ರಾಯಚೂರು: ರಾಯಚೂರು ನಗರದ ಸಿಟಿ ಎಲೆವನ್ ತಂಡದ ಕ್ರಿಕೆಟ್ ಪಟು ವಿದ್ಯಾಧರ ಪಾಟೀಲ್ 19ರ ವಯಸ್ಸಿನ ಪ್ರವಾಸಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾನೆ.
ಕೆಪಿಎಲ್‌ನಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ವಿದ್ಯಾಧರ ಪಾಟೀಲ್, ಕರ್ನಾಟಕ 19ವಯಸ್ಸಿನ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ, ಬಿಸಿಸಿಐನ ಆಯ್ಕೆದಾರರ ಗಮನ ಸೆಳೆದು ಅಂಡರ್19 ತಂಡಕ್ಕೆ ಆಯ್ಕೆಯಾಗಿದ್ದಾರೆ.
ಜು.15ರಿಂದ ಪ್ರಾರಂಭವಾಗಲಿರುವ ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾಗವಹಿಸಲು ವಿದ್ಯಾಧರ ಪಾಟೀಲ್ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಅತಿಥೇಯ ಇಂಗ್ಲೆಂಡ್ ಹಾಗೂ ಬಾಂಗ್ಲಾ ತಂಡದೊಂದಿಗೆ ಸರಣಿ ನಡೆಯಲಿದೆ. ಕಳೆದ ವರ್ಷ ಮನೋಜ ಬಾಂಡಗೆ ಕೂಡ ಕೆಪಿಎಲ್‌ತಂಡದಲ್ಲಿ ಆಡಿದ ರಾಯಚೂರಿನ ಕ್ರಿಕೆಟಿಗರಾಗಿದ್ದಾರೆ.
ವಿದ್ಯಾಧರ ಪಾಟೀಲ್ ಆಯ್ಕೆಗೆ ಕೆಎಸ್‌ಸಿಎ ವಲಯ ಸಂಚಾಲಕ ಸುಜೀತ್ ಬೊಹರಾ, ಎಲೆವೆನ್ ತಂಡದ ಅಧ್ಯಕ್ಷ ಕೆ.ಶರಣರೆಡ್ಡಿ, ವಲಯ ವ್ಯವಸ್ಥಾಪಕ ಕೆ.ಭೀಮಾಚಾರ್, ತರಬೇತುದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶುಭ ಹಾರೈಸಿದ್ದಾರೆ.