ETV Bharat / state

'ಅರ್ಧ ಕಾಂಗ್ರೆಸ್‌ ಮುಳುಗಿಸಿದ್ರೇ, ಬಿಜೆಪಿ ಇಡೀ ದೇಶವನ್ನೇ ಮುಳುಗಿಸಿತು.. '

ಕಾರ್ಪೊರೇಟ್ ಕಂಪನಿಗಳಿಗೆ ಮಣೆ ಹಾಕಿದ್ದೇ ಕಾಂಗ್ರೆಸ್. ಎಲ್ಲಾ ಪಕ್ಷಗಳ ಧೋರಣೆ ಒಂದೇ ಆಗಿದೆ ಎಂದು ಟೀಕಾ ಪ್ರಹಾರ ನಡೆಸಿದರು. ಈ ವೇಳೆ ಪ್ರತಿಭಟನೆಗೆ ಬೆಂಬಲಿಸಿ, ಭಾಗವಹಿಸಿದ ಕಾಂಗ್ರೆಸ್ ನಾಯಕರಿಗೆ ಇರುಸು ಮುರುಸು ಉಂಟಾಗಿ ಆಕ್ರೋಶ ವ್ಯಕ್ತಪಡಿಸಿದರು..

raichur
ಪ್ರತಿಭಟನೆ
author img

By

Published : Dec 8, 2020, 3:03 PM IST

ರಾಯಚೂರು : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ಬಂದ್ ಬೆಂಬಲಿಸಿ ರಾಯಚೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೆಲ ಸಮಯ ಗೊಂದಲದ ವಾತಾವರಣ ಉಂಟಾಗಿರುವ ಪ್ರಸಂಗ ನಡೆಯಿತು.

ಪ್ರತಿಭಟನೆಯಲ್ಲಿ ಕೆಲ ಸಮಯ ಗೊಂದಲದ ವಾತಾವರಣ

ನಗರದ ಅಂಬೇಡ್ಕರ್ ಸರ್ಕಲ್​ನಲ್ಲಿ ಬಿಎಸ್ಎನ್‌ಎಲ್ ನಿವೃತ್ತಿ ನೌಕರರ ಹಾಗೂ ಯೂನಿಯನ್ ಮುಖಂಡ ಲಾಲಪ್ಪ ಹೋರಾಟದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಭಾಷಣದಲ್ಲಿ ಈ ಹಿಂದೆ ದೇಶವನ್ನು ಆಳ್ವಿಕೆ ನಡೆಸಿದ ಕಾಂಗ್ರೆಸ್ ಅರ್ಧ ಸರ್ವನಾಶ ಮಾಡಿದ್ರೆ, ಈಗ ಬಿಜೆಪಿ ಉಳಿದರ್ಧ ದೇಶವನ್ನು ನಾಶ ಮಾಡುತ್ತಿದೆ.

ಕಾರ್ಪೊರೇಟ್ ಕಂಪನಿಗಳಿಗೆ ಮಣೆ ಹಾಕಿದ್ದೇ ಕಾಂಗ್ರೆಸ್. ಎಲ್ಲಾ ಪಕ್ಷಗಳ ಧೋರಣೆ ಒಂದೇ ಆಗಿದೆ ಎಂದು ಟೀಕಾ ಪ್ರಹಾರ ನಡೆಸಿದರು. ಈ ವೇಳೆ ಪ್ರತಿಭಟನೆಗೆ ಬೆಂಬಲಿಸಿ, ಭಾಗವಹಿಸಿದ ಕಾಂಗ್ರೆಸ್ ನಾಯಕರಿಗೆ ಇರುಸು ಮುರುಸು ಉಂಟಾಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಮುಖವಾಡ ತೊಟ್ಟು ಪ್ರತಿಪಕ್ಷದವರಿಂದ ಪ್ರತಿಭಟನೆ: ಬಿ.ವೈ.ರಾಘವೇಂದ್ರ

ಬಿಎಸ್​ಎನ್​ಎಲ್ ನೌಕರರನ್ನು ತೆಗೆದಿದ್ದು, ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಿ ಎಂದು ತಾಕೀತು ಮಾಡಿದರು. ಆದರೆ ಇದಕ್ಕೊಪ್ಪದ ಲಾಲಪ್ಪ ನಾವು ಸತ್ಯ ಮಾತನಾಡುತ್ತೇವೆ ಎಂದರು. ಆದರೂ ಮೈಕ್ ಬಂದ್ ಮಾಡಿಸಿ ಹೋರಾಟಗಾರನ ಮಾತು ಮೊಟಕುಗೊಳಿಸಿದರು. ಇದರಿಂದ ಪ್ರತಿಭಟನೆಯಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.