ETV Bharat / state

ಮನೆ ಮಹಡಿಯಿಂದ ಬಿದ್ದು ಗೃಹಿಣಿ ಅನುಮಾನಾಸ್ಪದ ಸಾವು: ಪೋಷಕರಿಂದ ಕೊಲೆ ಆರೋಪ - ಕೌಟುಂಬಿಕ ಕಲಹ

ಮಗಳ ಥರ ನೋಡಿಕೊಳ್ಳುತ್ತೇವೆ ಎಂದು ಹೇಳಿ ಈಗ ಕೊಲೆ ಮಾಡಿದ್ದಾರೆ ಎಂದು ಮೃತ ಶಿಲ್ಪಾ ಅವರ ಪೋಷಕರು ಆರೋಪಿಸಿದ್ದಾರೆ.

Quarrel between two families
ಗೃಹಿಣಿ ಅನುಮಾನಾಸ್ಪದ ಸಾವು
author img

By ETV Bharat Karnataka Team

Published : Sep 20, 2023, 3:50 PM IST

Updated : Sep 20, 2023, 8:11 PM IST

ಮನೆ ಮಹಡಿಯಿಂದ ಬಿದ್ದು ಗೃಹಿಣಿ ಅನುಮಾನಾಸ್ಪದ ಸಾವು: ಪೋಷಕರಿಂದ ಕೊಲೆ ಆರೋಪ

ರಾಯಚೂರು: ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಬದ್ರಿನಾಥ ಕಾಲೋನಿಯಲ್ಲಿ ಬುಧವಾರ ಬೆಳಗ್ಗೆ ಘಟನೆ ನಡೆದಿದೆ. ಶಿಲ್ಪಾ (28) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಪತಿ ಶರತ್, ಅತ್ತೆ ಶಶಿಕಲಾ ಹಾಗೂ ಮಾವ ಸುರೇಶ್ ಅವರು ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ಎರಡು ಕುಟುಂಬಗಳ ಮಧ್ಯೆ ಗಲಾಟೆ: ಈ ವೇಳೆ ಶಿಲ್ಪಾ ಅವರ ಮಾವನಿಗೆ ಮೃತಳ ಸಂಬಂಧಿಕರು ಥಳಿಸಿದ್ದು, ಸ್ಥಳೀಯರು ಹಾಗೂ ಪೊಲೀಸರು ಜಗಳ ಬಿಡಿಸಿದ್ದಾರೆ. ನಿನ್ನೆ ರಾತ್ರಿ ಪತಿ ಹಾಗೂ ಪೋಷಕರು ಶಿಲ್ಪಾಳನ್ನು ಕೊಂದು ಮನೆ ಮೇಲಿಂದ ತಳ್ಳಿದ್ದಾರೆ. ಜಗಳ ಮಾಡಿ ಮಹಡಿಯಿಂದ ತಳ್ಳಿ ಕೊಲೆಗೈದಿದ್ದಾರೆ ಎಂದು ಮೃತಳ ಸಹೋದರ ದೂರಿದ್ದಾರೆ.

2022ರ ಜೂನ್​ನಲ್ಲಿ ಶರತ್​ ಹಾಗೂ ಶಿಲ್ಪಾಗೆ ಮದುವೆಯಾಗಿತ್ತು. ಪತಿ ಹಾಗೂ ಪತ್ನಿ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು. ಈ ನಡುವೆ ಪತಿಯ ತಂದೆ ತನ್ನ ಸೊಸೆಯನ್ನು ಸಮಾಧಾನಪಡಿಸಿ, ಸೊಸೆಯನ್ನು ಮನೆಗೆ ಕರೆದಿದ್ದರು. ಆದರೆ ಕೌಟುಂಬಿಕ ಕಲಹ ಈಗ ಸಾವಿನಲ್ಲಿ ಕೊನೆಯಾಗಿದೆ. ಘಟನೆಯಿಂದಾಗಿ ಮೃತಳ ಪೋಷಕರು ತೀವ್ರವಾಗಿ ಕೆರಳಿದ್ದು, ಪತಿ ಹಾಗೂ ಅವರು ಕುಟುಂಬಸ್ಥರ ಮೇಲೆ ಆಕ್ರೋಶಗೊಂಡು ಕೆಂಡಾಮಂಡಲವಾಗಿದ್ದಾರೆ. ಪರಾರಿಯಾಗಿರುವ ಪತಿ ಶರತ್ ಬರೋವರೆಗೂ ಮೃತದೇಹ ಎತ್ತಲು ಬಿಡಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ನೇತಾಜಿ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮೃತ ಶಿಲ್ಪಾ ಅವರ ತಂದೆ ವೀರೇಶರೆಡ್ಡಿ ಮಾತನಾಡಿ, ಮನೆಯಲ್ಲಿದ್ದ ಮಗಳನ್ನು ಆಕೆಯ ಮಾವನ ಮಾತನ್ನು ನಂಬಿ ಕಳುಹಿಸಿ ಕೊಟ್ಟಿದ್ದೆವು. ಆದರೆ ಈಗ ಹೀಗಾಗಿದೆ. ಗಂಡ, ಅತ್ತೆ, ಮಾವ ಸೇರಿ ನನ್ನ ಮಗಳನ್ನು ಕೊಲೆ ಮಾಡಿದ್ದಾರೆ. ಸೊಸೆಯನ್ನು ಮಗಳ ಥರ ನೋಡಿಕೊಳ್ಳುತ್ತೇವೆ. ನನಗೆ ಮೇಜರ್​ ಆಪರೇಷನ್​ ಇದೆ. ಬೆಂಗಳೂರಿಗೆ ಆಪರೇಷನ್​ಗೆ ಹೋಗುವಾಗ, ಮಗ ಸೊಸೆ ಜೊತೆಗೆ ಇದ್ದರೆ ಕಷ್ಟ, ಗಲಾಟೆ ಮಾಡಿಕೊಳ್ಳುತ್ತಾರೆ ಎಂದು ಆಕೆಯ ಮಾವ ಅವಳನ್ನು ನಮ್ಮ ಮನೆಗೆ ತಂದು ಬಿಟ್ಟು ಹೋಗಿದ್ದರು. ಆಪರೇಷನ್​ ಆದ ಬಳಿಕ ಬಂದು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದರು. ಹಾಗೆಯೇ ಆಪರೇಷನ್​ ಆದ ಬಳಿಕ ಬಂದು, ನನ್ನ ಮಗ ಬೇಡ, ಸೊಸೆ ಬೇಕು ನಮಗೆ. ಅವಳನ್ನು ಮಗಳಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿ ಮಾವನೇ ಬಂದು ಕರೆದುಕೊಂಡು ಹೋಗಿದ್ದ. ಆದರೆ ಈಗ ನನ್ನ ಮಗಳು ಹೆಣವಾಗಿದ್ದಾಳೆ. ಮಗಳನ್ನು ಚಿನ್ನ, ಬೆಳ್ಳಿ, ನಗದು ಸೇರಿ 50 ಲಕ್ಷ ವರದಕ್ಷಿಣೆ ನೀಡಿ, ಅದ್ಧೂರಿಯಾಗಿಯೇ ಮದುವೆ ಮಾಡಿಕೊಟ್ಟಿದ್ದೆವು. ನಂಬಿ ಕಳುಹಿಸಿದ್ದಕ್ಕೆ ಮೂವರು ಸೇರಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಶಿಲ್ಪಾ ಅವರ ಅತ್ತೆ ಶಶಿಕಲಾ ಮಾತನಾಡಿ, ನಿನ್ನೆ ಏನಾಗಿದೆ ಎನ್ನುವುದು ನಮಗೂ ಸರಿಯಾಗಿ ಗೊತ್ತಿಲ್ಲ. ಅವಳು ಜಾಸ್ತಿ ಇಲ್ಲಿ ಇರೋದೆ ಇಲ್ಲ. ಮದುವೆಯಾಗಿ 10 ದಿನ ಮನೆಯಲ್ಲಿದ್ದು, ಮತ್ತೆ ಆಷಾಢ ಬಂತು ಎಂದು ತವರು ಮನೆಗೆ ಹೋಗಿದ್ದಳು. ಮತ್ತೆ ವಾಪಸ್​ ಬರೋಕೆ ಕಿರಿ ಕಿರಿ ಮಾಡಿದ್ದಳು. ನಾವು ಹೋಗಿ ಮಾತನಾಡಿ, ಹೀಗೆ ಮಾಡಬಾರದು, ಅನುಸರಿಸಿಕೊಂಡು ಹೋಗಬೇಕು ಇಬ್ಬರು ಎಂದು ಹೇಳಿ ಕರೆದುಕೊಂಡು ಬಂದಿದ್ದೆವು.

ಬಂದ ಮೇಲೂ ಕಿರಿ ಕಿರಿ ಜಾಸ್ತಿ ಮಾಡಿದ್ದಳು. ಗಂಡ ಹೆಂಡತಿಯ ಮಧ್ಯೆ ಏನಾಗುತ್ತಿತ್ತು. ಎಂಬುದು ನಮಗೂ ಗೊತ್ತಿಲ್ಲ. ಕೋಣೆಯೊಳಗೆ ಏನಾಗುತ್ತಿತ್ತು ಗೊತ್ತಿಲ್ಲ. ಆದರೆ ಹೊರಗಡೆ ಅಂತೂ ಅವರು ಜಗಳ ಆಡಿಲ್ಲ. ನಮ್ಮ ಜೊತೆ ಏನೂ ಹೇಳಿಕೊಂಡಿಲ್ಲ. ಆಮೇಲೆ ಎಲ್ಲ ಮೀರಿದ ಮೇಲೆ ಮಗ ಹೇಳಿಕೊಳ್ತಿದ್ದ. ಸೊಸೆ ಸತಾಯ್ಸಿದ್ದಾಳೆ ಎಂದು ಹೇಳುತ್ತಿದ್ದ. ಯಾವುದಕ್ಕೆ ಅಂತ ಗೊತ್ತಿಲ್ಲ. ಇಬ್ಬರಿಗೂ ಬುದ್ಧಿ ಹೇಳಿ, ಅವರ ಅಪ್ಪ ಅಮ್ಮನ ಮುಂದೆಯೂ ಬುದ್ಧಿವಾದ ಹೇಳಿದ್ದೆವು. ನಮ್ಮ ಯಜಮಾನರಿಗೆ ಆಪರೇಷನ್​ ಇದ್ದಾಗ ಸೊಸೆಯನ್ನು ನಾವೇ ತವರು ಮನೆಯಲ್ಲಿ ಬಿಟ್ಟು ಹೋಗಿದ್ದೆವು. ಇಬ್ಬರು ಅನುಸರಿಸಿಕೊಂಡು ಹೋಗುತ್ತಿರಲಿಲ್ಲ. ಇಬ್ಬರನ್ನು ಬಿಟ್ಟು ಹೋದರೆ ಭಯ ಎಂದು ಅವಳನ್ನು ತವರು ಮನೆಯಲ್ಲಿ ಬಿಟ್ಟು ಹೋಗಿದ್ದೆವು.

ಇವತ್ತು ನಾವು ಮಂತ್ರಾಲಯಕ್ಕೆ ಹೋಗುವವರಿದ್ದೆವು. ಮಗ ಕೂಡ ನಿನ್ನೆ ಮಂತ್ರಾಲಯಕ್ಕೆ ಹೋಗಲಿದ್ದ ಕಾರಣ ಸಂಜೆ 7 ಗಂಟೆಗೆ ಮನೆಗೆ ಬಂದಿದ್ದ. ಕಾರು ಕ್ಲೀನ್​ ಮಾಡಿ ಅವನೂ 9 ಗಂಟೆ ಹೊತ್ತಿಗೆ ಮಲಗಿದ್ದ. ರಾತ್ರಿ ಹತ್ತು ಗಂಟೆಗೆ ನಾನು ಮಲಗಿದ್ದೇನೆ. ಮಾವ ಮನೆಗೆ ಬಂದಾಗ ಅವಳೇ ಬಾಗಿಲು ತೆಗೆದಿದ್ದಳಂತೆ. ಅವರು ಚಾಕಲೇಟ್​ ಕೂಡ ಕೊಟ್ಟಿದ್ದರಂತೆ, ಅದನ್ನೂ ಡೈನಿಂಗ್​ ಟೇಬಲ್​ ಮೇಲೆ ಇಟ್ಟಿದ್ದಾಳೆ. ನಂತರ ಇಬ್ಬರೂ ಮಲಗಿದ್ದಾರೆ. ನಮ್ಮವರು ಬೆಳಗ್ಗೆ ವಾಕಿಂಗ್​ ಹೋಗ್ತಾರೆ. ಅವರು 5 ಗಂಟೆಗೆ ಎದ್ದು ನೋಡಿದಾಗಲೇ ನಮಗೆ ವಿಷಯ ಗೊತ್ತಾಗಿರುವುದು. ನಾವು ಕೂಗಿಕೊಂಡಾಗಲೇ ಮಗನಿಗೂ ವಿಷಯ ಗೊತ್ತಾಗಿ. ರೂಮಿಂದ ಹೊರಗೆ ಬಂದಿದ್ದ. ಗಂಡ ಹೆಂಡತಿ ಜಗಳದಿಂದಾಗಿ ಕೆಲವು ಸಮಯದಿಂದ ಬೇರೆ ಬೇರೆನೆ ಮಲಗುತ್ತಿದ್ದರು ಎಂದು ಹೇಳಿದರು.

ಇದನ್ನೂ ಓದಿ: ಮೈಸೂರು: ಕುಡಿದ ಮತ್ತಿನಲ್ಲಿ ತುಂಬು ಗರ್ಭಿಣಿ ಪತ್ನಿ ಕೊಲೆಗೈದ ಪತಿ

Last Updated : Sep 20, 2023, 8:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.