ರಾಮನಗರ: ಅಧಿಕಾರ ಇದ್ದಾಗ ಕ್ಷೇತ್ರದ ಜನತೆಗೆ ಏನೂ ಮಾಡದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇದೀಗ ಚನ್ನಪಟ್ಟಣ ತಾಲೂಕಿಗೆ ಬಂದು ಜನರ ಮುಂದೆ ಕಣ್ಣೀರಿಟ್ಟು ನಾಟಕ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹರಿಹಾಯ್ದಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಅವರು ಸಿಎಂ ಆಗಿದ್ದಾಗ ಏನೂ ಕೆಲಸ ಮಾಡಿಲ್ಲ. ತಾಲೂಕಿಗೆ ಬರಲಿಲ್ಲ. ಆಗೆಲ್ಲಾ ರಾಸಲೀಲೆ ಮಾಡಿಕೊಂಡು ಕಣ್ಣೀರು ಸುರಿಸಿದ್ರೆ ಈಗ ಪ್ರಯೋಜನ ಇಲ್ಲ ಎಂದು ಯಾವುದೋ ವಿಷಯವನ್ನು ಮರೆಮಾಚಿ ಹೇಳಿ ಮಾಧ್ಯಮದವರನ್ನೇ ಕೆಲ ಕ್ಷಣ ತಬ್ಬಿಬ್ಬು ಮಾಡಿದರು.
ಇದನ್ನೂ ಓದಿ: ಬುಧವಾರದಿಂದ 12-14 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನ್.. 60 ಮೇಲ್ಪಟ್ಟ ಎಲ್ಲರಿಗೂ 'ಬೂಸ್ಟರ್'
ಇಷ್ಟಕ್ಕೆ ಸುಮ್ಮನಾಗದ ಮಾಧ್ಯಮ ಪ್ರತಿನಿಧಿಗಳು ಯಾವ ರಾಸಲೀಲೆ ಏನು ಎತ್ತ ಎಂದು ಪ್ರಶ್ನೆಗಳ ಸುರಿಮಳೇಯನ್ನೇ ಹರಿಸಿದರು. ನನ್ನಿಂದ ಯಾಕಪ್ಪ ಹೆಚ್ಡಿಕೆ ಅಣಿಮುತ್ತುಗಳನ್ನು ಕೇಳ್ತೀರಾ? ಅವರು ಬಂದ್ರೆ ನೇರಾ ನೇರ ನನ್ನ ಮುಂದೆ ಕೂರಿಸಿ, ವೈಯಕ್ತಿಕ ಹಾಗೂ ಸಾರ್ವಜನಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡೋಣ ಎಂದು ಸವಾಲು ಹಾಕಿದರು.
ಮುಂದುರೆದು ಮಾತನಾಡಿದ ಸಿಪಿವೈ, ರಾಸಲೀಲೆ ಬಗ್ಗೆ ಕುಮಾರಸ್ವಾಮಿ ಅವರನ್ನೇ ಕೇಳಿ, ಅವರು ಹೇಳಿಲ್ಲ ಅಂದ್ರೆ ನಾನೇ ಹೇಳ್ತೀನಿ ಎಂದು ಹೆಚ್ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.