ETV Bharat / state

ರಾಯಚೂರು: ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ?

ಈ ರೈಸ್ ಮಿಲ್​ಗಳಿಗೆ ಇಷ್ಟೊಂದು ಪ್ರಮಾಣದಲ್ಲಿ ಪಡಿತರ ಅಕ್ಕಿ ಸರಬರಾಜು ಆಗಿರುವುದಾದರು ಹೇಗೆ? ಗಿರಣಿ ಮಾಲೀಕರು ಕೂಡ ಪಡಿತರ ಅಕ್ಕಿಯನ್ನು ಇಷ್ಟು ಧೈರ್ಯವಾಗಿ ಹೇಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಹಲವು ಪ್ರಶ್ನೆಗಳು ಉದ್ಬವಿಸಿವೆ.

ಅಕ್ಕಿ ಮಾರಾಟ
ಅಕ್ಕಿ ಮಾರಾಟ
author img

By

Published : Mar 5, 2021, 11:39 PM IST

ರಾಯಚೂರು: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ರೈಸ್ ಮಿಲ್​ಗಳ ಮೇಲೆನ ದಾಳಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ಪತ್ತೆಯಾಗಿದ್ದು, ಇದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲ ಇದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ

ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮಗೌಡರ ನೇತೃತ್ವದಲ್ಲಿ ನಗರದ ಹೊರವಲಯದಲ್ಲಿರುವ ಮಂಚಲಾಪುರ ರಸ್ತೆಯ ಎರಡು ರೈಸ್ ಮಿಲ್​ಗಳು ಹಾಗೂ ಗದ್ವಾಲ್ ರೈಸ್ ಮಿಲ್​​ಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಬರೋಬ್ಬರಿ 884 ಚೀಲಗಳಲ್ಲಿ 6.6 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ ಪತ್ತೆಯಾಗಿತ್ತು.

ಈ ಅಕ್ಕಿಯನ್ನು ಕೆಲ ರೈಸ್ ಮಿಲ್ ಮಾಲೀಕರು ಗೊಬ್ಬರ ಚೀಲಗಳಲ್ಲಿ, ರೈಸ್ ಮಿಲ್ ಬಂಕರ್​ನಲ್ಲಿ ಸಂಗ್ರಹಿಸಿರುವುದು ದಾಳಿಯಲ್ಲಿ ಪತ್ತೆಯಾಗಿದೆ. ಸಿಕ್ಕ ಪಡಿತರ ಅಕ್ಕಿಯನ್ನ ವಶಕ್ಕೆ ಪಡೆಯುವ ಮೂಲಕ ಸಂಬಂಧಿಸಿದ ಇಲಾಖೆಗೆ ಒಪ್ಪಿಸಿ, ನಾಲ್ಕು ರೈಸ್ ಮಿಲ್ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಆದ್ರೆ, ಈ ರೈಸ್ ಮಿಲ್​ಗಳಿಗೆ ಇಷ್ಟೊಂದು ಪ್ರಮಾಣದಲ್ಲಿ ಪಡಿತರ ಅಕ್ಕಿ ಸರಬರಾಜು ಆಗಿರುವುದಾದರು ಹೇಗೆ? ಗಿರಣಿ ಮಾಲೀಕರು ಕೂಡ ಪಡಿತರ ಅಕ್ಕಿಯನ್ನು ಇಷ್ಟು ಧೈರ್ಯವಾಗಿ ಹೇಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಹಲವು ಪ್ರಶ್ನೆಗಳು ಉದ್ಬವಿಸಿವೆ.

ಪಡಿತರ ಅಕ್ಕಿಯನ್ನು ಏನು ಮಾಡುತ್ತಾರೆ?

ಗಿರಣಿ ಮಾಲೀಕರು ಪಡಿತರ ಅಕ್ಕಿಯನ್ನ ಖರೀದಿಸಿ ಅವುಗಳಿಗೆ ಪಾಲಿಷ್​ ಮಾಡಲಾಗುತ್ತದೆ. ಬಳಿಕ ಅಕ್ಕಿಯನ್ನು ಬ್ರ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಇಲ್ಲವೇ ಗುಣಮಟ್ಟದ ಅಕ್ಕಿಯಲ್ಲಿ ಬೆರೆಸಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.