ರಾಮನಗರ: ಪುರುಷನೂ ಅಲ್ಲ, ಮಹಿಳೆಯೂ ಅಲ್ಲ. ಶಿಖಂಡಿ ಹಾಗೆ ಉತ್ತರ ನೀಡಿದ್ರೆ ನಾನೇನು ಮಾಡಲಿ ಎಂದು ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ನೇರವಾಗಿ ಮಾಗಡಿ ಶಾಸಕ ಎ.ಮಂಜುನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಡದಿಯ ಕರೀಗೌಡನದೊಡ್ಡಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ಶಾಸಕರ ಆರೋಪಕ್ಕೆ ತಿರುಗೇಟು ನೀಡಿದರು. ಕಳೆದ 10 ವರ್ಷಗಳಿಂದ ಮಾಗಡಿ ಶಾಸಕರಾಗಿದ್ದ ಬಾಲಕೃಷ್ಣ ಮಾಗಡಿ ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಕೊಟ್ಟಿದ್ರೆ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ. ಅಭಿವೃದ್ಧಿ ಬಗ್ಗೆ ಪದೇ ಪದೇ ಬಹಿರಂಗ ಚರ್ಚೆಗೆ ಆಹ್ವಾನ ನೀಡುವ ಮಾಜಿ ಶಾಸಕರಿಗೆ ಚುನಾವಣೆಯಲ್ಲಿ ಉತ್ತರ ನೀಡುತ್ತೇನೆ ಎಂಬ ಶಾಸಕ ಎ.ಮಂಜುನಾಥ್ ಹೇಳಿಕೆಗೆ ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕ್ಷೇತ್ರದ ಅಭಿವೃದ್ಧಿ ಬಗ್ಗೆ ದಾಖಲೆ ಸಮೇತ ಚರ್ಚೆಗೆ ಬರುವಂತೆ ನಾನು ಈ ಹಿಂದೆಯಿಂದಲೂ ಶಾಸಕರಿಗೆ ಆಹ್ವಾನ ನೀಡುತ್ತಾ ಬಂದಿದ್ದೇನೆ. ನನ್ನ ಸವಾಲು ಸ್ವೀಕರಿಸಲು ಅವರು ಸಿದ್ಧರಿಲ್ಲ ಎಂದರು.
ಅಭಿವೃದ್ಧಿ ಬಗ್ಗೆ ಶಾಸಕರ ಮನೆಯ ಮುಂದೆಯೇ ದಾಖಲೆ ಸಮೇತ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ರಾಜಕೀಯ ನಿವೃತ್ತಿ ಮಾಡುತ್ತೇನೆಂಬ ಹೇಳಿಕೆಗೆ ಅವರು ಬದ್ಧರಾಗುವರೆ?. ಯಾರನ್ನೊ ಮುಂದೆ ಬಿಟ್ಟು ಹಿಂದೆ ಮಾತನಾಡುವವರಿಗೆ ನಾನು ಏನು ಹೇಳಲಿ? ಎಂದು ಪ್ರಶ್ನಿಸಿದರು.