ರಾಯಚೂರು: ರಾಯಚೂರು ತಾಲೂಕಿನ ಹುಣಸಿಹಾಳ ಉಡ ಗ್ರಾಮದ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಅನುಮಾನಾಸ್ಪದವಾಗಿ ಯುವಕನೋರ್ವನ ಶವ ಪತ್ತೆಯಾಗಿದೆ.
ಸುಮಾರು 25 ರಿಂದ 30 ವಯಸ್ಸಿನ ಯುವಕನ ಮೃತದೇಹವಾಗಿದ್ದು, ಯಾರು ಎನ್ನುವ ಗುರುತು ಪತ್ತೆಯಾಗಿಲ್ಲ. ಹುಣಸಿಹಾಳ ಉಡ ಗ್ರಾಮದ ಹತ್ತಿರ ಹಾದು ಹೋಗಿರುವ ತುಂಗಭದ್ರಾ ಎಡದಂಡೆ ಕಾಲುವೆ ಬಳಿಯ ವಾಸುದೇವ ರಾವ್ ಎಂಬುವರ ಹೊಲದಲ್ಲಿ ಸಂಶಯಾಸ್ಪದವಾಗಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ಮಿಯಾಪುರ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಆರೋಪ: ಐವರ ವಿರುದ್ಧ ಪ್ರಕರಣ ದಾಖಲು!
ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಯುವಕನ ಗುರುತು ಪತ್ತೆ ಕಾರ್ಯ ನಡೆದಿದೆ.