ಲಿಂಗಸುಗೂರು: ತಾಲ್ಲೂಕಿನ ಫೂಲಭಾವಿ ಗ್ರಾಮದ ಶಿವಮ್ಮ ಎಂಬ ತುಂಬು ಗರ್ಭಿಣಿಯನ್ನು ಗುರುವಾರ 108 ಆ್ಯಂಬ್ಯುಲೆನ್ಸ್ನಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆ ತರುವಾಗ ದಾರಿ ಮಧ್ಯೆಯೇ ಆಕೆಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ, ಆಶಾ ಕಾರ್ಯಕರ್ತೆ ಸಹಕಾರದೊಂದಿಗೆ ಆ್ಯಂಬುಲೆನ್ಸ್ ಸಿಬ್ಬಂದಿ ಸರಳ ಹೆರಿಗೆ ಮಾಡಿಸಿದ್ದಾರೆ.
ಅವಳಿ ಗಂಡು ಮಕ್ಕಳು ಹಾಗೂ ತಾಯಿ ಕೂಡ ಆರೋಗ್ಯವಾಗಿದ್ದಾರೆ. ತಾಯಿ ಹಾಗು ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.