ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲೂಕು ಕಸಬಾಲಿಂಗಸುಗೂರಿನ ತೋಟವೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ತೋಟಗಾರಿಕೆ ಬೆಳೆಗಳು ಸುಟ್ಟು ಅಪಾರ ಪ್ರಮಾಣದ ನಷ್ಟವಾಗಿದೆ.
ಗುರುವಾರ ಸಂಜೆ ಚಂದ್ರಶೇಖರ ಭೋವಿ ಎಂಬುವರ ತೋಟದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, 5 ಎಕರೆ ಪ್ರದೇಶದಲ್ಲಿನ 30 ಮಾವಿನ ಗಿಡ, 5 ಸಪೋಟ ಹಣ್ಣಿನ ಗಿಡ, 10 ಸಾಗುವಾನಿ ಗಿಡಗಳು, 30ಕ್ಕೂ ಹೆಚ್ಚು ನೀರು ಹರಿಸುವ ಪೈಪ್‌ಗಳು ಸುಟ್ಟು ಹಾನಿಯಾಗಿವೆ.
ಈ ಕುರಿತು ರೈತ ಚಂದ್ರಶೇಖರ ಭೋವಿ ಮಾತನಾಡಿ, ನಾಲ್ಕೈದು ವರ್ಷಗಳ ಫಸಲು ನೀಡುವಂತಹ ಗಿಡಗಳು ಸುಟ್ಟು ಲಕ್ಷಾಂತರ ರೂ. ಬೆಳೆ ಹಾನಿಯಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿಕೊಂಡರು.