ರಾಮನಗರ: ಸಂಬಂಧಿಕರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕುಟುಂಬಕ್ಕೆ ಜವರಾಯ ಎದುರಾಗಿ, ಇಡೀ ಕುಟುಂಬವನ್ನೇ ಬಲಿ ಪಡೆದಿದ್ದಾನೆ. ಭೀಕರ ಅಪಘಾತದಲ್ಲಿ ಪತಿ, ಪತಿ ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಚನ್ನಪಟ್ಟಣ ತಾಲೂಕು ಲಂಬಾಣಿ ತಾಂಡ್ಯಾ ಬಳಿ ಇರುವ ಬೆಂಗಳೂರು ಮೈಸೂರು ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಅಲ್ಟೋ ಮತ್ತು ಇನ್ನೋವಾ ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕುಟುಂಬ ಐವರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ರವಿ ಪೂಜಾರ್ ಬಿನ್ ಭೀಮಪ್ಪ ಪೂಜಾರಿ (46) ಹಾಗೂ ಅವರ ಮಕ್ಕಳಾದ ಇಂಚರ ಪೂಜಾರಿ (14) ಮತ್ತು ಸಿರಿ ಪೂಜಾರಿ (2) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಲಕ್ಷ್ಮಿ ಪೂಜಾರಿ (40) ಹಾಗೂ ಇನ್ನೋರ್ವ ಮಗಳು ಶಾಂತಲಾ ಪೂಜಾರಿ ( 8 ) ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ರವಿ ಪೂಜಾರಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿಯವರಾಗಿದ್ದು, ಬೆಂಗಳೂರಿನ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ ಆಯೋಜಕರಾಗಿದ್ದರು. ಹೀಗಾಗಿ, ಕೆಂಗೇರಿಯಲ್ಲಿ ವಾಸವಿದ್ದರು. ಅವರ ಪತ್ನಿಯ ತವರೂರಾದ ಟಿ ನರಸೀಪುರದಲ್ಲಿ ನಡೆಯಲಿರುವ ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಕ್ಕಳೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಮುಂದಿನ ಚಕ್ರ ಸಿಡಿದು, ರಸ್ತೆ ವಿಭಜಕವನ್ನ ದಾಟಿ ಮೈಸೂರಿನ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗ ಭೀಕರ ದುರಂತ ಸಂಭವಿಸಿದೆ.
ಇದನ್ನೂ ಓದಿ : ಚಲಿಸುತ್ತಿದ್ದ ಬಸ್ಸಿನ ಹಿಂಬದಿ ಗಾಜು ಒಡೆದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು! - ವಿಡಿಯೋ
ನಗರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಚನ್ನಪಟ್ಟಣ ಸಂಚಾರಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಮುಂಬೈ - ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ : ನಾಲ್ವರು ಸಾವು, 22 ಮಂದಿಗೆ ಗಾಯ
ಇನ್ನು ಇಂದು ನಸುಕಿನಜಾವ 2 ಗಂಟೆ ಸುಮಾರಿಗೆ ಮುಂಬೈ ಮತ್ತು ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಮತ್ತು ಟ್ರಕ್ ಮಧ್ಯೆ ಡಿಕ್ಕಿಯಾಗಿ 4 ಮಂದಿ ಮೃತಪಟ್ಟಿದ್ದಾರೆ. 20 ಜನ ಗಾಯಗೊಂಡಿದ್ದಾರೆ. ಅಪಘಾತದ ಕುರಿತು ಮಾಹಿತಿ ಪಡೆದ ಕಾಟ್ರಾಜ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎಲ್ಲಾ ಪ್ರಯಾಣಿಕರು ಗಾಢ ನಿದ್ದೆಯಲ್ಲಿದಾಗ ಅವಘಡ ಸಂಭವಿಸಿದೆ. ಬಸ್ನಲ್ಲಿ ಒಟ್ಟು 21 ಮಂದಿ ಪ್ರಯಾಣಿಕರು ಮತ್ತು ಓರ್ವ ಚಾಲಕ ಹಾಗೂ ಕ್ಲೀನರ್ ಇದ್ದರು. ಟ್ರಕ್ನಲ್ಲಿ ಚಾಲಕ ಸೇರಿ ಮೂರು ಜನರಿದ್ದರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ಮಡಿಕೇರಿಯಲ್ಲಿ ಕಾರು-ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ : 6 ಜನ ಸಾವು