ETV Bharat / state

ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಸಿ ಪಿ ಯೋಗೇಶ್ವರ್​ ವಾಗ್ದಾಳಿ - ಈಟಿವಿ ಭಾರತ ಕನ್ನಡ

ಚನ್ನಪಟ್ಟಣದ ಬಿಡಿ ಕಾಲೋನಿಯ ಮುಸ್ಲಿಂ ಸಮುದಾಯದ 600 ಜನರಿಗೆ ಮನೆ ಮಂಜೂರು ಮಾಡಲಾಗಿದೆ. ಈ ಮೂಲಕ ಬಿಜೆಪಿ ಸರ್ಕಾರದಲ್ಲಿ ಮುಸ್ಲಿಂ ಸಮುದಾಯಕ್ಕೆ ಅನೇಕ ಅನುಕೂಲಗಳಾಗಿವೆ ಎಂದು ಸಿ ಪಿ ಯೋಗೇಶ್ವರ್​ ಹೇಳಿದರು.

cp yogeshwar talked against hdk
ಹೆಚ್​ಡಿಕೆ ವಿರುದ್ಧ ಸಿಪಿ ಯೋಗೇಶ್ವರ್​ ವಾಗ್ದಾಳಿ
author img

By

Published : Dec 22, 2022, 7:54 PM IST

ಹೆಚ್​ಡಿಕೆ ವಿರುದ್ಧ ಸಿಪಿ ಯೋಗೇಶ್ವರ್​ ವಾಗ್ದಾಳಿ

ರಾಮನಗರ: ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘದ ಸಾಲಮನ್ನಾ ಮಾಡಲಿದೆ. ಸಾಲ ಎಷ್ಟು ಬೇಕಾದ್ರೂ ತಗೊಳ್ಳಿ ಕುಮಾರಸ್ವಾಮಿ ಸಾಲಮನ್ನಾ ಮಾಡ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಹಾಸ್ಯಾಸ್ಪದ ಹೇಳಿಕೆ ನೀಡ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಹೀಗೆ ಮಾತನಾಡ್ತಾರಾ.? ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಖಾಸಗಿ ಹೋಟೆಲ್​​ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸ್ತ್ರೀಶಕ್ತಿ ಸಂಘದ ಸಾಲಮನ್ನಾ ಮಾಡುವುದಾಗಿ ಬರೀ ಸುಳ್ಳು ಹೇಳಿಕೊಂಡೆ ಹೋಗಿದ್ದಾರೆ. ಇದನ್ನ ಜನರು ಯಾರು ಕೂಡ ನಂಬಬೇಡಿ. ಕೇವಲ ವೋಟ್ ಹಾಕಿಸಿಕೊಳ್ಳಲು ಸುಳ್ಳು ಹೇಳ್ತಾರೆ ಎಂದು ಹೆಚ್​ಡಿಕೆ ವಿರುದ್ಧ ಕಿಡಿಕಾರಿದರು. ಇನ್ನು, ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರಿನಲ್ಲಿ ಮನೆ ಹಂಚಿದ್ದೇನೆ ಎಂದು ಕುಮಾರಸ್ವಾಮಿ ಸುಳ್ಳು ಹೇಳಿದ್ದಾರೆ. ಶಾಸಕರಾಗಿ ಕ್ಷೇತ್ರಕ್ಕೆ ಒಂದೂ ಮನೆಯನ್ನ ಕೂಡ ಅವರು ಕೊಟ್ಟಿಲ್ಲ.

ಕೆಲವರಿಗೆ ಹಕ್ಕುಪತ್ರ ಕೊಟ್ಟಿದ್ದಾರೆ ಅಷ್ಟೇ. ನಾನು ಕ್ಷೇತ್ರಕ್ಕೆ 3 ಸಾವಿರ ಮನೆ ತಂದಿದ್ದೇನೆ. ಇದಕ್ಕೆ ಕುಮಾರಸ್ವಾಮಿ ಉಡಾಫೆ ಮಾತನಾಡ್ತಾರೆ ಎಂದರು. ಇನ್ನು ಮನೆ ಮಂಜೂರಾಗಿರುವ ಬಗ್ಗೆ ದಾಖಲಾತಿ ಇದೆ. ಈಗಾಗಲೇ ಫಲಾನಿಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳ ಆಯ್ಕೆ ನಡೆದು ಮನೆ ಹಂಚಲಾಗುವುದು ಎಂದು ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಬಿಜೆಪಿಯಿಂದ ಅನುಕೂಲವಾಗಿದೆ: ಇನ್ನು, ಮುಸ್ಲಿಂ ಸಮುದಾಯಕ್ಕೆ ಅನುಕೂಲ ಆಗಿರೋದೆ ಬಿಜೆಪಿ ಸರ್ಕಾರದಲ್ಲಿ. ಚನ್ನಪಟ್ಟಣದ ಬಿಡಿ ಕಾಲೋನಿಗೆ 600 ಜನರಿಗೆ ಮನೆ ಮಂಜೂರಾಗಿದೆ. ಕುಮಾರಸ್ವಾಮಿ ಒಂದು ದಿನ ಅವರ ಕಷ್ಟ ಕೇಳಿಲ್ಲ. ಕೇವಲ ಟೋಪಿ ಹಾಕಿಕೊಂಡು, ಮಸೀದಿಗೆ ಹೋದರೇ ಸಾಲದು. ಬಿಡಿ ಕಾಲೋನಿಯ ಮುಸ್ಲಿಂ ಸಮುದಾಯಕ್ಕೆ ಅನುಕೂಲ ಮಾಡಿದ್ದು, ನಮ್ಮ ಬಿಜೆಪಿ ಸರ್ಕಾರದಿಂದ ಮಾತ್ರ ಎಂದು ಹೆಚ್ಡಿಕೆಗೆ ಸಿಪಿವೈ ಟಾಂಗ್ ​ಕೊಟ್ಟರು.

ಹೆಚ್ಡಿಕೆ ವಿರುದ್ಧ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷಿ ಜೀ ಮಾತನಾಡಿದ್ದು ಸರಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬಿ.ಎಲ್. ಸಂತೋಷ್ ಅವರು ಜೆಡಿಎಸ್​ ವಂಶಪಾರಂಪರ್ಯ ವಿಚಾರ ಮಾತನಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಅಂತ ಹೇಳಿದ್ದಾರೆ. ಅದರಲ್ಲಿ ಯಾವುದೇ ತಪ್ಪು ಕಾಣಿಸ್ತಿಲ್ಲ. ಆದರೆ ಹೆಚ್​ಡಿಕೆ ಸಂತೋಷ್ ಜಿ ಬಗ್ಗೆ ಕೇವಲವಾಗಿ ಮಾತನಾಡಿರೋದು ಖಂಡನೀಯ. ಸಂತೋಷ್ ಜಿ ಮಾತನಾಡಿರೋದರಲ್ಲಿ ತಪ್ಪೇನಿದೆ.? ನಿಮ್ಮ ವಂಶಪಾರಂಪರ್ಯದ ಬಗ್ಗೆ ಯಾರೂ ಪ್ರಶ್ನೆ ಮಾಡಬಾರದಾ.? ನಿಮ್ಮ ಕುಟುಂಬದವರು ಮಾತ್ರ ಆಡಳಿತ ಮಾಡ್ಬೇಕಾ.? ಕಾರ್ಯಕರ್ತರು, ಮುಖಂಡರು ಗುಲಾಮರಾ.? ಹಾಗಾಗಿ ಅವರು ವಂಶಪಾರಂಪರ್ಯಕ್ಕೆ ಅವಕಾಶ ಕೊಡಬೇಡಿ ಎಂದಿದ್ದಾರೆ ಎಂರು ಸಮರ್ಥಿಸಿಕೊಂಡರು.

ಮಾಗಡಿಯ ಸಮಾವೇಶ ಫೇಲ್ ಆಯ್ತು, ರಾಮನಗರದ ಶ್ರೀನಿವಾಸ ಕಲ್ಯಾಣ ಫೇಲ್ ಆಯ್ತು. ಚನ್ನಪಟ್ಟಣದಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಸಮಾವೇಶ ಮಾಡಿದ್ದೀರಿ. ಬಸ್​ಗಳಲ್ಲಿ ಜನರನ್ನು ಕರೆತಂದು ಕಾರ್ಯಕ್ರಮ ಮಾಡಿದ್ದೀರಿ. ಅದ್ಧೂರಿ ಕಾರ್ಯಕ್ರಮ ಮಾಡಲು ಹಣ ಎಲ್ಲಿಂದ ಬಂತು.? ಹೆಲಿಕಾಪ್ಟರ್​ನಲ್ಲಿ ಹೂ ಹಾಕಿಸಿಕೊಳ್ಳಲು ಹಣ ಇದ್ಯಾ.?‌ ನೀವು ಆಡಂಬರ ಮಾಡಿದ್ರೆ ಮಾತ್ರ ಪ್ರಾಮಾಣಿಕತೆ. ಬೇರೆಯವರು ಮಾಡಿದರೆ ಭ್ರಷ್ಟಾಚಾರನಾ ಸಿಪಿವೈ ಪ್ರಶ್ನಿಸಿದರು.

ಹೆಚ್​ಡಿಕೆಯಿಂದ ಒಬ್ಬ ಕಾರ್ಯಕರ್ತನಿಗೂ ಅನುಕೂಲ ಆಗಿಲ್ಲ : ಇನ್ನು ಹೆಚ್​ ಡಿ ಕುಮಾರಸ್ವಾಮಿ ಅವರಿಂದ ಇಡೀ ಜಿಲ್ಲೆಯಲ್ಲಿ ಒಬ್ಬ ಕಾರ್ಯಕರ್ತನಿಗೂ ಅನುಕೂಲ ಆಗಿಲ್ಲ. ಕಾರ್ಯಕರ್ತ, ಮುಖಂಡರಿಗೆ ಒಂದು ಸ್ಥಾನಮಾನ ನೀಡಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್​ನಿಂದ ನೊಂದವರೇ ಹೆಚ್ಚಾಗಿದ್ದಾರೆಂದು ಸಿಪಿವೈ ಆರೋಪಿಸಿದ್ದಾರೆ. ಅಪ್ಪ ಮಗನ ಫೋಟೋ ಹಾಕೊಂಡು ಜಿಲ್ಲೆಯ ಜನರನ್ನ ಗುಲಾಮರ ರೀತಿ ನೋಡ್ತಿದ್ದಾರೆ. ಆದ್ರೆ ಇದು 2023ರಲ್ಲಿ ನಡೆಯುವುದಿಲ್ಲ. ಜನರು ತಕ್ಕಪಾಠ ಕಲಿಸುತ್ತಾರೆ ಎಂದರು.

ಬಳಿಕ ಬಿ.ಎಲ್.ಸಂತೋಷ್ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಚ ಸಿ ಎಂ ಇಬ್ರಾಹಿಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇಬ್ರಾಹಿಂ ಒಬ್ಬ ಕಾಮಿಡಿಯನ್, ಅವರಿಗೆ ಸೀರಿಯಸ್​ನೆಸ್ ಇಲ್ಲ ಎಂದು ಜರಿದರು.

ಇದನ್ನೂ ಓದಿ: ಕೋವಿಡ್ ಹೆಚ್ಚಳ ಭೀತಿ: ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಲು ಸಚಿವ ಕೆ ಸುಧಾಕರ್ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.