ರಾಯಚೂರು : ಲಾಕ್ಡೌನ್ ಹಿನ್ನೆಲೆ ಕೆಲಸವಿಲ್ಲದೇ ಬೇಸತ್ತಿದ್ದ ಕೂಲಿ ಕಾರ್ಮಿಕರಿಗೆ ಗಣಿನಾಡು ಜಿಲ್ಲಾ ಪಂಚಾಯಿತಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಲಕ್ಷ ಮಾನವ ದಿನಗಳ ಕೆಲಸ ನೀಡಿದೆ.
2020 ಮೇ27ರ ದಾಖಲೆಯ ಪ್ರಕಾರ ರಾಯಚೂರು ಜಿಲ್ಲೆಯಲ್ಲಿ ಒಟ್ಟು 2,75,933 ಕುಟುಂಬಗಳು ನರೇಗಾ ಯೋಜನೆಗೆ ನೋಂದಣಿಯಾಗಿದ್ದು, ಇದರಲ್ಲಿ 6,62,267 ಜನರು ಜಾಬ್ ಕಾರ್ಡ್ ಹೊಂದಿದ್ದಾರೆ.
ಉದ್ಯೋಗ ಖಾತರಿ ಯೋಜನೆಯಡಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದುಡಿಯುವ ಕೂಲಿಕಾರರಿಗೆ ಕೆಲಸ ನೀಡುವ ಹಿನ್ನೆಲೆಯಲ್ಲಿ ನಿತ್ಯ ಲಕ್ಷ ಜನರು ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಲಾಗುತ್ತಿದ್ದು, ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಮಾನವ ದಿನಗಳು ಸೃಷ್ಟಿ ಮಾಡಲಾಗಿದೆ ಅಂತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು.
ಇನ್ನೂ ವಲಸೆ ಹೋಗಿ, ವಾಪಸ್ ಬಂದವರಿಗೆ ಕೆಲಸ ನೀಡಬೇಕಾಗಿರುವ ಒತ್ತಾಯದ ಹಿನ್ನೆಲೆಯಲ್ಲಿ ಜಾಬ್ ಕಾರ್ಡ್ ಇಲ್ಲದವರಿಗೆ ಜಾಬ್ ಕಾರ್ಡ್ ನೀಡಲಾಗುತ್ತಿದೆ. ಕಳೆದ 2020 ಏ.1ರಿಂದ ಮೇ.27ರವರೆಗೆ 4,303 ಕುಟುಂಬಗಳಿಗೆ, 11, 933 ಹೊಸ ಜಾಬ್ ಕಾರ್ಡ್ಗಳನ್ನ ನೀಡಲಾಗಿದೆ.
ಆದ್ರೆ, ಕೆಲವೊಂದು ಗ್ರಾಮ ಪಂಚಾಯಿತಿ ಸರಿಯಾಗಿ ಜಾಬ್ ಕಾರ್ಡ್ ಮತ್ತು ಕೆಲಸ ನೀಡುತ್ತಿಲ್ಲ ಎನ್ನುವ ದೂರುಗಳು ಸಹ ಇವೆ. ಇದರ ಮಧ್ಯ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡಿದ್ದು, ಕೂಲಿಯನ್ನ ಸಮಯಕ್ಕೆ ಸರಿಯಾಗಿ ಪಾವತಿಸಬೇಕಾಗಿದೆ.