ETV Bharat / state

ರೈತರ ಬೆಳೆ ನಾಶ ಮಾಡುತ್ತಿರುವ ಕಾಡಾನೆಗಳು... ಕಾಡಿಗಟ್ಟಲು ಹರಸಾಹಸ - ಕಾಡಾನೆಗಳು ಕಾಡಿಗಟ್ಟಲು

ಕನಕಪುರ ತಾಲೂಕಿನ ವೆಂಕಟಪ್ಪನ ದೊಡ್ಡಿ ಗ್ರಾಮದಲ್ಲಿ ಕಳೆದ ರಾತ್ರಿ ಕಾಡಾನೆಗಳು ದಾಂಗುಡಿ ಇಟ್ಟಿದ್ದವು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ‌ ಸಿಡಿಸಿ ಕಾಡಿಗಟ್ಟಲು ಶತಪ್ರಯತ್ನ ‌ನಡೆಸುತ್ತಿದ್ದಾರೆ. ಈ ವೇಳೆ ಆನೆಗಳ ದಾಳಿಗೆ ನೂರಾರು ಮಾವಿನ ಮರಗಳು ನಾಶವಾಗಿವೆ.

ಕಾಡಾನೆ
ಕಾಡಾನೆ
author img

By

Published : May 30, 2020, 3:42 PM IST

ರಾಮನಗರ: ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದಿರುವ 20 ಕಾಡಾನೆಗಳು ಹಲವು ದಿನಗಳಿಂದ ಕಬ್ಬಾಳು ವಲಯದಲ್ಲಿ ಬೀಡು ಬಿಟ್ಟಿದ್ದು, ಆನೆ ಹಿಂಡನ್ನು ಕಾಡಿಗೆ ಓಡಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಕನಕಪುರ ತಾಲೂಕಿನ ವೆಂಕಟಪ್ಪನ ದೊಡ್ಡಿ ಗ್ರಾಮದಲ್ಲಿ ಕಳೆದ ರಾತ್ರಿ ಕಾಡಾನೆಗಳು ದಾಂಗುಡಿ ಇಟ್ಟಿದ್ದವು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ‌ ಸಿಡಿಸಿ ಕಾಡಿಗಟ್ಟಲು ಶತಪ್ರಯತ್ನ ‌ನಡೆಸುತ್ತಿದ್ದಾರೆ. ಈ ವೇಳೆ ಆನೆಗಳ ದಾಳಿಗೆ ನೂರಾರು ಮಾವಿನ ಮರಗಳು ನಾಶವಾಗಿವೆ.

ರೈತರ ಬೆಳೆ ನಾಶ ಮಾಡುತ್ತಿವೆ ಕಾಡಾನೆಗಳು

ಹಲವು ದಿನಗಳಿಂದ ಅಕ್ಕಪಕ್ಕದ ಜಮೀನುಗಳಲ್ಲಿ ಬೆಳೆ‌ ನಾಶ ಮಾಡಿರುವ ಕಾಡಾನೆಗಳ ಹಾವಳಿ ತಡೆಯಬೇಕೆಂದು ‌ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಕಾಡಾನೆಗಳು ಪದೇ ಪದೆ ಬೆಳೆ ಹಾನಿ ಮಾಡುವ ಮೂಲಕ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬೆಳೆ ಪರಿಹಾರ ಕೊಡೋದು ಯಾವುದಕ್ಕೂ ಸಾಲೋದಿಲ್ಲ. ಇದರಿಂದ ಸಾಲಗಾರರಾಗುತ್ತಿದ್ದೇವೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.