ರಾಮನಗರ : ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಮುಸ್ಲಿಂ ಮುಖಂಡರಿಗೆ ಕಾಲೇಜಿನ ಒಳಗೆ ಪ್ರವೇಶ ನೀಡಿದ್ದನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಡಿಗ್ರಿ ಕಾಲೇಜಿನ ಬಳಿ ಘಟನೆ ನಡೆದಿದ್ದು, 144 ಸೆಕ್ಷನ್ ಜಾರಿಯಲ್ಲಿದ್ದರೂ ಕೂಡ ಮುಸ್ಲಿಂ ಮುಖಂಡರಿಗೆ ಕಾಲೇಜಿನಲ್ಲಿ ಪ್ರವೇಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜಿನ ಮುಂಭಾಗ ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ಅನಿಲ್ ಹಾಗೂ ಮಂಜುನಾಥ್ ಎಂಬುವರು ಪೊಲೀಸ್ ವೈಫಲ್ಯ ಖಂಡಿಸಿ ಪ್ರತಿಭಟಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ : ಹಿಜಾಬ್ಗಾಗಿ ವಿದ್ಯಾರ್ಥಿನಿಯರ ಪ್ರತಿಭಟನೆ-ಕಾಲೇಜಿಗೆ ರಜಾ ಘೋಷಣೆ