್ದು ಅವರೇ ಉತ್ತರ ಕೊಡಬೇಕು. ಸರ್ಕಾರದಲ್ಲಿ ಹೆಚ್​​ಡಿಕೆ‌ ಪ್ರಭಾವ ಹೆಚ್ಚಿದೆ ಅವರು ಮನಸ್ಸು ಮಾಡಿದ್ರೆ ಎಲ್ಲಾ ಸಾಧ್ಯವಾಗುತ್ತೆ. ಕೂಡಲೇ ಕಾರ್ಯೋನ್ಮುಖರಾಗಿ ರೈತರಿಗೆ ನ್ಯಾಯ‌ಕೊಡಿಸಿಕೊಡಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.