ರಾಯಚೂರು: ತಿರುಪತಿ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ಧರ್ಮ ಗುರುಗಳು, ಮಠಾಧೀಶರಿಗೆ ನೇರ ದರ್ಶನಕ್ಕೆ ನಿರ್ಬಂಧ ಹೇರಿರುವುದಕ್ಕೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬ್ರಿಟಿಷರ ಕಾಲದಿಂದಲೂ ದೇವಾಲಯಗಳಲ್ಲಿ ಧಾರ್ಮಿಕ ಗುರುಗಳು ಮತ್ತು ಮಠಾಧೀಶರಿಗೆ ದೇಗುಲದಲ್ಲಿ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ ಈಗಿನ ಆಡಳಿತಾಧಿಕಾರಿಗಳು ಮಠಾಧೀಶರಿಗೆ ಅಗೌರವ ತೋರುವ ರೀತಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಕೂಡಲೇ ಇದರ ಬಗ್ಗೆ ಆಳಿತಾಧಿಕಾರಿಗಳು ಒಗ್ಗೂಡಿ ಚರ್ಚೆ ನಡೆಸಿ ತಿರ್ಮಾನ ಕೈಗೊಳ್ಳಬೇಕೆಂದು ಕಿವಿ ಮಾತು ಹೇಳಿದ್ರು.
ಲೋಕಸಭೆ ಚುನಾವಣೆಯಲ್ಲಿ ಮತದಾನ ಹಕ್ಕು ಹೊಂದಿದವರು ತಪ್ಪದೇ ಮತದಾನ ಮಾಡಬೇಕು. ಸಂವಿಧಾನ ಬದ್ದವಾಗಿ ಪ್ರತಿಯೊಬ್ಬರ ಪ್ರಜೆಗೂ ಮತದಾನ ಹಕ್ಕು ಕಲ್ಪಿಸಿದ್ದು, ಅದನ್ನ ಅಸಡ್ಡೆ ಮಾಡದೆ ಮತದಾನ ಹಕ್ಕನ್ನು ಸಂದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಆಸೆ ಆಮೀಷಾಗಳಿಗೆ ಒಳಗಾಗದೆ ಸಮರ್ಥ ನಾಯಕನ್ನ ಆಯ್ಕೆ ಮಾಡಲು ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದರು.
ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಗಳು ವೈಯಕ್ತಿಕ ನಿಂದನೆ ಮಾಡಿಕೊಳ್ಳದೆ ಪಕ್ಷದ ಸಿದ್ಧಾಂತ ಹಾಗೂ ಅಭಿವೃದ್ಧಿ ವಿಚಾರಗಳ ಕಡೆಗೆ ಚರ್ಚೆ ನಡೆಸಬೇಕು ಎಂದರು.