ETV Bharat / state

ಸ್ವಾರ್ಥ ಸಾಧನೆಗಾಗಿ ಕಾಂಗ್ರೆಸ್​ನಿಂದ ಸಿಎಎ ವಿರೋಧ: ಯೋಗೇಶ್ವರ್

author img

By

Published : Jan 4, 2020, 9:08 PM IST

ರಾಮನಗರದಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಪೌರತ್ವ ತಿದ್ದುಪಡಿ ಕಾಯ್ದೆ‌ ಬೆಂಬಲಿಸಿ‌ ಬೃಹತ್ ರ‍್ಯಾಲಿ ನಡೆಯಿತು.

ಪೌರತ್ವ ತಿದ್ದುಪಡಿ ಕಾಯ್ದೆ‌ ಬೆಂಬಲಿಸಿ‌ ಬೃಹತ್ ರ‍್ಯಾಲಿ, ramanagar rally to support CAA
ಪೌರತ್ವ ತಿದ್ದುಪಡಿ ಕಾಯ್ದೆ‌ ಬೆಂಬಲಿಸಿ‌ ಬೃಹತ್ ರ‍್ಯಾಲಿ

ರಾಮನಗರ: ಕಾಂಗ್ರೆಸ್​​ನವರು ಸ್ವಾರ್ಥ ಸಾಧನೆಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ‌ ವಿರೋಧಿಸುತ್ತಿದ್ದಾರೆ. ಈ ಕಾಯ್ದೆಯಿಂದ ದೇಶದ ಯಾವೊಬ್ಬ ನಾಗರಿಕನಿಗೂ ತೊಂದರೆಯಿಲ್ಲ. ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ‌ ಬೆಂಬಲಿಸಿ‌ ಬೃಹತ್ ರ‍್ಯಾಲಿ

ನಗರದಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಸಿಎಎ ಬೆಂಬಲಿಸಿ‌ ನಡೆದ ರ‍್ಯಾಲಿಯಲ್ಲಿ‌ ಪಾಲ್ಗೊಂಡು ಅವರು ಮಾತನಾಡಿದರು. ಸಿಎಎಯಿಂದ ಯಾರಿಗೂ ತೊಂದರೆಯಿಲ್ಲ. ಆದರೆ, ಈ ವಿಚಾರವನ್ನ ಕಾಂಗ್ರೆಸ್​ನವರು ಕೇವಲ‌ ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ‌ ದೇಶದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಅರಿವು‌ ಮೂಡಿಸುವ ಸಲುವಾಗಿ ಇಂದು ನಾವು ಬೀದಿಗಿಳಿದಿದ್ದೇವೆ ಎಂದರು.

ಕೆಂಪೇಗೌಡ ಸರ್ಕಲ್​​ನಲ್ಲಿ ಆರಂಭಗೊಂಡ‌ ರ‍್ಯಾಲಿಯು ಎಂ.ಜಿ.ರಸ್ತೆ ಮೂಲಕ‌ ತೆರಳಿ ಜಿಲ್ಲಾ‌ ಕ್ರೀಡಾಂಗಣದಲ್ಲಿ ಸಮಾವೇಶಗೊಂಡಿತು. ದಾರಿಯುದ್ದಕ್ಕೂ ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳು ಮೊಳಗಿದವು. ರ‍್ಯಾಲಿಯಲ್ಲಿ‌ ಜಾಗರಣಾ ವೇದಿಕೆ ಕಾರ್ಯಕರ್ತರು ರಾಷ್ಟ್ರದ್ವಜ ಹಿಡಿದು ಭಾಗವಹಿಸಿದ್ದರು. ಅಲ್ಲದೆ ಬಿಜೆಪಿ‌‌ಯ ಜಿಲ್ಲಾ ಮತ್ತು ರಾಜ್ಯಮಟ್ಟದ ಹಲವು ‌ಮುಖಂಡರು ಭಾಗವಹಿಸಿದ್ದರು.

Intro:

Body:ರಾಮನಗರ : ಕಾಂಗ್ರೆಸ್ ನವರು ಸ್ವಾರ್ಥ ಸಾಧನೆಗಾಗಿ‌ ಸಿಎಎ ವಿರೋಧಿಸುತ್ತಿದ್ದಾರೆ ಅದನ್ನ ಬೆಂಬಲಿಸಿ ನಾವು ಬೀದಿಗಿಳಿದಿದ್ದೇವೆ, ಈ ಕಾಯ್ದೆಯಿಂದ ದೇಶದ ಯಾವೊಬ್ಬ ನಾಗರೀಕನಿಗೂ ತೊಂದರೆಯಿಲ್ಲ. ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಹಿಂದೂಜಾಗರಣಾ ವೇದಿಕೆ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿಎಎ ಬೆಂಬಲಿಸಿ‌ ರ್ಯಾಲಿಯಲ್ಲಿ‌ ಪಾಲ್ಗೊಂಡು ಅವರು ಮಾತನಾಡಿದರು.ಸಿಎಎ ಯಿಂದ ಯಾರಿಗೂ ತೊಂದರೆಯಿಲ್ಲ‌ ಇದು ಕೇವಲ‌ ಕಾಂಗ್ರೇಸ್ ನವರು ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ‌ ಅಶಾಂತಿ ಮೂಡಿಸುತ್ತಿದ್ದಾರೆ ಅಷ್ಟೇ, ಈ ಬಗ್ಗೆ ಜನರಲ್ಲಿ ಅರಿವು‌ ಮೂಡಿಸುವ ಸಲುವಾಗಿ ನಾವು ಬೀದಿಗಿಳಿದಿದ್ದೇವೆ ಎಂದರು.
ಕೆಂಪೇಗೌಡ ಸರ್ಕಲ್‌ ನಲ್ಲಿ ಆರಂಭಗೊಂಡ‌ ರ್ಯಾಲಿ ಎಂ.ಜಿ.ರಸ್ತೆ , ಮೂಲಕ‌ ಹಾದು ಜಿಲ್ಲಾ‌ ಕ್ರೀಡಾಂಗಣದಲ್ಲಿ ಸಮಾವೇಶ ಗೊಂಡರು ದಾರಿಯುದ್ದಕ್ಕೂ ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳು ಮೊಳಗುತ್ತಿದ್ದವು. ರಾಷ್ಟ್ರದ್ವಜ ಹಿಡಿದು ರ್ಯಾಲಿಯಲ್ಲಿ ಜಾಗರಣಾ ವೇದಿಕೆ ಕಾರ್ಯಕರ್ತರು ಭಾಗವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಹಲವು‌ಬಿಜೆಪಿ‌‌ ಮುಖಂಡರು ಭಾಗವಹಿಸಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.