ರಾಮನಗರ: ಕಳೆದ ಮೂರು ಅವಧಿಯಲ್ಲಿಯೂ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸಿ ಎಂ.ಎಲ್ಸಿಯಾಗಿರುವ ಪುಟ್ಟಣ್ಣ ಚುನಾವಣೆ ನೆಪದಲ್ಲಿ ಆಮಿಷಗಳನ್ನ ನೀಡುವ ಮೂಲಕ ತಮ್ಮನೈಜ ಬಣ್ಣ ಬಯಲು ಮಾಡಿಕೊಂಡಿದ್ದಾರೆ ಎಂದು ಶಿಕ್ಷಕರ ಕ್ಷೇತ್ರದ ಎಂಎಲ್ಸಿ ಚುನಾವಣೆಯ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎ.ಪಿ. ರಂಗನಾಥ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ವಿಧಾನಪರಿಷತ್ ನ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎ.ಪಿ.ರಂಗನಾಥ ಸುದ್ದಿಗೋಷ್ಠಿ ನಡೆಸಿ ಹಾಲಿ ಎಂಎಲ್ಸಿ ಪುಟ್ಟಣ್ಣ ವಿರುದ್ಧ ವಾಗ್ದಾಳಿ ನಡೆಸಿದರು. ನೈತಿಕತೆಯಿದ್ದರೆ ಪುಟ್ಟಣ್ಣ ಈ ಕೂಡಲೇ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಜೊತೆಗೆ ಈಗಲೂ ಸಹ ಅವರು ತಾಂತ್ರಿಕವಾಗಿ ಜೆಡಿಎಸ್ನ್ನಲ್ಲೆ ಇದ್ದಾರೆ. ಅವರು ನ್ಯಾಯವಾಗಿ ಕೆಲಸ ಮಾಡಿದ್ದರೆ ಗಿಫ್ಟ್ ಕೊಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನೆ ಮಾಡಿದರು. ಇನ್ನು
ಚುನಾವಣಾ ಪ್ರಚಾರದ ವೇಳೆ ಶಿಕ್ಷಕರಿಗೆ ಪುಟ್ಟಣ್ಣ ಗಿಫ್ಟ್ ಕೊಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿತ್ತು. ಈ ಬಗ್ಗೆ ಮಾತನಾಡಿದ ಅವರು ಮೊದಲು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಕೊಡಲಿ, ಆನಂತರ ಮೋದಿ, ಅಮಿತ್ ಷಾ ಫೋಟೋ ಜೊತೆಗೆ ಗಿಫ್ಟ್ ಕೊಡಲಿ ಎಂದರು.
ಇನ್ನು ಈ ಬಾರಿ ಶಿಕ್ಷಕರು ಬದಲಾವಣೆ ಬಯಸಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾದ ನನಗೆ ಈ ಚುನಾವಣೆಯಲ್ಲಿ ಗೆಲುವಾಗಲಿದೆ ಎಂದು ವಿಶ್ಚಾಸ ವ್ಯಕ್ತಪಡಿಸಿದರು.ಮಾಜಿ ಪ್ರದಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್ಡಿಕೆ ಅಧಿಕಾರಾವಧಿಯಲ್ಲಿ ಶಿಕ್ಷಕರ ಪರವಾದ ಕಾರ್ಯಕ್ರಮಗಳನ್ನ ರೂಪಿಸಿದ್ದು ಅವುಗಳೇ ಶ್ರೀರಕ್ಷೆಯಾಗಲಿದ್ದು ನನ್ನ ಗೆಲುವು ನಿಶ್ಚಿತ ಎಂದರು.