ರಾಮನಗರ: ದೇಶದ ಸ್ಕಿಲ್ ಇಂಡಿಯಾ ಕಾರ್ಯಕ್ರಮಕ್ಕೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ನ ಕೊಡುಗೆಗೆ ಪ್ರಮುಖ ಉತ್ತೇಜನವಾಗಿ ಕಂಪನಿಯ, ಎನ್.ಅಖಿಲೇಶ್ ಮತ್ತು ಎಸ್.ಎನ್.ಕಾರ್ತಿಕ್ ಗೌಡ ಅಕ್ಟೋಬರ್ 4 ರಿಂದ 7 ರವರೆಗೆ ಜರ್ಮನಿಯಲ್ಲಿ ನಡೆದ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಮೆಕಾಟ್ರಾನಿಕ್ಸ್ ಸ್ಕಿಲ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಮೊದಲು ಆಂತರಿಕ ಕೌಶಲ್ಯ ಸ್ಪರ್ಧೆಯ ಮೂಲಕ ಆಯ್ಕೆಯಾದ ಇವರು ವಿಶ್ವ ಕೌಶಲ್ಯ ಕ್ಷೇತ್ರವನ್ನು ತಲುಪಲು ಮೊದಲು ಜಿಲ್ಲಾ, ವಲಯ, ರಾಜ್ಯ, ಪ್ರಾದೇಶಿಕ ಮತ್ತು ಭಾರತ ಕೌಶಲ್ಯ ಸ್ಪರ್ಧೆಗಳಲ್ಲಿ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದರು. 1950 ರಲ್ಲಿ ಪ್ರಾರಂಭವಾದ ವಿಶ್ವ ಕೌಶಲ್ಯ ಸ್ಪರ್ಧೆಯು ಕೌಶಲ್ಯ ಉತ್ಕೃಷ್ಟತೆ ಮತ್ತು ಅಭಿವೃದ್ಧಿಯ ಜಾಗತಿಕ ಕೇಂದ್ರವಾಗಿದೆ. ಕೌಶಲ್ಯ ನಿರ್ವಹಣೆಗೆ ಸಂಬಂಧಿಸಿದ ಹಾಗೂ ಇತರೆ ಪ್ರಮುಖ ವಿಷಯಗಳನ್ನು ಚರ್ಚಿಸಲು ಸರ್ಕಾರ, ಶಿಕ್ಷಣ, ಕೈಗಾರಿಕೆ ಮತ್ತು ಅಸೋಸಿಯೇಷನ್ ಲೀಡರ್ಗಳಿಗೆ ಇದು ಜಾಗತಿಕ ವೇದಿಕೆಯಾಗಿ ರೂಪುಗೊಂಡಿದೆ.
ಇದನ್ನೂ ಓದಿ: ಅಮೆರಿಕಾದ ಪೈ ಸ್ಕ್ವೇರ್ ಸಂಸ್ಥೆಯ ಟೆಕ್ ಕಚೇರಿ ಬೆಂಗಳೂರಲ್ಲಿ ಉದ್ಘಾಟನೆ
ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿ ಮತ್ತು ಎಲೆಕ್ಟ್ರಾನಿಕ್ಸ್ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ರಾಷ್ಟ್ರವ್ಯಾಪಿ ಸ್ಕ್ರೀನಿಂಗ್ ಪ್ರಕ್ರಿಯೆಯ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. ಭಾರತ, ಜಪಾನ್, ಕೊರಿಯಾ, ಚೈನೀಸ್ ಟೈಪೆ, ಜರ್ಮನಿ, ಸ್ವಿಟ್ಜರ್ಲೆಂಡ್, ಯುನೈಟೆಡ್ ಕಿಂಗ್ಡಮ್ ಸೇರಿದಂತೆ 26 ದೇಶಗಳ ಸ್ಪರ್ಧಿಗಳು ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಯಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು. ಮೆಕಾಟ್ರಾನಿಕ್ಸ್ ಸ್ಕಿಲ್ಸ್ ವಿಭಾಗದಲ್ಲಿ ಭಾರತ ಕಂಚು ಗೆದ್ದರೆ, ಚೈನೀಸ್ ಟೈಪೆ ಬೆಳ್ಳಿ ಮತ್ತು ಜಪಾನ್ ಚಿನ್ನದ ಪದಕ ಪಡೆದುಕೊಂಡಿದೆ.
ಟಿಕೆಎಂ ಕಂಪನಿಯೊಳಗೆ ಮಾತ್ರವಲ್ಲದೆ ದೇಶಾದ್ಯಂತ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಟಿಕೆಎಂನ ತರಬೇತುದಾರರು ತಮಿಳುನಾಡು, ಮಹಾರಾಷ್ಟ್ರ, ಚಂಡೀಗಢ, ಒಡಿಶಾ, ಪಂಜಾಬ್, ಆಂಧ್ರಪ್ರದೇಶ ಮತ್ತು ಹರಿಯಾಣದ ಯುವಕರಿಗೆ ಮೆಕ್ಯಾಟ್ರಾನಿಕ್ಸ್ ಮತ್ತು ಪ್ರೋಟೈಪ್ ಮಾಡೆಲಿಂಗ್ ಕೌಶಲ್ಯಗಳಲ್ಲಿ ಬೂಟ್ ಕ್ಯಾಂಪ್ ತರಬೇತಿಯನ್ನು ನೀಡಿದ್ದಾರೆ.