ರಾಯಚೂರು: ಲಾಕ್‌ಡೌನ್ ಸಮಯದಲ್ಲಿ ಕಡುಬಡವರ ಸ್ಥಿತಿ ಹೇಳತೀರದಾಗಿದ್ದು, ಹಸಿವಿನಿಂದ ಸಾಕಷ್ಟು ಜನರು ನರಳುತ್ತಿದ್ದಾರೆ. ಇದನ್ನು ಮನಗಂಡ ರಾಯಚೂರಿನ ಯೋಧರೊಬ್ಬರು ತಮ್ಮ ಒಂದು ತಿಂಗಳ ಸಂಬಳದಲ್ಲಿ ಬಡವರಿಗೆ ದಿನಸಿ ಕಿಟ್ ಹಂಚಿಕೆ ಮಾಡಿದ್ದಾರೆ.
ನಗರದ 14ನೇ ವಾರ್ಡ್ ನಿವಾಸಿಯಾಗಿರುವ ಎನ್.ರಮೇಶ್ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಇದೀಗ ರಜೆಯ ಮೇಲೆ ತಮ್ಮ ಊರಿಗೆ ಮರಳಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಜನರು ಸಂಕಷ್ಟಕ್ಕೊಳಗಾಗಿರುವುದನ್ನು ಮನಗಂಡ ಅವರು, ಒಂದು ತಿಂಗಳ ಸಂಬಳದಲ್ಲಿ ತಮ್ಮ ಬಡಾವಣೆಯಲ್ಲಿರುವ ಬಡ ಕುಟುಂಬಗಳಿಗೆ ದಿನಸಿ ಕಿಟ್ ಹಂಚಿಕೆ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಯೋದ, ಇಲ್ಲಿನ ಜನರು ನಿತ್ಯ ದುಡಿಮೆ ಮಾಡಿಕೊಂಡು ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು. ಲಾಕ್ಡೌನ್ನಿಂದಾಗಿ ದುಡಿಯುವ ಕೈಗಳಿಗೆ ಕೆಲಸ ಸಿಗದೆ ಪರದಾಡುವ ಪರಿಸ್ಥಿತಿಯಿದೆ. ಹೀಗಾಗಿ, ಅವರಿಗೆ ತಮ್ಮ ಕೈಲಾದಷ್ಟು ನೆರವು ನೀಡಿರುವುದಾಗಿ ತಿಳಿಸಿದ್ದಾರೆ.
ಓದಿ: ಸಿಎಂ ಎದುರೇ ಕಾರಜೋಳ-ಅಭಯ ಪಾಟೀಲ್ ನಡುವೆ ಆನ್ಲೈನ್ನಲ್ಲೇ ವಾಗ್ವಾದ!