ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ' ಗುರುವೈಭವೋತ್ಸವ' ವಿಜಭೃಣೆಯಿಂದ ನಡೆಯುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ. ತುಂಗಾ ತೀರದಲ್ಲಿ ನೆಲೆಸಿರುವ ಶ್ರೀರಾಘವೇಂದ್ರ ಸ್ವಾಮಿಗಳು 402ನೇ ಪಟ್ಟಾಭಿಷೇಕೋತ್ಸವ ಮತ್ತು 428ನೇ ವರ್ಧಂತಿ ಉತ್ಸವ ನಡೆಯುತ್ತಿದ್ದು, ಫೆಬ್ರವರಿ 21ರಿಂದ ಆರಂಭ ಗುರುವೈಭೋತ್ಸವ ಮೂರನೇ ದಿನವಾದ ನಿನ್ನೆ ಅದ್ಧೂರಿಯಾಗಿ ಜರುಗಿತ್ತು.
![vardhanti utsava in Raghavendra Swamy Mutt Raichur](https://etvbharatimages.akamaized.net/etvbharat/prod-images/kn-rcr-01a-actor-rachitaram-ka10035_24022023073739_2402f_1677204459_877.jpg)
ಬೆಳಿಗ್ಗೆ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದವನಕ್ಕೆ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನೇರವೇರಿಸಿದ ನಂತರದಲ್ಲಿ, ನವರತ್ನ ಖಚಿತ ಕವಚದಿಂದ ವಿವಿಧ ಬಣ್ಣಗಳ ಹೂಗಳಿಂದ ಅಲಂಕಾರಿಸಲಾಗಿತ್ತು. ಇದಾದ ನಂತರದಲ್ಲಿ ಶ್ರೀಮಠದ ಪೀಠಾಧಿಪತಿ ಸುಭುದೇಂಧ್ರ ತೀರ್ಥರು ಮೂಲ ರಾಮದೇವರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ- ಪುನಸ್ಕಾರ ನೇರವೇರಿಸಿದರು.
![vardhanti utsava in Raghavendra Swamy Mutt Raichur](https://etvbharatimages.akamaized.net/etvbharat/prod-images/kn-rcr-01a-actor-rachitaram-ka10035_24022023073739_2402f_1677204459_135.jpg)
ಗುರುವೈಭವೋತ್ಸವ ಪ್ರಶಸ್ತಿ: ಸಂಜೆ ಮಠದ ಆವರಣದ ಮುಂಭಾಗದ ಯೋಗೇಂದ್ರ ಸಭಾಮಂಟಪದಲ್ಲಿ ಸಂಗೀತ ಕಾರ್ಯಕ್ರಮ ಜರುಗಿತು. ಅಲ್ಲದೇ ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ಎಂದು ಫೇಮಸ್ ಆಗಿರುವ ರಚಿತ್ ರಾಮ್ಗೆ ಗುರುವೈಭವೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಜೊತೆಗೆ ನವರಸನಾಯಕ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್, ಆಂಧ್ರ ಶಾಸಕ ಕಟಸನಿ ರಾಮಭೂಪಾಲ್, ಬಳ್ಳಾರಿಯ ಶ್ರೀರಾಘವೇಂದ್ರ ಅಸ್ಟತೋತ್ತರ ಸಂಘದವರಿಗೆ ಸನ್ಮಾನಿಸಿ ಗೌರವಿಸಲಾಯಿತು.
![vardhanti utsava in Raghavendra Swamy Mutt Raichur](https://etvbharatimages.akamaized.net/etvbharat/prod-images/kn-rcr-01a-actor-rachitaram-ka10035_24022023073739_2402f_1677204459_275.jpg)
ವಿಶೇಷ ಪೂಜೆ ಸಲ್ಲಿಸಿದ ರಚಿತಾ ರಾಮ್: ರಚಿತ ರಾಮ್ ಬೆಳಗ್ಗೆಯೇ ಮಂತ್ರಾಲಯಕ್ಕೆ ಆಗಮಿಸಿದ್ದರು. ಬೆಳಗ್ಗೆ ಮಠಕ್ಕೆ ಬಂದು ಪ್ರಾಕಾರದಲ್ಲಿ ಪ್ರದಾಕ್ಷಿಣೆ ಹಾಕಿ, ನಂತರ ರಾಯರ ಮೂಲ ಬೃಂದವನ ದರ್ಶನ ಪಡೆದುಕೊಂಡು ವಿಶೇಷ ಪೂಜೆ ಸಲ್ಲಿಸಿದ್ದರು. ಇದಾದ ನಂತರ ಶ್ರೀಮಠದ ಪೀಠಾಧಿಪತಿಗಳ ಭೇಟಿ ಮಾಡಿ ಆರ್ಶೀವಾದ ಪಡೆದುಕೊಂಡರು.
ಇದನ್ನೂ ಓದಿ: ಶೃಂಗೇರಿಗೆ ಭೇಟಿ ನೀಡಲಿರುವ ಮಾಜಿ ಸಿಎಂ ಹೆಚ್ಡಿಕೆ: ಪಂಚರತ್ನ ಯಾತ್ರೆಗೆ ಚಾಲನೆ
ಸ್ಯಾಂಡಲ್ವುಡ್ನ ಡಿಂಪಲ್ ಕ್ವಿನ್ ಕಂಡ ಅಭಿಮಾನಿಗಳು ಪೋಟೋ ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ರಾಯರ ದರ್ಶನ ಪಡೆದುಕೊಂಡರು. ಶ್ರೀಮಠಕ್ಕೆ ಆಗಮಿಸುತ್ತಿದ್ದಂತೆ ಜಗ್ಗೇಶ್ರನ್ನು ಮಠದ ಸಂಪ್ರಾದಾಯದಂತೆ ಬರಮಾಡಿಕೊಂಡರು. ಮೊದಲಿಗೆ ಗ್ರಾಮ ದೇವತೆ ಮಂಚಾಲಮ್ಮ ದೇವಿಯ ಆರ್ಚನೆ ಮಾಡಿಸಿ, ವಿಶೇಷ ಪೂಜೆ ನೇರವೇರಿಸಿದ ದರ್ಶನ ಪಡೆದುಕೊಂಡರು. ನಂತರ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆದು ವಿಶೇಷ ಪೂಜೆ ನೇರವೇರಿಸಿ, ಪೀಠಾಧಿಪತಿಗಳ ಭೇಟಿ ಉಭಯ ಕುಶೋಲಪಚರಿ ವಿಚಾರಿಸಿ, ಆರ್ಶೀವಾದ ಪಡೆದುಕೊಂಡರು. ನಂತರ ಸಂಜೆಯ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಗುರುವೈಭವೋತ್ಸವವನ್ನು ಕಣ್ತುಂಬಿಗಳಲು ಕರ್ನಾಟಕ ರಾಜ್ಯ ಸೇರಿದಂತೆ ನಾನಾ ಭಾಗಗಳಿಂದ ಭಕ್ತರು ಮಂತ್ರಾಲಯಕ್ಕೆ ಆಗಮಿಸುತ್ತಿದ್ದಾರೆ. ಹಲವರು ಪಕ್ಕದಲ್ಲಿಯೇ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ನಂತರ ರಾಯರ ದರ್ಶನ ಪಡೆದುಕೊಂಡು, ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು. ಇಷ್ಟಾರ್ಥ ಈಡೇರಿಸಿದವರು ಹರಕೆಯನ್ನು ತಿರಿಸುತ್ತಿದ್ದರೆ ಜೊತೆಗೆ ಪೂಜೆ-ಪುನಸ್ಕಾರ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ.
21ರಿಂದ 26ರ ವರೆಗೆ ಕಾರ್ಯಕ್ರಮ: ಫೆಬ್ರವರಿ 21 ರಿಂದ 26ರ ವರೆಗೆ ಮಂತ್ರಾಲಯದಲ್ಲಿ ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವ ನಡೆಯುತ್ತಿದೆ.
ಇದನ್ನೂ ಓದಿ: ಫೆಬ್ರವರಿ 21 ರಿಂದ 26ರ ವರೆಗೆ ರಾಯರ ಪಟ್ಟಾಭಿಷೇಕ, ವರ್ಧಂತಿ ಉತ್ಸವ