ETV Bharat / state

ಅಧಿಕಾರ ನಾಡಿನ ಶ್ರೇಯಸ್ಸಿಗಾಗಿ, ಅದು ವ್ಯಕ್ತಿಗತ ಆಗಿರಬಾರದು: ಸಚಿವ ಅಶ್ವತ್ಥನಾರಾಯಣ್ - ರಾಮನಗರದಲ್ಲಿ ಮಾಜಿ ಶಾಸಕ ಬಾಲಕೃಷ್ಣ ಅವರಿಗೆ ಅಶ್ವತ್ಥ್​ ನಾರಾಯಣ್ ತಿರುಗೇಟು

ಮೊದಲು ಜನರ ವಿಶ್ವಾಸ ಗಳಿಸಿಕೊಳ್ಳಬೇಕು- ಅಧಿಕಾರ ಪಡೆದುಕೊಳ್ಳೋದು ಈ ನಾಡಿನ ಶ್ರೇಯಸ್ಸಿಗಾಗಿ-ಸಚಿವ ಡಾ. ಅಶ್ವತ್ಥ್​ ನಾರಾಯಣ್ ಹೇಳಿಕೆ

ಸಚಿವ ಡಾ. ಅಶ್ವತ್ಥ್​ ನಾರಾಯಣ್
ಸಚಿವ ಡಾ. ಅಶ್ವತ್ಥ್​ ನಾರಾಯಣ್
author img

By

Published : Jul 31, 2022, 8:01 PM IST

ರಾಮನಗರ: ನಾನು ಮೊದಲ ಬಾರಿ ಬಿಜೆಪಿಯಲ್ಲಿ ಶಾಸಕನಾದಾಗ ಆರ್. ಅಶೋಕ್, ಅಶ್ವತ್ಥ್​ ನಾರಾಯಣ್ ಬಿಜೆಪಿಯಲ್ಲಿ‌ ಇರಲಿಲ್ಲ ಎಂಬ ಮಾಜಿ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರಕ್ಕೆ ಅದಕ್ಕೆ ಈಗ ಏನು ಆಗಬೇಕಂತೆ..? ಬಾಲಕೃಷ್ಣ ಕನ್​ಫ್ಯೂಸ್​ ಆಗಿದ್ದಾರೆ. ಯಾಕಪ್ಪ ಕನ್​ಫ್ಯೂಸ್​ ಆಗಿದ್ಯಾ ಬಾಲಕೃಷ್ಣ. ಕನ್​ಫ್ಯೂಸ್​ ಆಗಬೇಡ. ಸ್ಪಷ್ಟತೆ ತಿಳಿದಿಕೋ ಎಂದು ಮಾಜಿ ಬಾಲಕೃಷ್ಣ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ್​ ನಾರಾಯಣ್ ತಿರುಗೇಟು ನೀಡಿದ್ದಾರೆ.

ಸಚಿವ ಡಾ. ಅಶ್ವತ್ಥ್​ ನಾರಾಯಣ್ ಅವರು ಮಾತನಾಡಿದರು

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಡಿಕೆಶಿಗೆ ಒಕ್ಕಲಿಗ ಸಮುದಾಯದವರು ಬೆಂಬಲ ನೀಡಿ ಎಂಬ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಮೊದಲು ಜನರ ವಿಶ್ವಾಸ ಗಳಿಸಿಕೊಳ್ಳಬೇಕು. ಅಧಿಕಾರ ಪಡೆದುಕೊಳ್ಳೋದು ನಮಗೋಸ್ಕರ ಅಲ್ಲ. ತಮ್ಮ ವ್ಯಕ್ತಿಗತ ಆಸೆ ಪೂರೈಸಿಕೊಳ್ಳೋದಕ್ಕೆ ಅಲ್ಲ. ಅಧಿಕಾರ ಪಡೆದುಕೊಳ್ಳೊದು ನಾಡಿನ ಶ್ರೇಯಸ್ಸಿಗಾಗಿ ಅಷ್ಟೇ. ನನಗೊಂದಿಷ್ಟು ಕೊಡಿ ಅನ್ನೋದು ಅಂಗಡಿಯಲ್ಲಿ ವ್ಯಾಪಾರ ಮಾಡಿದಂತಲ್ಲ. ಬದ್ಧತೆ, ಕಾಳಜಿ ಮೊದಲು ಇರಬೇಕು ಎಂದು ಟಾಂಗ್​ ಕೊಟ್ಟರು.

ಮಾಜಿ ಶಾಸಕ ಬಾಲಕೃಷ್ಣ ಹೇಳಿಕೆಗೆ ಸಚಿವ ಡಾ. ಅಶ್ವತ್ಥ್​ ನಾರಾಯಣ್ ತಿರುಗೇಟು

ರಾಜಕೀಯ ಎಂಬುದು ಬಹಳ ಪವಿತ್ರವಾದುದ್ದು. ಬಯಸುವುದು ತಪ್ಪಲ್ಲ, ಅದಕ್ಕೆ ಅರ್ಹತೆ, ಯೋಗ್ಯತೆ ಇರಬೇಕು. ಯೋಗ್ಯತೆ, ಅರ್ಹತೆ ಬೆಳೆಸಿಕೊಂಡು ಯಾರು ಬೇಕಾದ್ರು ಸಿಎಂ ಆಗಲಿ. ನಿವೃತ್ತಿ ಅಂಚಿನಲ್ಲಿರುವ ಸಿದ್ದರಾಮಯ್ಯ ಒಂದು ಭಾಗ. ಯೋಗ್ಯತೆ, ಅರ್ಹತೆ ಇಲ್ಲದಂತಹ ಡಿಕೆಶಿ ಒಂದು ಕಡೆ. ಇವರನ್ನು ಸಿಎಂ ಮಾಡಿ ನಾಡಿನ ಜನರು ಏನು ನೋಡಬೇಕು. ನಾಡಿನ ಜನರ ಕಷ್ಟಕ್ಕೆ ಸ್ಪಂದಿಸುವ ಒಳ್ಳೆಯ ನಾಯಕ ಬರಬೇಕು ಎಂದು ಬಯಸುತ್ತಾರೆ ಎಂದರು.

ಅವರ ಆಸೆ ಪೂರೈಸಿಕೊಳ್ಳಲು ನಾಡಿನ ಜನರನ್ನು ಬಲಿ ಕೊಡಲು ಸಾಧ್ಯವೇ. ಬಲಿ ಕೊಟ್ಟಿರುವುದು ಸಾಕು. ಬೇರೆ ಯಾರು ಬಲಿಯಾಗುವುದು ಬೇಡ. ಅವರ ಭಾರವನ್ನು ಹೊರಲು ನಮ್ಮ ಜನ ಏನು ಕರ್ಮ ಮಾಡಿದ್ದಾರೆ. ಸತ್ಯವಂತರೂ ಸಿಎಂ ಆಗಲಿ, ಪಾಪಿಗಳು ಸಂಪೂರ್ಣವಾಗಿ ನಿಲ್ಲಬೇಕು. ಈ ಬಗ್ಗೆ ಚಾಮುಂಡೇಶ್ವರಿ ತಾಯಿಯಲ್ಲಿ ಬೇಡಿಕೊಳ್ಳುತ್ತೇನೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಓದಿ: ರಾಜ್ಯ ಸರ್ಕಾರವನ್ನು ಗವರ್ನರ್​ ಪದಚ್ಯುತಿಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಲಿ: ಬಿ. ಕೆ ಹರಿಪ್ರಸಾದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.