ರಾಯಚೂರು: ಟಿಪ್ಪರ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬೈಕ್ ಮೇಲೆ ತೆರಳುತ್ತಿದ್ದವರು ಗಾಯಗೊಂಡ ಘಟನೆ ರಾಯಚೂರು ತಾಲೂಕಿನ ಜೇಗರಕಲ್ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಹೊಸಪೇಟೆಯಿಂದ ಜೇಗರಕಲ್ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯ ಈ ದುರ್ಘಟನೆ ಸಂಭವಿಸಿದೆ. ಜೇಗರಕಲ್ ಗ್ರಾಮದ ಗಂಗಮ್ಮ(43) ಮೃತ ಮಹಿಳೆಯಾಗಿದ್ದಾರೆ. ಗಂಗಮ್ಮ ಅವರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಮರಳು ತುಂಬಿದ್ದ ಟಿಪ್ಪರ್ ಏಕಾಏಕಿ ಡಿಕ್ಕಿಯಾಗಿದೆ. ಗುದ್ದಿದ ರಭಸಕ್ಕೆ ಗಂಗಮ್ಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಇದೇ ವೇಳೆ, ಎದುರಿನಿಂದ ಬರುತ್ತಿದ್ದ ಬೈಕ್ಗೂ ಟಿಪ್ಪರ್ ಗುದ್ದಿದ್ದು, ಬೈಕ್ನಲ್ಲಿದ್ದವರು ಅದೃಷ್ಟವಶಾತ್ ಬಚಾವಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಈವರೆಗೂ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ದಾವಣಗೆರೆ ಸರ್ಕಾರಿ ಶಾಲೆಯ ಪ್ರಾಚಾರ್ಯ ಸೇರಿ 32 ವಿದ್ಯಾರ್ಥಿಗಳಿಗೆ ಕೊರೊನಾ!