ರಾಯಚೂರು: ಬಿಸಿಲು ನಾಡು ರಾಯಚೂರಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದಕ್ಕೆ ನಗರಸಭೆ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ರಸ್ತೆ ಪಕ್ಕಯಲ್ಲಿ ಸಸಿಗಳನ್ನು ನೆಟ್ಟು ಹಸಿರೀಕರಣಗೊಳಿಸಿತ್ತು. ಆದರೆ ಸರಿಯಾದ ಪೋಷಣೆ ಇಲ್ಲದೆ ಬಾಡಿದ್ದು, ಮತ್ತೊಂದೆಡೆ ಗಿಡಗಳು ಬೃಹದಾಕಾರವಾಗಿ ಬೆಳೆದಿರುದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುವುದಲ್ಲದೆ ಅಪಘಾತಕ್ಕೆ ಕಾರಣವಾಗುತ್ತಿವೆ.
ನಗರಸಭೆ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಸ್ಟೇಷನ್ ರಸ್ತೆಯಿಂದ ಬಸವೇಶ್ವರ ವೃತ್ತ, ಗಂಜ್ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದಿಂದ ಬಸವೇಶ್ವರ ರಸ್ತೆಯವರೆಗೆ ಸಸಿಗಳನ್ನು ನೆಡಲಾಗಿತ್ತು. ರಸ್ತೆಗಳ ಎರಡು ಬದಿಗೆ ಹೊಂದಿಕೊಂಡಂತೆ ಸೆಂಟರ್ನಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರೀಕರಣಗೊಳಿಸುವ ಉದ್ದೇಶ ಹೊಂದಲಾಗಿತ್ತು. ಆರಂಭದಲ್ಲಿ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿತ್ತು. ಆದರೆ ಸಸಿಗಳಿಗೆ ಸಕಾಲಕ್ಕೆ ನೀರುಣಿಸದೆ ನಿರ್ಲಕ್ಷ್ಯವಹಿಸುತ್ತಿದ್ದು, ಇದರಿಂದ ಕೆಲ ಸಸಿಗಳು ಬೆಳೆಯದೆ, ಕೆಲವು ಬಿಡಾಡಿ ದನಗಳ ಪಾಲಾಗಿವೆ. ಮತ್ತೆ ಕೆಲವು ನೀರಿಲ್ಲದೆ ಒಣಗುವ ಹಂತವನ್ನು ತಲುಪಿವೆ. ಇಷ್ಟಾದರೂ ಯಾವೊಬ್ಬ ಅಧಿಕಾರಿ ಇತ್ತ ಸುಳಿಯದಿದ್ದಕ್ಕೆ ಅಧಿಕಾರಿಗಳು ಮತ್ತು ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಹನ ಸವಾರರಿ ಅಪತ್ತು:
ನಗರದಲ್ಲಿ ಹಸಿರೀಕರಣಕ್ಕೆ ಅಂದಿನ ಎಸ್.ಪಿ.ಚೇತನ್ ಸಿಂಗ್ ರಾಥೋರ್ ಅವರು ಗಂಜ್ ರಸ್ತೆಯಲ್ಲಿ ವಿವಿಧ ಗಿಡಿಗಳನ್ನು ಬೆಳೆದು ದೊಡ್ಡದಾಗಿದ್ದು, ಇದಕ್ಕೆ ಜಾಲಿ ಬ್ಯಾರಿಕೇಡ್ ಅಳವಡಿಸಿಲಾಗಿದೆ. ಕೆಲವೆಡೆ ತಂತಿ ಹಾಳಾಗಿ ಗಿಡಗಳು ನಾಶವಾಗಿವೆ. ಅಲ್ಲದೆ ಗಂಜ್ ವೃತ್ತದಲ್ಲಿ ಈ ಗಿಡಗಳು ದೊಡ್ಡದಾಗಿ ,ರೆಂಬೆಕೊಂಬೆಗಳು ಜಾಲರಿಯಿಂದ ಹೊರ ಬಂದಿದ್ದು, ರಸ್ತೆಬದಿಯ ವಾಹನ ಸವಾರರಿಗೆ ಮುಳ್ಳು ತಾಕುತ್ತಿವೆ. ಕೆಲವೊಮ್ಮೆ ಗಿಡಗಳು ತಾಕಿ ಅಪಘಾತಕ್ಕೆ ಎಡೆಮಾಡಿಕೊಡುತ್ತಿವೆ.
ಇನ್ನು ಮುಂದಾದರು ಸಂಬಂಧಿಸಿದ ಅಧಿಕಾರಿಗಳು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.