ರಾಯಚೂರು: ಕಾರ್ಮಿಕರಿಗೆ ಪಿಎಫ್ ,ಇಎಸ್ಐ ಹಾಗೂ ಕಟ್ಟಡ ಕಾರ್ಮಿಕರಿಗೆ ವಿವಾಹ, ಮರಣ ಸಹಾಯಧನ, ಶೈಕ್ಷಣಿಕ ಸಹಾಯಧನ ಸೇರಿದಂತೆ ವಿವಿಧ ಸೌಲಭ್ಯ ನೀಡುವಲ್ಲಿ ಕಾರ್ಮಿಕರ ಇಲಾಖಾಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದ್ದನ್ನು ಖಂಡಿಸಿ ಅಧಿಕಾರಿಗಳಿಗೆ ಕಾರ್ಮಿಕರ ಇಲಾಖೆಯ ರಾಜ್ಯ ಕಾರ್ಯದರ್ಶಿ ಕ್ಯಾ.ಮಣಿವಣ್ಣನ್ ಅವರು ತರಾಟೆಗೆ ತೆಗೆದುಕೊಂಡರು.
ನಗರದ ಮಂತ್ರಾಲಯ ರಸ್ತೆಯಲ್ಲಿನ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರ ದೂರು ಆಲಿಸಿ ವಿಳಂಬ ಧೊರಣೆಗೆ ಕಾರಣ ಕೇಳಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.
ನಗರಸಭೆ ಪೌರಾಯುಕ್ತರಿಗೆ ವಾರ್ನಿಂಗ್
ಸಭೆಯಲ್ಲಿ ನಗರಸಭೆ ಕಾರ್ಮಿರೊಬ್ಬರು ದಿನಗೂಲಿ ನೌಕರನಾದ ನನ್ನ ವೇತನದಲ್ಲಿ ಇಎಸ್ಐ ,ಪಿಎಫ್ ಕಟ್ ಮಾಡಿದರೂ ನನಗೆ ಸೌಲಭ್ಯ ಸಿಗುತ್ತಿಲ್ಲ ಎಂದು ದೂರಿದರು. ಇದಕ್ಕೆ ಪಿಎಫ್ ಕಚೇರಿ ಅರುಣ್ ಪ್ರತಿಕ್ರಿಯಿಸಿ ನಗರಸಭೆಯಿಂದ ಕಾರ್ಮಿಕರ ಮಾಹಿತಿ ನೀಡದ ಕಾರಣ ಕಾನೂನು ತೊಡಕಾಗಿದೆ ಎಂದರು ಇದಕ್ಕೆ ಕಾರ್ಯದರ್ಶಿಗಳು ಕಾರಣ ಕೆಳಿದಾಗ ನಾನು ಮೂರು ತಿಂಗಳ ರಜೆಯಲ್ಲಿದ್ದೆ, ನಿನ್ನೆ ಸೇರ್ಪಡೆ ಆಗಿದ್ದು ಪರಿಶೀಲನೆ ನಡೆಸಿ ಪಿಎಫ್ ಕಚೇರಿಗೆ ಸಲ್ಲಿಸುತ್ತೇವೆಂದು ನಗರಸಭೆ ಪೌರಾಯುಕ್ತ ರಮೇಶ ನಾಯಕ ಹೇಳದರು, ಕೂಡಲೇ ಆ ಕೆಲ್ಸಾ ಮಾಡಿ ಇಲ್ಲದೇ ಹೋದಲ್ಲಿ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸುತ್ತೇನೆಂದು ವಾರ್ನ್ ಮಾಡಿದರು.
ಸಭೆಯ ಆರಂಭದಲ್ಲಿ ಸಿಂದನೂರಿನ ಕಾರ್ಮಿಕನೊಬ್ಬ ಮಾತನಾಡಿ, ಹಲವಾರು ವರ್ಷಗಳಿಂದ ಸ್ಥಳೀಯ ರೈಸ್ ಮಿಲ್ನಲ್ಲಿ ಕೆಲಸ ಮಾಡುತ್ತಾ ಬಂದರೂ ಕೂಡ ಕೇವಲ 5 ಸಾವಿರ ವೇತನ ನೀಡಲಾಗುತ್ತಿದೆ ಹಾಗೂ ಹಲವು ಮೋಸ ಮಾಡಲಾಗುತ್ತುದೆ ಎಂದಾಗ ಈ ಕುರಿತು ಪರಿಶೀಲನೆ ನಡೆಸಿ ಮಿಲ್ ಮಾಲಿಕನಿಗೆ ನೋಟಿಸ್ ನೀಡಿ ಎಂದು ಕಾರ್ಮಿಕ ಅಧಿಕಾರಿ ಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ರಾಯಚೂರು ತಾಲೂಕಿನ ಮರ್ಚೆಟ್ಹಾಳ ಗ್ರಾಮದ ವಿಧವೆ ಹನುಮಂತಿ ಮಾತನಾಡಿ, ತನ್ನ ಪತಿ ಕಳೆದ ವರ್ಷ ಕಟ್ಟಡ ಕೆಲಸಕ್ಕೆ ಹೋಗಿ ದಾರಿಮಧ್ಯೆ ಅಪಘಾತದಲ್ಲಿ ಮೃತಪಟ್ಟರು ಕೂಡ ಪರಿಹಾರ ನೀಡಿಲ್ಲ ಎಂದು ದೂರಿದರು. ಇದಕ್ಕೆ ಕಾರ್ಮಿಕರ ಇಲಾಖೆಯ ಅಧಿಕಾರಿಗಳಿಗೆ ಕಾರಣ ಕೇಳಿದಾಗ ಕೆಲಸಕ್ಕೆ ಹೋಗಿ ಬರುವಾಗ ಸಾವನ್ನಪ್ಪಿದ ಕಾರಣ ಕೆಲ ನಿಯಮ ಅಡೆ ತಡೆಯಾಗುತ್ತದೆ ಎಂದಾಗ, ಕಾರ್ಮಿಕ ಕಾನೂನು ತಿದ್ದುಪಡಿ ಗಮನಿಸಿ ಸೌಲಭ್ಯಕ್ಕೆ ಅರ್ಹರು ಎಂದು ಸ್ಥಳದಲ್ಲಿಯೇ ರೂ.2 ಲಕ್ಷದ ಚೆಕ್ ಬರೆದು ಗ್ರಾಮೀಣ ಶಾಸಕ ದದ್ದಲ್ ಬಸವನಗೌಡ ಅವರಿಂದ ಮೃತ ವ್ಯಕ್ತಿಯ ಪಡೆದ ಪತ್ನಿ ಹನುಮಂತಿಗೆ ನೀಡಿದರು.