ರಾಮನಗರ: ಕಾಡಾನೆ ದಾಳಿಗೆ ಎರಡು ಹಸು, ಒಂದು ಎಮ್ಮೆ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಸಾತನೂರು ಸಮೀಪದ ಗ್ರಾಮದಲ್ಲಿ ನಡೆದಿದೆ.
ಕನಕಪುರ ತಾಲೂಕಿನ ಸಾತನೂರು ಸಮೀಪದ ಗ್ರಾಮಗಳಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಬೆಳಗ್ಗೆ ಸಾಸಲಪುರ ಗ್ರಾಮದಲ್ಲಿ ಎರಡು ಹಸುಗಳ ಮೇಲೆ ದಾಳಿ ನಡೆಸಿ ಸಾಹಿಸಿದೆ. ಈ ಹಸುಗಳು ಮರೀಗೌಡ ಎಂಬುವವರಿಗೆ ಸೇರಿದವು. ನಂತರ ಪಕ್ಕದ ಹಲಸಿನ ಮರದೊಡ್ಡಿ ಗ್ರಾಮದ ಕೆಂಪೇಗೌಡ ಎಂಬುವವರಿಗೆ ಸೇರಿದ ಎಮ್ಮೆಯನ್ನು ತುಳಿದು ಸಾಯಿಸಿದೆ.
ಬಳಿಕ ಸಾರ್ವಜನಿಕರು ಪಟಾಕಿ ಸಿಡಿಸಿ ಆನೆಯನ್ನು ಓಡಿಸಲು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟರು. ಕಾಡಾನೆ ಹಾವಳಿಗೆ ಎರಡೂ ಗ್ರಾಮಗಳ ಗ್ರಾಮಸ್ಥರು ತತ್ತರಗೊಂಡಿದ್ದು, ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹ.