ETV Bharat / state

ರಾಯಚೂರಲ್ಲಿ ತರಕಾರಿಗಳನ್ನು ಒದ್ದು ದರ್ಪ ಮೆರೆದಿದ್ದ ಪಿಎಸ್​ಐ ಅಮಾನತು

ಜನರಿಗೆ ತಿಳಿ ಹೇಳಿ ಮಾರುಕಟ್ಟೆಯನ್ನು ಸ್ಥಗಿತಗೊಳಿಸಬೇಕಿದ್ದ ಪೊಲೀಸ್​​ ಸಬ್​​ ಇನ್ಸ್​ಪೆಕ್ಟರ್ ​​ತರಕಾರಿಗಳನ್ನು ಬೂಟುಗಾಲಿನಲ್ಲಿ ಒದ್ದು ಅಸಭ್ಯವಾಗಿ ವರ್ತನೆ ತೋರಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಬಿತ್ತರವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಎಸ್ಪಿ ನಿಕ್ಕಂ ಪ್ರಕಾಶ್​​ ಅವರು ಪಿಎಸ್​ಐ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

vegetables-kicked-psi-suspended
ಪಿಎಸ್​ಐ ಅಮಾನತು
author img

By

Published : Jun 20, 2021, 7:43 PM IST

ರಾಯಚೂರು: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ತರಕಾರಿ ಮಾರಾಟ ಮಾಡುತ್ತಿದ್ದವರನ್ನು ಎಬ್ಬಿಸಿ, ತರಕಾರಿಯನ್ನು ಬೂಟ್​ ಕಾಲಿನಿಂದ ಒದ್ದಿದ್ದ ಸದರ್​ಬಜಾರ್​ ಠಾಣೆಯ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್​ ಆಝಮ್​ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸೌಮ್ಯವಾಗಿ ಜನರಿಗೆ ತಿಳಿ ಹೇಳಿ ಮಾರುಕಟ್ಟೆಯನ್ನು ಸ್ಥಗಿತಗೊಳಿಸಬೇಕಿದ್ದ ಪಿಎಸ್​​ಐ ​​ತರಕಾರಿಗಳನ್ನು ಬೂಟುಗಾಲಿನಲ್ಲಿ ಒದ್ದು ಆಝಮ್​ ಅಸಭ್ಯವಾಗಿ ವರ್ತಿಸಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಬಿತ್ತರವಾಗಿತ್ತು.

ಓದಿ-ರಾಯಚೂರಿನಲ್ಲಿ ಬೂಟ್​ ಕಾಲಿನಿಂದ ತರಕಾರಿ ಒದ್ದು ಪಿಎಸ್​ಐ ದರ್ಪ

ಬೇಜವಾಬ್ದಾರಿತನ ಹಾಗೂ ಅಸಭ್ಯ ವರ್ತನೆ ಮತ್ತು ದುರ್ನಡತೆ ಪ್ರದರ್ಶಿಸಿದ ಹಿನ್ನೆಲೆ ಪೊಲೀಸ್​​ ಸಬ್​ ಇನ್ಸ್​​ಪೆಕ್ಟರ್​​ನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.