ETV Bharat / state

ಪಡಿತರ ಚೀಟಿಯಲ್ಲಿ ಏಸುವಿನ ಫೋಟೋ: ರಾಮನಗರದಲ್ಲಿ ಹಿಂದೂ ಸಂಘಟನೆಗಳ ಆಕ್ರೋಶ

author img

By

Published : Oct 19, 2022, 8:18 PM IST

ರಾಮನಗರದಲ್ಲಿ ಪಡಿತರ ನೀಡುವ ರೇಷನ್ ಕಾರ್ಡ್​​ನಲ್ಲಿ ಏಸುಕ್ರಿಸ್ತನ ಫೋಟೋ ಮುದ್ರಣ ಮಾಡಿ, ಹಂಚಿಕೆ ಮಾಡುವ ಆರೋಪ ಕೇಳಿಬಂದಿದೆ.

Allegation of printing Esus photo in the ration card
ಪಡಿತರ ನೀಡುವ ರೇಷನ್ ಕಾರ್ಡ್​​ನಲ್ಲಿ ಏಸುಕ್ರಿಸ್ತನ ಫೋಟೋ

ರಾಮನಗರ: ಈ ಹಿಂದೆ ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತ ಪ್ರತಿಮೆ ನಿರ್ಮಾಣ ವಿಚಾರ ದೊಡ್ಡಮಟ್ಟದಲ್ಲಿ ವಿವಾದವಾಗಿತ್ತು. ಇದು ರಾಜಕೀಯವಾಗಿಯೂ ಸದ್ದು ಮಾಡಿತ್ತು. ಇದೀಗ ಮತ್ತೆ ಇದೇ ಕನಕಪುರದಲ್ಲಿ ಏಸುಕ್ರಿಸ್ತನ ವಿಚಾರವಾಗಿ ಸಂಘರ್ಷ ಶುರುವಾಗಿದೆ.

ಪಡಿತರ ಚೀಟಿಯಲ್ಲಿ ಏಸು ಫೋಟೋ ಮುದ್ರಣ ಆರೋಪ

ಕೋಡಿಹಳ್ಳಿ ಹೋಬಳಿ ಹಾಗೂ ಉಯ್ಯಂಬಳ್ಳಿ ಗ್ರಾಮದಲ್ಲಿ ಪಡಿತರ ನೀಡುವ ರೇಷನ್ ಕಾರ್ಡ್​​ನಲ್ಲಿ ಏಸುಕ್ರಿಸ್ತನ ಫೋಟೋ ಮುದ್ರಣ ಮಾಡಿ ಹಂಚಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ರೇಷನ್ ಕಾರ್ಡ್​ಗಳು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿವೆ. ಈ ವಿಚಾರವಾಗಿ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ನಾಗಾರ್ಜುನ್​ ರಾಮನಗರ ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಏಸು ಕ್ರಿಸ್ತನ ಪ್ರತಿಮೆ ಬೆಳಗಿಸಿ ಕೋವಿಡ್​ ಸಂತ್ರಸ್ತರಿಗೆ ನಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.